ಭಾರತೀಯ ಮಹಿಳೆ ಕಮಲಾ ಹ್ಯಾರಿಸ್ ಅಮೆರಿಕ ಅಧ್ಯಕ್ಷರಾಗಲು ಸಾವಿರಾರು ಕೋಟಿ ರೂಪಾಯಿ ದೇಣಿಗೆ!
ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆಗಲು ಕ್ಷಣಗಣನೆ ಆರಂಭವಾಗಿದೆ. ಈ ಕಾರಣಕ್ಕೆ ಭಾರತೀಯರು ಕೂಡ ಕಮಲಾ ಅವರ ಪರವಾಗಿ ಪ್ರಚಾರ ಕಾರ್ಯ ಕೂಡ ಆರಂಭ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ವಿರುದ್ಧ ಪ್ರತಿಸ್ಪರ್ಧಿ ಆಗಿರುವ ಕಮಲಾ ಅವರ ಗೆಲುವಿಗೆ ಸಾವಿರಾರು ಕೋಟಿ ರೂಪಾಯಿ ದೇಣಿಗೆ ಹರಿದು ಬಂದಿದೆ. ಹಾಗಾದ್ರೆ ಅಮೆರಿಕ ಅಧ್ಯಕ್ಷರಾಗಲು ಭಾರತ ಮೂಲದ ಕಮಲಾ ಹ್ಯಾರಿಸ್ ಇನ್ನು ಎಷ್ಟು ಶ್ರಮ ಹಾಕಬೇಕಿದೆ? ಮುಂದೆ ಓದಿ.
ಡೊನಾಲ್ಡ್ ಟ್ರಂಪ್ ಅಮೆರಿಕದ ಶ್ರೀಮಂತ ಉದ್ಯಮಿ ಹಾಗೂ ಲಕ್ಷಾಂತರ ಕೋಟಿ ರೂಪಾಯಿ ಆಸ್ತಿ ಹೊಂದಿರುವ ವ್ಯಕ್ತಿ. ಆದರೆ, ಬಡವರ ಮನೆ ಮಗಳು ಅಂತಾನೇ ಫೇಮಸ್ ಆಗಿರುವ & ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ 4 ವರ್ಷ ಅಮೆರಿಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕಮಲಾಗೆ ಈ ಬಾರಿ ನೇರವಾಗಿ ಅಮೆರಿಕ ಅಧ್ಯಕ್ಷರಾಗುವ ಅವಕಾಶ ಬಂದಿದೆ. ಹೀಗಾಗಿ ಕಮಲಾ ಪರ ನೂರಾರು ಮಿಲಿಯನ್ ಡಾಲರ್ ಹಣವನ್ನ ದೇಣಿಗೆಯಾಗಿ ನೀಡಲಾಗಿದೆ.

ಟ್ರಂಪ್‌ಗೆ ಶುರುವಾಗಿದೆ ನಡುಕ?
2024ರ ನವೆಂಬರ್ ತಿಂಗಳಲ್ಲಿ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಗಿರುವ ಕಮಲಾ ಹ್ಯಾರಿಸ್ ಪರ ಒಂದೇ ವಾರದಲ್ಲಿ 200 ಮಿಲಿಯನ್ ಡಾಲರ್ ಅಂದ್ರೆ, ಭಾರತೀಯ ರೂಪಾಯಿ ಲೆಕ್ಕದಲ್ಲಿ ಬರೋಬ್ಬರಿ ₹1,674 ಕೋಟಿ ರೂಪಾಯಿ ಹಣ ಸಂಗ್ರಹ ಆಗಿದೆ. ಈ ಮೂಲಕ ಕಮಲಾ ಹ್ಯಾರಿಸ್ ಪರವಾಗಿ ಅಮೆರಿಕದಲ್ಲಿ ಯಾವ ಮಟ್ಟಿಗೆ ಹವಾ ಸೃಷ್ಟಿ ಆಗುತ್ತಿದೆ? ಎಂಬುದರ ಮಾಹಿತಿ ಸಿಗುತ್ತಿದೆ. 2024ರ ನವೆಂಬರ್ 5ಕ್ಕೆ ಮತದಾನ ನಡೆಯಲಿದ್ದು, ಈಗಾಗಲೇ ಟ್ರಂಪ್ ಎದೆ ನಡುಗುತ್ತಿದೆ ಎಂದು ವಿರೋಧಿಗಳು ಹೇಳುತ್ತಿದ್ದಾರೆ.
ಅಮೆರಿಕ ಉಳಿಸಲು ಭಾರತದ ಮಹಿಳೆ ಸಜ್ಜು?
ಜೋ ಬೈಡನ್ ಮತ್ತೊಂದು ಬಾರಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆಗುವ ನಿರೀಕ್ಷೆಯಲ್ಲೇ ಇದ್ದರು. ಆದರೆ ಜೋ ಬೈಡನ್ ತಮ್ಮ ಆಡಳಿತ ಅವಧಿಯಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ ಎಂಬ ಕೋಪ ಜನರಿಗೆ ಇದೆ. ಹೀಗಾಗಿ ಈ ಬಾರಿ ಮತ್ತೊಮ್ಮೆ ಜೋ ಬೈಡನ್ ಚುನಾವಣೆಗೆ ಸ್ಪರ್ಧೆ ಮಾಡಿದರೆ ಸಮಸ್ಯೆ ಗ್ಯಾರಂಟಿ ಎನ್ನಲಾಗಿತ್ತು. ಬೈಡನ್ ಸ್ಪರ್ಧೆ ಮಾಡಿದ್ದರೆ ಡೊನಾಲ್ಡ್ ಟ್ರಂಪ್ ಸುಲಭವಾಗಿ ಗೆಲ್ಲುತ್ತಾರೆ, ಇದೇ ಲೆಕ್ಕಾಚಾರ ಹಾಕಿಕೊಂಡು ಭಾರತ ಮೂಲದ ಹೆಣ್ಣು ಮಗಳು ಕಮಲಾ ಹ್ಯಾರಿಸ್‌ಗೆ ಅವಕಾಶ ನೀಡಲಾಗಿದೆ. 59 ವರ್ಷದ ಕಮಲಾ ಹ್ಯಾರಿಸ್ ಸದ್ಯ ಡೊನಾಲ್ಡ್ ಟ್ರಂಪ್ ಮೀರಿಸಿ ಅಮೆರಿಕ ಚುನಾವಣೆಯಲ್ಲಿ ಮುಂದೆ ನುಗ್ಗುತ್ತಿದ್ದಾರೆ.












Click it and Unblock the Notifications