ಜಪಾನ್: ಮೃತ ಮುಸ್ಲಿಂ ವ್ಯಕ್ತಿಯ ಸಂಸ್ಕಾರದ ರೀತಿಗೆ ಪಾಕ್ ಜನತೆ ಗರಂ
ಟೋಕಿಯೋ, ಜನವರಿ 06: ಜಪಾನ್‌ನಲ್ಲಿ ಮೃತ ಮುಸ್ಲಿಂ ವ್ಯಕ್ತಿಯನ್ನು ಹೂಳುವ ಬದಲು ಸುಡುವ ಮೂಲಕ ಅಂತ್ಯಸಂಸ್ಕಾರ ನೆರವೇರಿಸಿದ್ದಕ್ಕೆ ಪಾಕಿಸ್ತಾನದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಪಾಕಿಸ್ತಾನದ ಲಾಹೋರ್ ಮೂಲದ ವ್ಯಕ್ತಿ ಜಪಾನಿ ಮಹಿಳೆಯನ್ನು ವಿವಾಹವಾಗಿದ್ದ. ಪಾಕ್ ಮಾಧ್ಯಮಗಳ ವರದಿ ಪ್ರಕಾರ ಈತನ ಹೆಸರು ರಶೀದ್ ಮೆಹಮೂದ್ ಖಾನ್. ಅವರು ಅನಾರೋಗ್ಯದಿಂದಾಗಿ ಜಪಾನ್‌ನಲ್ಲಿ ನಿಧನನಾಗಿದ್ದಾರೆ.
ಅವರ ಜಪಾನಿನ ಪತ್ನಿ, ಯಾವುದೇ ಮುಸ್ಲಿಂ ಆಚಾರ-ವಿಚಾರ ಹಾಗೂ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳು ರಶೀದ್ ಮೆಹಮೂದ್ ಖಾನ್ ಅವರ ಶವವನ್ನು ಹೂಳುವ ಬದಲು ಸುಟ್ಟಿದ್ದಾರೆ.
ಇದಾದ ಕೆಲವು ದಿನಗಳ ಬಳಿಕ, ರಶೀದ್ ಮೆಹಮೂದ್ ಸ್ನೇಹಿತ ಮಲಿಕ್ ನೂರ್ ಅವಾನ್ ಎಂಬಾತ ಜಪಾನ್ ಆಸ್ಪತ್ರೆಗೆ ಸಂಪರ್ಕಿಸಿ ತನ್ನ ಗೆಳೆಯನ ಬಗ್ಗೆ ವಿಚಾರಿಸಿದ್ದಾನೆ.
ಇಸ್ಲಾಮಿಕ್ ಸಂಪ್ರದಾಯದಲ್ಲಿ, ವ್ಯಕ್ತಿಯ ಮರಣದ ನಂತರ ಅವನ ದೇಹವನ್ನು ಸಮಾಧಿ ಮಾಡಲಾಗುತ್ತದೆ. ಆದರೆ, ಜಪಾನೀ ಸಂಪ್ರದಾಯದಲ್ಲಿ ವ್ಯಕ್ತಿಯ ಮರಣದ ನಂತರ, ಅವನ ದೇಹವನ್ನು ಸುಡಲಾಗುತ್ತದೆ. ಇದಲ್ಲದೆ, ಜಪಾನ್‌ನಲ್ಲಿ ಸ್ಥಳಾವಕಾಶದ ಕೊರತೆಯಿದೆ. ಇದರಿಂದಾಗಿ ಮೃತ ದೇಹಗಳನ್ನು ಸುಡುವ ಮೂಲಕ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಇದರಿಂದ ಅಲ್ಲಿ ನೆಲೆಸಿರುವ ಮುಸ್ಲಿಂ ಸಮುದಾಯ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿದೆ.

6 ತಿಂಗಳ ಅವಧಿಯಲ್ಲಿ ಪಾಕಿಸ್ತಾನಿಯೊಬ್ಬರ ಶವವನ್ನು ಹೂಳುವ ಬದಲು ಸುಟ್ಟು ಹಾಕಿರುವ ಎರಡನೇ ಘಟನೆ ಇದಾಗಿದೆ. ಈ ಸುದ್ದಿ ಮುನ್ನೆಲೆಗೆ ಬಂದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ವಿವಾದ ಶುರುವಾಗಿದೆ. ಈ ವಿಷಯವಾಗಿ ಜಪಾನ್ ಸರ್ಕಾರದೊಂದಿಗೆ ಯಾವಾಗ ಚರ್ಚೆ ಮಾಡುತ್ತಿರಿ ಎಂದು ಪಾಕಿಸ್ತಾನಿಗಳು ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಗಲಾಟೆ ಮಾಡುತ್ತಿದ್ದಾರೆ.
ಈ ವೇಳೆ ಅಲ್ಲಿನ ಆಸ್ಪತ್ರೆ ಸಿಬ್ಬಂದಿ, ರಶೀದ್ ಮೆಹಮೂದ್ ಅವರ ಅಂತ್ಯ ಸಂಸ್ಕಾರವನ್ನು ಜಪಾನ್ ಸಂಪ್ರದಾಯದಂತೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಸುದ್ದಿ ಯಾವಾಗ ಸ್ನೇಹಿತನ ಮೂಲಕ ಜಪಾನ್ ಆಸ್ಪತ್ರೆಯಿಂದ ಹೊರಬಿತ್ತೋ.. ಅಲ್ಲಿಂದ ಪಾಕಿಸ್ತಾನದಲ್ಲಿ ಗಲಾಟೆ ಶುರುವಾಗಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications