ವಿಶ್ವದ ಪ್ರಬಲ ಪಾಸ್‌ಪೋರ್ಟ್ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?
ವಿಶ್ವದಲ್ಲಿ ಅತ್ಯಂತ ಪ್ರಬಲ ಪಾಸ್‌ಪೋರ್ಟ್ ಹೊಂದಿರುವ ದೇಶದಗಳಲ್ಲಿ ಜಪಾನ್ ಮೊದಲಿದೆ.
ಹೆನ್ಲೆ ಪಾಸ್‌ಪೋರ್ಟ್ ಸೂಚ್ಯಂಕ ಎಂಬುದು ಆ ರೀತಿ ವಿಶ್ವದ ಎಲ್ಲ ಪಾಸ್ಪೋರ್ಟ್ಗಳನ್ನು ಅಳೆದು, ಅದಕ್ಕೊಂದು ಶ್ರೇಯಾಂಕ ನೀಡುವಂಥ ಒರಿಜಿನಲ್, ಅಧಿಕಾರಯುತ ಸೂಚ್ಯಂಕವಾಗಿದೆ.
ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆಯಿಂದ (ಐಎಟಿಎ) ಪಡೆದ ಮಾಹಿತಿಗಳ ಆಧಾರದಲ್ಲಿ ಹೆನ್ಲಿ & ಪಾರ್ಟ್ನರ್ಸ್ ಈ ಪಾಸ್‌ಪೋರ್ಟ್ ಸೂಚ್ಯಂಕ ಸಿದ್ಧಪಡಿಸಿದೆ. ಪ್ರತಿ ದೇಶಗಳ ಪಾಸ್‌ಪೋರ್ಟ್ ಹೊಂದಿರುವವರು ಯಾವುದೇ ಪೂರ್ವ ವೀಸಾ ಇಲ್ಲದೆ ಎಷ್ಟು ದೇಶಗಳಿಗೆ ಭೇಟಿ ನೀಡಬಹುದು ಎಂಬ ಲೆಕ್ಕದ ಆಧಾರದಲ್ಲಿ ಈ ಸೂಚ್ಯಂಕ ರೂಪಿಸಲಾಗಿದೆ.

ಜಗತ್ತಿನ ಕಳಪೆ ಪಾಸ್‌ಪೋರ್ಟ್‌ಗಳು ಯಾವುವು?
ಅಫ್ಘಾನಿಸ್ತಾನ- 26 ಇರಾಕ್- 28 ಸಿರಿಯಾ- 29 ಪಾಕಿಸ್ತಾನ 31, ಯೆಮನ್- 33, ಸೊಮೇಲಿಯಾ- 34 ಲಿಬಿಯಾ- 37 ನೇಪಾಳ ಪ್ಯಾಲೆಸ್ಟೀನ್ ಪ್ರದೇಶ- 37, ಉತ್ತರ ಕೊರಿಯಾ- 39 ಕೊಸೋವೊ, ಬಾಂಗ್ಲಾದೇಶ-40.
ಈ ಸೂಚ್ಯಂಕವು ಅಂತರರಾಷ್ಟ್ರೀಯ ವಾಯು ಸಾರಿಗೆ ಒಕ್ಕೂಟದ (IATA) ಎಕ್ಸ್ಕ್ಲೂಸಿವ್ ಆದ ಡೇಟಾ ಆಧಾರದಲ್ಲಿ ನಿಂತಿದೆ. ಇತ್ತೀಚಿನ ಶ್ರೇಯಾಂಕವು ಗ್ಲೋಬಲ್ ಮೊಬಿಲಿಟಿ ರಿಪೋರ್ಟ್ 2021 Q4ದಲ್ಲಿ ದೊರೆಯುತ್ತದೆ. ಇದು 199 ಪಾಸ್‌ಪೋರ್ಟ್‌ಗಳು ಮತ್ತು 227 ಸ್ಥಳಗಳಲ್ಲಿ ಕಾಣುತ್ತದೆ.
ಕಳೆದ ವರ್ಷ 84 ಸ್ಥಾನದಲ್ಲಿದ್ದ ಭಾರತ ಈ ವರ್ಷ 90ನೇ ಸ್ಥಾನಕ್ಕೆ ಕುಸಿದಿದೆ.
*ಜಪಾನ್ ಮತ್ತು ಸಿಂಗಾಪೂರ್ ತಲಾ 192 ಪಾಯಿಂಟ್ಗಳೊಂದಿಗೆ ಮೊದಲ ಸ್ಥಾನದಲ್ಲಿದೆ.
*ಜರ್ಮನಿ ಮತ್ತು ದಕ್ಷಿಣ ಕೊರಿಯಾ 190 ಪಾಯಿಂಟ್ಸ್ನೊಂದಿಗೆ ಎರಡನೇ ಸ್ಥಾನ
*ಫಿನ್ಲ್ಯಾಂಡ್, ಇಟಲಿ, ಲಕ್ಸೆಂಬರ್ಗ್ ಮತ್ತು ಸ್ಪೇನ್ ತಲಾ 189 ಪಾಯಿಂಟ್ಸ್ನೊಂದಿಗೆ ಮೂರನೇ ಸ್ಥಾನ
* ಆಸ್ಟ್ರಿಯಾ, ಡೆನ್ಮಾರ್ಕ್ ತಲಾ 188 ಪಾಯಿಂಟ್ಸ್ನೊದಿಗೆ ನಾಲ್ಕನೇ ಸ್ಥಾನ
*ಫ್ರಾನ್ಸ್, ಐರ್ಲೆಂಡ್, ನೆದರ್ಲ್ಯಾಂಡ್ಸ್, ಪೋರ್ಚುಗಲ್ ಮತ್ತು ಸ್ವೀಡನ್ ತಲಾ 187 ಪಾಯಿಂಟ್ಸ್ನೊಂದಿಗೆ ಐದನೇ ಸ್ಥಾನ
* ಬೆಲ್ಜಿಯಂ, ನ್ಯೂಜಿಲ್ಯಾಂಡ್, ಸ್ವಿಟ್ಜರ್ಲೆಂಡ್ ತಲಾ 186 ಪಾಯಿಂಟ್ಸ್ - ಆರನೇ ಸ್ಥಾನ
* ಜೆಕ್ ರಿಪಬ್ಲಿಕ್, ಗ್ರೀಸ್, ಮಾಲ್ಟಾ, ನಾರ್ವೆ, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ 185 ಪಾಯಿಂಟ್ಸ್- ಏಳನೇ ಸ್ಥಾನ
* ಆಸ್ಟ್ರೇಲಿಯಾ, ಕೆನಡಾ ತಲಾ 184 ಪಾಯಿಂಟ್ಸ್ ಜತೆ ಎಂಟನೇ ಸ್ಥಾನ
* 183 ಪಾಯಿಂಟ್ಸ್ನೊಂದಿಗೆ ಹಂಗೇರಿ 9ನೇ ಸ್ಥಾನ
*ಲಿಥುವೇನಿಯಾ, ಪೋಲೆಂಡ್, ಸ್ಲೊವಾಕಿಯಾ ಹತ್ತನೇ ಸ್ಥಾನದಲ್ಲಿದ್ದು, ತಲಾ 182 ಪಾಯಿಂಟ್ಸ್ ಇದೆ
* ಕಳೆದ ವರ್ಷ 84 ಸ್ಥಾನದಲ್ಲಿ ಇದ್ದ ಭಾರತ ಈ ವರ್ಷ 90ನೇ ಸ್ಥಾನಕ್ಕೆ ಇಳಿದಿದೆ. 58 ಪಾಯಿಂಟ್ಸ್ನೊಂದಿಗೆ ಬುರ್ಕಿನಾ ಫಾಸೋ, ತಜಕಿಸ್ತಾನ್ ಜತೆ ಹಂಚಿಕೊಂಡಿದೆ.












Click it and Unblock the Notifications