• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮರುಹುಟ್ಟು ನೀಡಿದ ಪ್ರಿಯತಮೆಯ ಆ ಮೊದಲ 'ಮುತ್ತಿನ' ಮ್ಯಾಜಿಕ್!

By ಯಶೋಧರ ಪಟಕೂಟ
|

ಸಾಂತಾ ಕ್ರೂಸ್ (ಕ್ಯಾಲಿಫೋರ್ನಿಯಾ), ಸೆಪ್ಟೆಂಬರ್ 21 : ತನ್ನ ಗೆಳತಿಯೊಂದಿಗೆ ಮೊದಲನೇ ಬಾರಿ ಡೇಟಿಂಗ್ ಗೆ ಹೋಗಿದ್ದಾಗ 'ಸಾವು' ಆತನನ್ನು ಮುತ್ತಿಡಲು ಕಾದು ಕುಳಿತಿತ್ತು. ಆದರೆ, ಮೊದಲನೇ 'ಮುತ್ತೇ' ಆತ ಬದುಕುವಂತೆ ಮಾಡಿದ್ದು ಈ ಅಪರೂಪದ ಲವ್ ಸ್ಟೋರಿಯ ಇಂಟ್ರೆಸ್ಟಿಂಗ್ ಸಂಗತಿ.

ಪಕ್ಕಾ ಸಿನಿಮೀಯ ರೀತಿಯಲ್ಲಿ ಸಾವು-ಬದುಕಿನ ಈ ಘಟನೆ ನಡೆದಿದ್ದು, ವಿಧಿಯ ಲೀಲೆಯಿಂದಾಗಿ ಪವಾಡಸದೃಶ ರೀತಿಯಲ್ಲಿ ಪ್ರಿಯತಮ, ಪ್ರಿಯತಮೆಯಿಂದಾಗಿ ಜೀವದಾನ ಪಡೆದಿದ್ದು, ಕಡೆಗೆ ಒಂದು ಸಂಸ್ಥೆಯನ್ನೇ ಹುಟ್ಟುಹಾಕುವಂತಾಗಿದೆ. ಈ ಘಟನೆಯನ್ನು ಟುಡೇ ಪತ್ರಿಕೆ ಪ್ರಕಟಿಸಿದೆ.

ಭಾರತದಲ್ಲಿ ಶೇ.50ರಷ್ಟು ಹೃದ್ರೋಗ ಹೆಚ್ಚಳ, ಇಲ್ಲಿವೆ ಪ್ರಮುಖ ಕಾರಣ

ಅಮೆರಿಕದಲ್ಲಿ ಪ್ರೀತಿ ಪ್ರೇಮದಲ್ಲಿ ತೊಡಗಲು, ಮದುವೆಯಾಗಲು ಯಾವುದೇ ವಯಸ್ಸಿನ ಹಂಗಿಲ್ಲ. ಹಾಗೆಯೆ, ಜೀವನಸಂಗಾತಿಯ ಹುಡುಕಾಟದಲ್ಲಿದ್ದ 56 ವರ್ಷದ ಮಾಂಟ್ಗೊಮೆರಿ ಡೇಟಿಂಗ್ ಗೆ ಆಯ್ದುಕೊಂಡಿದ್ದು 45 ವರ್ಷದ ಅನಸ್ತೀಶಿಯಾ ತಜ್ಞೆ ಡಾ. ಆಂಡಿ ಟ್ರೇನರ್ ಅವರನ್ನು.

ಒಬ್ಬರಿಗೊಬ್ಬರು ಒಂದು ಮುತ್ತನ್ನೂ ಕೊಟ್ಟಿರಲಿಲ್ಲ

ಒಬ್ಬರಿಗೊಬ್ಬರು ಒಂದು ಮುತ್ತನ್ನೂ ಕೊಟ್ಟಿರಲಿಲ್ಲ

ಮಾಂಟ್ಗೊಮೆರಿ ಅವರ ಮನೆಯ ಬಳಿಯಲ್ಲಿದ್ದ ಬೀಚ್ ಗೆ ಇಬ್ಬರೂ ಸುತ್ತಾಡಿ, ಒಬ್ಬರನ್ನೊಬ್ಬರು ಅರಿಯಲು ಹೋಗಿದ್ದಾರೆ. ಸಮುದ್ರದ ಅಲೆಯ ಮೇಲೆ ತೇಲಾಡಿ ವಾಪಸ್ ಬರುತ್ತಿದ್ದಾಗ... ಈ ಸಂತೋಷದ ಘಳಿಗೆಯಲ್ಲಿ ಯಮಧರ್ಮರಾಯ ಅದೆಲ್ಲಿಯೋ ಕಾದು ಕುಳಿತಿದ್ದ. ಒಬ್ಬರಿಗೊಬ್ಬರು ಇನ್ನೂ ಒಂದು ಮುತ್ತನ್ನೂ ಕೊಟ್ಟಿರಲಿಲ್ಲ, ಆಗಲೇ ಮಾಂಟ್ಗೊಮೆರಿ ಅವರಿಗೆ ಹೃದಯಾಘಾತವಾಗಿದೆ, ಸ್ಥಳದಲ್ಲಿಯೇ ಕುಸಿದುಬಿದ್ದಿದ್ದಾರೆ. ಡಾ. ಆಂಡಿಗೆ ಕೂಡ ಆಘಾತವಾದರೂ ಸಮಯಪ್ರಜ್ಞೆಯನ್ನು ಕಳೆದುಕೊಂಡಿಲ್ಲ.

ಆಂಡಿಯ 'ಮುತ್ತಿನಿಂದಾಗಿ' ಮರುಜೀವ

ಆಂಡಿಯ 'ಮುತ್ತಿನಿಂದಾಗಿ' ಮರುಜೀವ

ಸಂತಸದ ಘಳಿಗೆ ಹೀಗೆ ದುರಂತಕ್ಕೆ ದಾರಿ ಮಾಡಿಕೊಡುತ್ತದೆಂದು ಇಬ್ಬರೂ ಕನಸುಮನಸಿನಲ್ಲಿ ಎಣಿಸಿರಲಿಲ್ಲ. ಆದರೆ, ಪ್ರಸೂತಿ ಅರವಳಿಕೆ ತಜ್ಞೆ (obstetrical anesthesiologist) ಆಗಿರುವ ಟ್ರೇನರ್ ಅವರು ಸಮಯಪ್ರಜ್ಞೆಯಿಂದ cardiopulmonary resuscitation (CPR) ಅಂದರೆ ಬಾಯಿಗೆ ಬಾಯಿ ಹಚ್ಚಿ ಗಾಳಿಯನ್ನು ತುಂಬಿ, ಹೃದಯದ ಕೆಳಭಾಗದಲ್ಲಿ ಕ್ರಮಬದ್ಧವಾಗಿ ಒತ್ತುವ ಮೂಲಕ ಹೃದಯ ಮತ್ತೆ ಕೆಲಸ ಮಾಡುವಂತೆ ಮಾಡುವ ವಿಧಾನ ಅನುಸರಿಸಿದ್ದಾರೆ.

ಸತ್ಯವಾಗ್ಲೂ ಕಣ್ರೀ, ಹೃದ್ರೋಗಕ್ಕೆ ಅತ್ಯುತ್ತಮ ಪರಿಹಾರ ಮದುವೆಯಂತೆ!

ಬದುಕುಳಿದಿದ್ದಾರೆ ಮತ್ತು ಆರೋಗ್ಯವಂತರಾಗಿದ್ದಾರೆ

ಬದುಕುಳಿದಿದ್ದಾರೆ ಮತ್ತು ಆರೋಗ್ಯವಂತರಾಗಿದ್ದಾರೆ

ಇದನ್ನೆಲ್ಲ ನೋಡುತ್ತಿದ್ದ ಅಲೆಕ್ಸಾಂಡರ್ ಬೇಕರ್ ಎಂಬ ವಿಡಿಯೋಗ್ರಾಫರ್ ಅವರು ವಿಡಿಯೋ ರೆಕಾರ್ಡಿಂಗ್ ಮಾಡಿದ್ದಾರೆ. ಕೆಲ ಸಮಯದಲ್ಲಿಯೇ ಆಂಬ್ಯುಲೆನ್ಸ್ ಕೂಡ ಬಂದಿದೆ. ಈ ಪ್ರಯತ್ನ ನಡೆಯುತ್ತಿರುವಾಗಲೇ, ಮಾಂಟ್ಗೊಮೆರಿ ಯಾರೆಂದೇ ತಿಳಿಯದ ಆಂಡಿಯ 'ಮುತ್ತಿನಿಂದಾಗಿ' ಮರುಜೀವ ಪಡೆದಿದ್ದಾರೆ. ಅವರನ್ನು ಕೂಡಲೆ ಆಸ್ಪತ್ರೆಗೆ ಸೇರಿಸಿ ತಕ್ಷಣ ಬೈಪಾಸ್ ಸರ್ಜರಿ ಮಾಡಿದ್ದರಿಂದಾಗಿ ಮಾಂಟ್ಗೊಮೆರಿ ಬದುಕುಳಿದಿದ್ದಾರೆ ಮತ್ತು ಆರೋಗ್ಯವಂತರಾಗಿದ್ದಾರೆ.

ಮಾಂಟ್ಗೊಮೆರಿ ಅವರು ವೈದ್ಯೆಯನ್ನು ತನ್ನ ಡೇಟಿಂಗ್ ಗಾಗಿ ಆಯ್ದುಕೊಳ್ಳದಿದ್ದರೆ ಏನಾಗಿರುತ್ತಿತ್ತೋ? ಅಂತೂ ವಿಧಿಲೀಲೆಯೋ, ವೈದ್ಯೆಯ ಸಮಯಪ್ರಜ್ಞೆಯೋ, ಯಮಧರ್ಮರಾಯ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಕೋಣದ ಮೇಲೆ ಕುಳಿತು ವಾಪಸ್ ನರಕಕ್ಕೆ ಹೋಗಿದ್ದಾನೆ.

ಹೃದ್ರೋಗಿಯಾದರೂ ಕೈಬಿಡದ ಪ್ರಿಯತಮೆ

ಹೃದ್ರೋಗಿಯಾದರೂ ಕೈಬಿಡದ ಪ್ರಿಯತಮೆ

ತನ್ನನ್ನು ಭೇಟಿಯಾಗಲು ಡಾ. ಆಂಡಿ ಟ್ರೇನರ್ ಅವರು ಬಂದಾಗ, ಕೃತಜ್ಞತೆ ಅರ್ಪಿಸಿದ ಮಾಂಟ್ಗೊಮೆರಿ ಅವರು, ನಾನು ಹೃದ್ರೋಗಿಯಾಗಿದ್ದು, ಬೇಕಿದ್ದರೆ ನೀವು ಬೇರೆಯವರನ್ನು ಸಂಗಾತಿಯಾಗಿ ಆಯ್ದುಕೊಳ್ಳಬಹುದು ಎಂದಾಗ, ಇಲ್ಲ ನಾನು ನಿಮ್ಮೊಂದಿಗೇ ಜೀವನ ಕಳೆಯಲು ಬಯಸುತ್ತೇನೆ ಎಂದು ಹೇಳಿ ಮಾನವೀಯತೆ ಮೆರಿದಿದ್ದಾರೆ ಡಾ. ಆಂಡಿ. "ಆ ಮೊದಲ ಮುತ್ತಿನ ಮ್ಯಾಜಿಕ್ ನನಗೆ ಮರುಜೀವ ನೀಡಿದೆ. ನಾನೀಗ ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ. ನಾನು ನನ್ನ ಹೆಂಡತಿಗೆ ಎಂದೆಂದಿಗೂ ಕೃತಜ್ಞನಾಗಿರುತ್ತೇನೆ ಮತ್ತು ಆಕೆಯನ್ನು ಸಿಕ್ಕಾಪಟ್ಟೆ ಪ್ರೀತಿಸುತ್ತೇನೆ. ಹಾಗೆಯೆ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡಬಯಸುತ್ತೇನೆ" ಎಂದಿದ್ದಾರೆ ಮಾಂಟ್ಗೊಮೆರಿ.

16- 40ರ ವಯಸ್ಸಿನವರಲ್ಲಿ ಹೆಚ್ಚುತ್ತಿದೆ ಹೃದಯಾಘಾತ! ಯಾರು ಅಪಾಯದಲ್ಲಿ?

Paddle4Good ಲಾಭರಹಿತ ಸಂಸ್ಥೆಯ ಹುಟ್ಟು

Paddle4Good ಲಾಭರಹಿತ ಸಂಸ್ಥೆಯ ಹುಟ್ಟು

ಅಂದು ನಡೆದ ಆ ಘಟನೆಯನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ದಂಪತಿಗಳಿಬ್ಬರು Paddle4Good ಎಂಬ ಲಾಭರಹಿತ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಸಮುದ್ರದಲ್ಲಿ ಪುಟ್ಟ ಬೋಟಿನಲ್ಲಿ ಪ್ಯಾಡಲ್ ಮಾಡಬಯಸುವ ಜನರಿಗಾಗಿ cardiopulmonary resuscitation (CPR) ತಂತ್ರಗಾರಿಕೆಯ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಪ್ರತಿ 90 ಸೆಕೆಂಡಿಗೊಬ್ಬರು ಹೃದಯಾಘಾತದಿಂದ ಸಾವಿಗೀಡಾಗುತ್ತಿದ್ದಾರೆ. ಆದರೆ, ಸಿಪಿಆರ್ ತಂತ್ರಗಾರಿಕೆಯ ಬಗ್ಗೆ ಜನರಿಗೆ ತಿಳಿದಿದ್ದರೆ ಹೃದಯಸ್ತಂಬನಕ್ಕೆ ಒಳಗಾದವರನ್ನು ಬದುರಿಸಲು ಸಾಧ್ಯವಾಗುತ್ತದೆ ಎಂದು ಆ ದೃಶ್ಯವನ್ನು ಸೆರೆಹಿಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.

ನಿಮ್ಮ ಹೃದಯವನ್ನು ಜೋಪಾನವಾಗಿಟ್ಟುಕೊಳ್ಳಿ

ನಿಮ್ಮ ಹೃದಯವನ್ನು ಜೋಪಾನವಾಗಿಟ್ಟುಕೊಳ್ಳಿ

ಈ ಲವ್ ಸ್ಟೋರಿ ಎಲ್ಲರಿಗೂ ಒಂದು ಪಾಠವಾಗಬೇಕು. ಧಾವಂತದ ಬದುಕು, ಬಿಡುವಿಲ್ಲದ ಕೆಲಸ ನಮ್ಮನ್ನು ಉತ್ತಮ ಆರೋಗ್ಯದಿಂದ ದೂರ ಮಾಡುತ್ತದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದಿಲ್ಲ, ಬೇಕಾದಾದ ವಿಶ್ರಾಂತಿ ಪಡೆಯುವುದಿಲ್ಲ, ಎಲ್ಲಕ್ಕಿಂತ ಹೆಚ್ಚಾಗಿ ಬೆಳಗಿನ ಜಾವ ವ್ಯಾಯಾಮಕ್ಕೆ ಕೆಲ ಸಮಯವನ್ನು ಮೀಸಲಿಡುವುದಿಲ್ಲ. ಹೀಗಾಗಿ ಹೃದಯ ಎಷ್ಟಂತ ಒತ್ತಡವನ್ನು ತಡೆದುಕೊಳ್ಳುತ್ತದೆ? ನಲವತ್ತು ವಯಸ್ಸು ಮೀರಿದವರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದನ್ನು ಕೂಡ ಮರೆಯಬಾರದು. ವಿಧಿಯ ಲೀಲೆ ಏನೆಂಬುದು ನಮಗೆ ತಿಳಿದಿಲ್ಲದಿದ್ದರೂ ಕನಿಷ್ಠಪಕ್ಷ ನಮ್ಮ ಆರೋಗ್ಯವನ್ನು ಜೋಪಾನ ಮಾಡುವುದಾದರೂ ನಮ್ಮ ಕೈಯಲ್ಲಿರುತ್ತದೆ. ಅಲ್ಲದೆ, ಹೃದಯಾಘಾತವಾದಾಗ, ಹೃದಯ ಸ್ತಂಭನವಾದಾಗ ಏನು ಮಾಡಬೇಕೆಂಬುದನ್ನು ಮಕ್ಕಳಿಗೆ ಮತ್ತು ಹಿರಿಯರಿಗೆ ಈಗಿನಿಂದಲೇ ತಿಳಿವಳಿಕೆ ನೀಡುವುದು ಕೂಡ ತುರ್ತಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Man suffers heart attack on first date; doctor girlfriend's ‘kiss’ saves his life. The couple even turned the day into a milestone by starting Paddle4Good, a non-profit organisation to teach CPR techniques.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more