ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಸಂಭಾವ್ಯ ಲಸಿಕೆಯಿಂದ ಕೊರೊನಾ ಸೋಂಕಿತರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳ

|
Google Oneindia Kannada News

ಫ್ರ್ಯಾಂಕ್‌ಫರ್ಟ್, ನವೆಂಬರ್ 02: 'ಕ್ಯೂರ್‌ ವಾಕ್‌' ಪ್ರಾಯೋಗಿಕ ಲಸಿಕೆಯಿಂದ ಮಾನವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದೆ ಎಂದು ಸಂಸ್ಥೆ ತಿಳಿಸಿದೆ.

ಜರ್ಮನ್ ಬಯೋಟೆಕ್ ಸೋಮವಾರ ಈ ಕುರಿತು ಮಾಹಿತಿ ನೀಡಿದೆ. ಸಾಮೂಹಿಕ ಪರೀಕ್ಷೆಯನ್ನು ನಡೆಸಲು ಮುಂದಾಗಿರುವುದಾಗಿ ತಿಳಿಸಿದೆ. ಬಯೋಟೆಕ್ ಸಂಸ್ಥೆಯು ಮೆಸೆಂಜರ್ ಆರ್‌ಎನ್‌ಎವಿಧಾನವನ್ನು ಬಳಸುತ್ತಿದೆ. ಇದು ಮಾಡೆರ್ನಾ ಮತ್ತು ಬಯೋ ಎನ್‌ಟೆಕ್ ಮತ್ತು ಅದರ ಪಾಲುದಾರ ಪಿಫೈಸರ್‌ನಂತೆಯೇ ಇರಲಿದೆ.

ವಂದೇ ಭಾರತ್ ವಿಮಾನದಲ್ಲಿ ವುಹಾನ್‌ಗೆ ಹೊರಟಿದ್ದ 19 ಭಾರತೀಯರಿಗೆ ಕೊರೊನಾ ಸೋಂಕು ವಂದೇ ಭಾರತ್ ವಿಮಾನದಲ್ಲಿ ವುಹಾನ್‌ಗೆ ಹೊರಟಿದ್ದ 19 ಭಾರತೀಯರಿಗೆ ಕೊರೊನಾ ಸೋಂಕು

ಸಿವಿಎನ್ ಕೋವ್ ಎಂದು ಕರೆಯಲ್ಪಡುವ ಸಂಭಾವ್ಯ ಲಸಿಕೆ ಉತ್ತಮ ಫಲಿತಾಂಶ ನೀಡಿದೆ.ವರ್ಷಾಂತ್ಯಕ್ಕೂ ಮೊದಲು 30 ಸಾವಿರ ಮಂದಿ ಮೇಲೆ ಪ್ರಯೋಗ ನಡೆಸಲಾಗುತ್ತದೆ.

This Covid Vaccine Triggered Immune Response In Humans

ಕ್ಯೂರ್‌ವಾಕ್ ಲಸಿಕೆಗೆ ಜರ್ಮನಿಯ ಬಯೋಟೆಕ್ ಡಯಟ್‌ಮಾರ್ ಹಾಪ್ ಮತ್ತು ಗೇಟ್ಸ್ ಫೌಂಡೇಶನ್ ಮತ್ತು ಗ್ಲಾಕ್ಸೊ ಸ್ಮಿತ್‌ಕ್ಲೈನ್ ಹೂಡಿಕೆ ಮಾಡಿದೆ.

ಸ್ವಯಂ ಸೇವಕರು ಈ ಲಸಿಕೆಯಿಂದ ಕೊರೊನಾದಿಂದ ಮುಕ್ತಿ ಹೊಂದಿದ್ದು ಅವರಲ್ಲಿ ಪ್ರತಿಕಾಯಗಳು ಅಭಿವೃದ್ಧಿಗೊಂಡಿವೆ.ಈ ವರ್ಷಾಂತ್ಯಕ್ಕೆ COVID-19 ಲಸಿಕೆ ಸಿದ್ಧವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಮುಖ್ಯಸ್ಥರು ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗದ ಕುರಿತು ಅದರ ಕಾರ್ಯನಿರ್ವಾಹಕ ಮಂಡಳಿಯ ಎರಡು ದಿನಗಳ ಸಭೆಯ ಅಂತ್ಯವನ್ನು ಉದ್ದೇಶಿಸಿ ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಹೀಗೆ ಹೇಳಿದರು, "ನಮಗೆ ಲಸಿಕೆಗಳು ಬೇಕಾಗುತ್ತವೆ ಮತ್ತು ಈ ವರ್ಷದ ಅಂತ್ಯದ ವೇಳೆಗೆ ನಮಗೆ ಲಸಿಕೆ ಸಿಗಬಹುದೆಂಬ ಭರವಸೆ ಇದೆ' ಎಂದು ತಿಳಿಸಿದರು.

ಡಬ್ಲ್ಯುಎಚ್‌ಒ ನೇತೃತ್ವದ ಕೋವಾಕ್ಸ್ ಜಾಗತಿಕ ಲಸಿಕೆ ಸೌಲಭ್ಯದ ಒಂಬತ್ತು ಪ್ರಾಯೋಗಿಕ ಲಸಿಕೆಗಳು 2021 ರ ಅಂತ್ಯದ ವೇಳೆಗೆ 2 ಬಿಲಿಯನ್ ಪ್ರಮಾಣವನ್ನು ವಿತರಿಸುವ ಗುರಿಯನ್ನು ಹೊಂದಿವೆ ಎಂದರು.

English summary
CureVac's experimental COVID-19 vaccine triggered an immune response in humans, the German biotech firm said on Monday, putting it on track to start mass testing this year as the race to end the pandemic heats up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X