80,000 ಬೆತ್ತಲೆ ವಿಡಿಯೋ ಇಟ್ಟುಕೊಂಡು ₹102 ಕೋಟಿ ಪೀಕಿದ ಖತರ್ನಾಕ್ ಲೇಡಿ!
ಮಹಿಳೆಯೊಬ್ಬರ ಬಳಿ ಬರೋಬ್ಬರಿ 80,000ಕ್ಕೂ ಹೆಚ್ಚು ಅಶ್ಲೀಲ ಹಾಗೂ ಬೆತ್ತಲೆ ವಿಡಿಯೋ, ಫೋಟೋಗಳು ಪತ್ತೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಪೋಲೀಸರು ವಶಪಡಿಸಿಕೊಂಡ 30 ವರ್ಷದ ಮಹಿಳೆಯ ಮೊಬೈಲ್ ಹಾಗೂ ಡಿವೈಸ್‌ನಲ್ಲಿ ಬೆತ್ತಲೆ ಫೋಟೋ, ವಿಡಿಯೋಗಳು ಸಿಕ್ಕಿವೆ. ಇವುಗಳನ್ನು ಮುಂದಿಟ್ಟುಕೊಂಡು ಬರೋಬ್ಬರಿ ₹102 ಕೋಟಿ ರೂಪಾಯಿ ಹಣ ವಸೂಲಿ ಮಾಡಿರುವುದು ಕೂಡ ತಿಳಿದುಬಂದಿದೆ. "ಮಿಸ್ ಗಾಲ್ಫ್" ಕಿರೀಟ ಮುಡಿಗೇರಿಸಿಕೊಂಡಿದ್ದ ಮಹಿಳೆಯಿಂದ ಈ ಕೃತ್ಯ ನಡೆದಿದೆ ಎಂದು ವರದಿಯಾಗಿದೆ. ಈಕೆ ಬೌದ್ಧ ಸನ್ಯಾಸಿಗಳನ್ನು ಗುರಿಯಾಗಿಸಿಕೊಂಡು ಬೃಹತ್ ಬ್ಲ್ಯಾಕ್‌ಮೇಲ್ ದಂಧೆ ನಡೆಸಿರುವ ಆರೋಪ ಕೇಳಿಬಂದಿದೆ.
ಥೈಲ್ಯಾಂಡ್ ಬೌದ್ಧ ಮಠಗಳಲ್ಲಿ ಭಾರಿ ಲೈಂಗಿಕ ಹಗರಣ ಬೆಳಕಿಗೆ ಬಂದಿದ್ದು, ಮಿಸ್ ಗಾಲ್ಫ್ ಎಂದೂ ಕರೆಯಲ್ಪಡುವ ವಿಲಾವನ್ ಎಮ್ಸಾವತ್ ಅವರನ್ನು ಬ್ಯಾಂಕಾಕ್‌ನ ಹೊರಗಿನ ನೋಂಥಬುರಿಯಲ್ಲಿರುವ ಅವರ ಐಷಾರಾಮಿ ನಿವಾಸದಲ್ಲಿ ಬಂಧಿಸಲಾಗಿದೆ. ಬಂಧಿಸಲಾಯಿತು. ವಿಲಾವನ್ ಥೈಲ್ಯಾಂಡ್‌ನಾದ್ಯಂತ ಬೌದ್ಧ ಸನ್ಯಾಸಿಗಳನ್ನು ಗುರಿಯಾಗಿಸಿಕೊಂಡು ಬ್ಲ್ಯಾಕ್‌ಮೇಲ್ ದಂಧೆ ನಡೆಸಿ ನೂರಾರು ಕೋಟಿ ಹಣ ಪೀಕಿದ್ದಾಳೆ ಎಂದು ಹೇಳಲಾಗುತ್ತಿದೆ. ಪೊಲೀಸರು ಹೇಳುವಂತೆ ಈ ಮಹಿಳೆಯು ಸನ್ಯಾಸಿಗಳೊಂದಿಗೆ ಖಾಸಗಿ ಕ್ಷಣ ಕಳೆದು, ವಿಡಿಯೋ, ಫೋಟೋಗಳನ್ನು ರೆಕಾರ್ಡ್ ಮಾಡಿ ದೊಡ್ಡ ಮೊತ್ತದ ಹಣ ಸುಲಿಗೆ ಮಾಡಿದ್ದಾಳೆ.
ಮಾಯಾಂಗನೆ ಬಲೆ ಬೀಸಿದ್ದು ಹೇಗೆ?
ಆಕೆಯ ಮೇಲೆ ಸುಲಿಗೆ, ಹಣ ವರ್ಗಾವಣೆ ಮತ್ತು ಕದ್ದ ಆಸ್ತಿಯನ್ನು ಪಡೆದ ಆರೋಪವೂ ಇದೆ. ತನಿಖಾಧಿಕಾರಿಗಳು ಮಹಿಳೆಯನ್ನು ಬಂಧಿಸಿದಾಗ ಆಕೆಯ ಡಿವೈಸ್‌ಗಳಲ್ಲಿ ಸನ್ಯಾಸಿಗಳೊಂದಿಗೆ ಸಾವಿರಾರು ಅಶ್ಲೀಲ ಫೋಟೋಗಳು ಮತ್ತು ವಿಡಿಯೋಗಳು ಸಿಕ್ಕಿವೆ. ಇವುಗಳನ್ನು ಮೂರು ವರ್ಷಗಳ ಅವಧಿಯಲ್ಲಿ ಬ್ಲ್ಯಾಕ್‌ಮೇಲ್ ಮಾಡಲು ಬಳಸಲಾಗಿದೆ ಎಂದು ತಿಳಿದುಬಂದಿದೆ.

ಸನ್ಯಾಸಿಗಳು ಆಕೆಯ ಮೋಹಕ್ಕೆ ಸಿಲುಕಿ ತಮ್ಮ ದುಬಾರಿ ಮರ್ಸಿಡಿಸ್ ಬೆನ್ಜ್ ಕಾರು, ಹೆಚ್ಚಿನ ಹಣ ಮತ್ತು ಡೆಬಿಟ್ ಕಾರ್ಡ್ ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಆಕೆಯ ಬ್ಯಾಂಕ್ ಖಾತೆಗಳ ತನಿಖೆಯಲ್ಲಿ ಇತರ ಸನ್ಯಾಸಿಗಳು ಕೂಡ ದೊಡ್ಡ ಪ್ರಮಾಣದ ಹಣ ವರ್ಗಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಸನ್ಯಾಸಿಗಳಿಂದ ಖಾಸಗಿ ಉಡುಗೊರೆ, ಐಷಾರಾಮಿ ವಸ್ತುಗಳನ್ನು ಸಹ ಪಡೆದಿದ್ದು, ಹೆಚ್ಚಿನ ಹಣವನ್ನು ಆನ್‌ಲೈನ್ ಜೂಜಾಟಕ್ಕೆ ಖರ್ಚು ಮಾಡಲಾಗಿದೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ.
ಸನ್ಯಾಸಿಗಳು ನಾಪತ್ತೆ
ಈ ಪ್ರಕರಣದಲ್ಲಿ ಈಗಾಗಲೇ ಮುಖ್ಯ ಮಠಾಧಿಪತಿಗಳೂ ಸೇರಿ ಒಂಬತ್ತು ಹಿರಿಯ ಸನ್ಯಾಸಿಗಳು ವಸ್ತ್ರತ್ಯಾಗ ಮಾಡಿ, ಮಠದಿಂದ ಹೊರಹೋಗಿದ್ದಾರೆ. ಇದರಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ. ಜೂನ್ ತಿಂಗಳಲ್ಲಿ ಬ್ಯಾಂಕಾಕ್ ಮಂದಿರದ ಹಿರಿಯ ಸಂನ್ಯಾಸಿ ಫ್ರಾ ಥೆಪ್ ವಚಿರಪಮೋಕ್ ನಾಪತ್ತೆಯಾಗಿದ್ದು, ಈ ಹಗರಣದ ತನಿಖೆ ಆರಂಭವಾಗಿದೆ. ಕಾಣೆಯಾದ ಸನ್ಯಾಸಿ ಇನ್ನೂ ಪತ್ತೆಯಾಗಿಲ್ಲ.
ಎಮ್ಸಾವತ್ 2024ರಲ್ಲಿ ಸನ್ಯಾಸಿಯೊಂದಿಗೆ ಸಂಬಂಧ ಹೊಂದಿದ್ದರು. ತಮ್ಮ ಮಗುವಿಗೆ ಜನ್ಮ ನೀಡಿದ್ದಾರೆಂದು ಹೇಳಿಕೊಂಡು 1.90 ಕೋಟಿಗಿಂತ ಹೆಚ್ಚು ಹಣಕ್ಕೆ ಬೇಡಿಕೆಯೂ ಇಟ್ಟಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣ ಹೊರಬಂದ ಹಿನ್ನೆಲೆ ಥೈಲ್ಯಾಂಡ್ ಸರ್ಕಾರ ಸನ್ಯಾಸಿಗಳ ಮೇಲೆ ಹೊಸ ಕಠಿಣ ಶಿಸ್ತು ನಿಯಮ ತರಲು ಚಿಂತನೆ ನಡೆಸುತ್ತಿದೆ. ಅಲ್ಲಿನ ರಾಜ ನೀಡಿದ್ದ 81 ಸನ್ಯಾಸಿಗಳ ಗೌರವ ಪದವಿಗಳನ್ನು ರದ್ದುಪಡಿಸಲಾಗಿದೆ.












Click it and Unblock the Notifications