Breaking: ಥಾಯ್ಲೆಂಡ್‌ನ ಮಕ್ಕಳ ಡೇ ಕೇರ್ ಸೆಂಟರ್‌ನಲ್ಲಿ ಗುಂಡಿನ ದಾಳಿ- 23 ಮಕ್ಕಳು ಸೇರಿ 31 ಸಾವು
ಥೈಲ್ಯಾಂಡ್‌ನ ಈಶಾನ್ಯ ಪ್ರಾಂತ್ಯದ ಮಕ್ಕಳ ಡೇ-ಕೇರ್ ಸೆಂಟರ್‌ನಲ್ಲಿ ಗುರುವಾರ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಬಂದೂಕುಧಾರಿ ಮಾಜಿ ಪೊಲೀಸ್ ಅಧಿಕಾರಿಯಾಗಿದ್ದು, ಗುಂಡಿನ ದಾಳಿಯ ನಂತರ ಅವನೂ ಸಹ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ತಿಳಿಸಿದೆ.
ಮೃತಪಟ್ಟವರಲ್ಲಿ 23 ಮಕ್ಕಳು, ಇಬ್ಬರು ಶಿಕ್ಷಕರು ಮತ್ತು ಒಬ್ಬರು ಪೊಲೀಸ್ ಅಧಿಕಾರಿ ಸೇರಿದ್ದಾರೆ. ನೊಂಗ್ಬುವಾ ಲ್ಯಾಂಫು ಪಟ್ಟಣದ ಮಧ್ಯಭಾಗದಲ್ಲಿ ಬಂದೂಕುಧಾರಿ ಮಧ್ಯಾಹ್ನದ ವೇಳೆಗೆ ಗುಂಡು ಹಾರಿಸಿದ ಎಂದು ಪೊಲೀಸ್ ಮೇಜರ್ ಜನರಲ್ ಅಚಾಯೋನ್ ಕ್ರೈಥೋಂಗ್ ಎಪಿಗೆ ತಿಳಿಸಿದ್ದಾರೆ.
ಘಟನೆ ಸಂಬಂಧ ಸೂಕ್ತ ಎಚ್ಚರಿಎ ವಹಿಸುವಂತೆ ಥೈಲ್ಯಾಂಡ್ ಪ್ರಧಾನಿ ಸೂಚನೆ ನೀಡಿದ್ದಾರೆ. ಈ ಪ್ರದೇಶದ ಇತರ ಕೆಲವು ದೇಶಗಳಿಗೆ ಹೋಲಿಸಿದರೆ ಥೈಲ್ಯಾಂಡ್‌ನಲ್ಲಿ ಬಂದೂಕು ಮಾಲಿಕತ್ವದ ಪ್ರಮಾಣವು ಅಧಿಕವಾಗಿದೆ. ಆದರೆ ಅಧಿಕೃತ ಅಂಕಿಅಂಶಗಳು ಭಾರಿ ಸಂಖ್ಯೆಯ ಅಕ್ರಮ ಶಸ್ತ್ರಾಸ್ತ್ರಗಳನ್ನು ಒಳಗೊಂಡಿಲ್ಲ. ಇವುಗಳಲ್ಲಿ ಹೆಚ್ಚಿನ ಶಸ್ತ್ರಸ್ತ್ರಗಳನ್ನು ನೆರೆಹೊರೆಯ ಗಡಿಗಳ ಮೂಲಕ ತರಲಾಗಿದೆ.

ಸಾಮೂಹಿಕ ಗುಂಡಿನ ದಾಳಿಗಳು ಅಪರೂಪ. ಆದರೆ 2020 ರಲ್ಲಿ, ಆಸ್ತಿ ವ್ಯವಹಾರದ ಮೇಲೆ ಕೋಪಗೊಂಡ ಸೈನಿಕನು ಕನಿಷ್ಠ 29 ಜನರನ್ನು ಕೊಂದನು ಮತ್ತು 57 ಜನರನ್ನು ಗಾಯಗೊಳಿಸಿದನು, ಅದು ನಾಲ್ಕು ಸ್ಥಳಗಳಲ್ಲಿ ವ್ಯಾಪಿಸಿತ್ತು.












Click it and Unblock the Notifications