ಭೀಕರ ಯುದ್ಧದ ನಡುವೆ ಗುಡ್ ನ್ಯೂಸ್, ಹಿಂಸಾಚಾರ ನಿಲ್ಲುತ್ತಾ?

ರಷ್ಯಾ VS ಉಕ್ರೇನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಇನ್ನೇನು ಮುಂದಿನ ತಿಂಗಳು ಅಂದ್ರೆ, ಫೆಬ್ರವರಿಗೆ ಬರೋಬ್ಬರಿ 2 ವರ್ಷ ಪೂರೈಸಲಿದೆ. ಹೀಗಿದ್ದರೂ ಯುದ್ಧ ನಿಲ್ಲುತ್ತಿಲ್ಲ ಎನ್ನುವ ಭಯ ಆವರಿಸಿದೆ. 2022ರಲ್ಲಿ ಈ ಯುದ್ಧ ಶುರುವಾದ ಸಮಯದಲ್ಲಿ ಕೇವಲ 10 ಅಥವಾ 20 ದಿನದಲ್ಲಿ ಯುದ್ಧ ನಿಲ್ಲುತ್ತೆ ಅನ್ನೋ ಮಾತು ಕೇಳಿಬಂದಿತ್ತು. ಆದರೆ ಆಗಿದ್ದು ಮಾತ್ರ ಬೇರೆ, ಹೀಗೆ ರಷ್ಯಾ VS ಉಕ್ರೇನ್ ಯುದ್ಧ 2 ವರ್ಷ ಪೂರೈಸುತ್ತಿರುವ ಸಮಯಕ್ಕೇ ಮಹತ್ವದ ಸುದ್ದಿ ಹೊರಬಿದ್ದಿದೆ!

ಹೌದು, 2022ರ ಫೆಬ್ರವರಿ ತಿಂಗಳಲ್ಲಿ ಆರಂಭವಾದ ರಷ್ಯಾ & ಉಕ್ರೇನ್ ಯುದ್ಧವು ಧಗಧಗಿಸ್ತಿದೆ. ಈಗಾಗಲೇ ಲಕ್ಷಾಂತರ ಜನರ ಬಲಿ ತೆಗೆದುಕೊಂಡಿರುವ ಈ ಯುದ್ಧವು ತಣ್ಣಗಾಗುತ್ತಿಲ್ಲ. ಇದೇ ಸಮಯದಲ್ಲಿ ರಷ್ಯಾ ಕೂಡ ತನ್ನ ದಾಳಿ ಮತ್ತಷ್ಟು ಭೀಕರಗೊಳಿಸಿ, ಶತ್ರು ಮೇಲೆ ಎರಗುತ್ತಿದೆ. ಹೀಗೆ ಪರಿಸ್ಥಿತಿ ಇನ್ನೇನು ಕೈಮೀರಿ ಹೋಗುತ್ತಿದೆ ಎನ್ನುವಾಗ ಇದೋ ಇಲ್ಲೊಂದು ಸಿಹಿಸುದ್ದಿ ಹೊರಬಿದ್ದಿದೆ. ಖುದ್ದು ಉಕ್ರೇನ್ ಅಧ್ಯಕ್ಷರೇ ಈ ವಿಚಾರ ತಿಳಿಸಿದ್ದಾರೆ. ಹಾಗಾದರೆ ಏನದು ಸಿಹಿಸುದ್ದಿ? ರಷ್ಯಾ & ಉಕ್ರೇನ್ ಯುದ್ಧ ನಿಂತು ಹೋಗುತ್ತಾ? ಬನ್ನಿ ತಿಳಿಯೋಣ.

The War Prisoners Has Been Exchanged Between Ukraine And Russia

400ಕ್ಕೂ ಹೆಚ್ಚು ಕೈದಿಗಳು...

ಹೌದು, ಹೊಸ ವರ್ಷದ ಸಮಯದಲ್ಲೇ ರಷ್ಯಾ ಹಾಗೂ ಉಕ್ರೇನ್ ನಾಯಕರು ಮಾತುಕತೆ ನಡೆಸಲು ಮುಂದೆ ಬಂದಂತೆ ಕಾಣುತ್ತಿದೆ. ಇದರ ಪ್ರತಿಫಲ ಎನ್ನುವಂತೆ, ಯುದ್ಧ ಕೈದಿಗಳ ವಿನಿಮಯ ಒಪ್ಪಂದದಲ್ಲಿ ರಷ್ಯಾ ಹಾಗೂ ಉಕ್ರೇನ್‌ ಮಹತ್ವದ ಗೆಲುವು ಸಾಧಿಸಿವೆ. 200ಕ್ಕೂ ಹೆಚ್ಚು ಕೈದಿಗಳನ್ನು ಪರಸ್ಪರ ಬಿಡುಗಡೆ ಮಾಡಲಾಗಿದೆ. ಅರಬ್ ರಾಷ್ಟ್ರದ ಮಧ್ಯಸ್ಥಿಕೆಯಲ್ಲಿ ಯುದ್ಧ ಕೈದಿಗಳ ವಿನಿಮಯ ಒಪ್ಪಂದ ಏರ್ಪಟ್ಟಿದೆ ಎಂದು ಮಾಹಿತಿ ನೀಡಲಾಗಿದೆ. ಇನ್ನು, ಈ ಬಗ್ಗೆ ಉಕ್ರೇನ್ ಅಧ್ಯಕ್ಷನೇ ಖುದ್ದಾಗಿ ಪೋಸ್ಟ್ ಹಾಕಿ ಮಾಹಿತಿ ನೀಡಿದ್ದಾರೆ.

ಉಕ್ರೇನ್ ಅಧ್ಯಕ್ಷ ಹೇಳಿದ್ದು ಏನು?

ಅಂದಹಾಗೆ ಈ ಬಗ್ಗೆ ಉಕ್ರೇನ್ ಅಧ್ಯಕ್ಷ ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿದ್ದು 'ಉಕ್ರೇನ್‌ನ 213 ಸೈನಿಕರು, 11 ಅಧಿಕಾರಿಗಳು & 6 ನಾಗರಿಕರನ್ನ ರಷ್ಯಾ ಬಿಡುಗಡೆಗೊಳಿಸಿದ್ದು, ಅವರೆಲ್ಲರೂ ಉಕ್ರೇನ್‌ಗೆ ವಾಪಸ್ ಬಂದಿದ್ದಾರೆ. ಈ ಕಾರ್ಯ ಸಾಧಿಸಲು ಬೆಂಬಲ ನೀಡಿದ ಎಲ್ಲರಿಗೆ ಈ ಮೂಲಕ ಧನ್ಯವಾದ' ಎಂದು ಪೋಸ್ಟ್ ಹಾಕಿದ್ದಾರೆ. ಇದೇ ಸಮಯದಲ್ಲಿ ಉಕ್ರೇನ್ ಕೂಡ 234 ರಷ್ಯಾದ ಸೈನಿಕರನ್ನು ಬಿಡುಗಡೆ ಮಾಡಿದೆ ಎನ್ನಲಾಗಿದೆ.

The War Prisoners Has Been Exchanged Between Ukraine And Russia

ಒಟ್ನಲ್ಲಿ ರಷ್ಯಾ & ಉಕ್ರೇನ್ ಯುದ್ಧಕ್ಕೆ ಒಂದು ಅಂತ್ಯ ಹಾಡಬೇಕಿದೆ. ಇಲ್ಲವಾದಲ್ಲಿ ಯುದ್ಧ ಭವಿಷ್ಯದಲ್ಲಿ ಘೋರ ವಿನಾಶಕ್ಕೆ ನಾಂದಿ ಹಾಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಇದೀಗ ಭಾರಿ ಚರ್ಚೆ ಶುರುವಾಗಿದ್ದು, 2 ವರ್ಷ ತುಂಬುವ ಮೊದಲೇ ಯುದ್ಧ ನಿಲ್ಲಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+