ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ಬಿಕ್ಕಟ್ಟಿನ ನಡುವೆ ಭಯೋತ್ಪಾದನೆ ಹಬ್ಬಿಸುವ ಕೆಲಸ:ರಷ್ಯಾ

|
Google Oneindia Kannada News

ಮಾಸ್ಕೋ, ಅಕ್ಟೋಬರ್ 30: ಕೊರೊನಾ ಬಿಕ್ಕಟ್ಟಿನ ನಡುವೆ ಕೆಲವರು ಭಯೋತ್ಪಾದನೆಯನ್ನು ಹರಡುವ ಯತ್ನ ಮಾಡುತ್ತಿದ್ದಾರೆ ಎಂದು ರಷ್ಯಾ ಹೇಳಿದೆ.

"ವಿಶ್ವದ ಕೆಲವು ಪ್ರದೇಶಗಳಲ್ಲಿ, ಭಯೋತ್ಪಾದನಾ ಬೆದರಿಕೆಗಳು ಸಾಂಕ್ರಾಮಿಕದ ಬೆಳಕಿನಲ್ಲಿ ಹೊರಹೊಮ್ಮಿದ ಪರಿಸ್ಥಿತಿಯನ್ನು ತಮ್ಮ ಪ್ರಭಾವವನ್ನು ಬಲಪಡಿಸಲು, ದುರುದ್ದೇಶಪೂರಿತ ಸಿದ್ಧಾಂತವನ್ನು ಉತ್ತೇಜಿಸಲು ಮತ್ತು ಹೊಸ ಬೆಂಬಲಿಗರನ್ನು ನೇಮಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತಿದೆ ಎಂದು ಉಪ ವಿದೇಶಾಂಗ ಸಚಿವ ಸಿರೋಮೊಲೊಟೊವ್ ಹೇಳಿದ್ದಾರೆ.

ಪಾಕಿಸ್ತಾನದ ಸ್ಟಾಕ್ ಎಕ್ಸೇಂಜ್‌ ಮೇಲೆ ಗುಂಡಿನ ದಾಳಿ: 10 ಮಂದಿ ಸಾವುಪಾಕಿಸ್ತಾನದ ಸ್ಟಾಕ್ ಎಕ್ಸೇಂಜ್‌ ಮೇಲೆ ಗುಂಡಿನ ದಾಳಿ: 10 ಮಂದಿ ಸಾವು

ಕೊವಿಡ್ 19 ಬಿಕ್ಕಟ್ಟನ್ನು ಭಯೋತ್ಪಾದಕರು ಅವಕಾಶವನ್ನಾಗಿ ಬಳಸಿಕೊಳ್ಳುತ್ತಿರುವುದಾಗಿ ರಷ್ಯಾ ಹೇಳಿದೆ.

Terrorists Strengthening Their Positions During Corona Pandemic

ಸಾಂಕ್ರಾಮಿಕವು ಕೆಲವು ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗಳ ಬಿಕ್ಕಟ್ಟುಗಳಿಗೆ ಶೀಘ್ರವಾಗಿ ಸ್ಪಂದಿಸಲು ಸಿದ್ಧವಿಲ್ಲದಿರುವಿಕೆಯನ್ನು ಬಹಿರಂಗಪಡಿಸಿದೆ, ಕೆಲವು ದೇಶಗಳು ಭಯೋತ್ಪಾದನೆ ಬೆದರಿಕೆಗಳಿಗೆ ಗುರಿಯಾಗುವುದನ್ನು ಬಹಿರಂಗಪಡಿಸಿದೆ ಎಂದು ರಷ್ಯಾದ ರಾಜತಾಂತ್ರಿಕರು ಅಭಿಪ್ರಾಯಪಟ್ಟಿದ್ದಾರೆ.

ತಾನು ತಯಾರಿಸಿದ ಸ್ಪುಟ್ನಿಕ್‌-V ಕೊರೊನಾ ಲಸಿಕೆಗೆ ಭಾರತದಲ್ಲಿ ಒಪ್ಪಿಗೆ ಸಿಕ್ಕಿದರೆ 10 ಕೋಟಿ ಡೋಸ್‌ಗಳನ್ನು 'ಡಾ ರೆಡ್ಡೀಸ್‌ ಲ್ಯಾಬೊರೇಟರೀಸ್‌'ಗೆ ಮಾರಾಟ ಮಾಡುವುದಾಗಿ ರಷ್ಯಾದ ಸಾವರಿನ್‌ ವೆಲ್ತ್‌ ಫಂಡ್‌ ಹೇಳಿದೆ.

ಈ ಲಸಿಕೆಯ ಪ್ರಯೋಗ ಭಾರತದಲ್ಲಿ ಇನ್ನಷ್ಟೇ ನಡೆಯಬೇಕಿದ್ದು, ಇಲ್ಲಿನ ಕಂಪನಿ ಜೊತೆಗೆ ಸೇರಿ ಇದರ ಪ್ರಯೋಗ ನಡೆಸಲುರಷ್ಯಾ ಉದ್ದೇಶಿಸಿದೆ. ಆದರೆ ಲಸಿಕೆಗೆ ಒಪ್ಪಿಗೆ ಸಿಕ್ಕ ನಂತರವಷ್ಟೇ ಪ್ರಯೋಗ ಮತ್ತು ಪೂರೈಕೆ ನಡೆಯಲಿದೆ.

Recommended Video

ಭಾರತದಿಂದ ಕೊರೊನಾ‌ ತವರಿಗೆ ಶುರುವಾಯ್ತು ವಿಮಾನಯಾನ | Oneindia Kannada

ಈಗಾಗಲೇ 'ರಷ್ಯನ್‌ ಡೈರೆಕ್ಟ್‌ ಇನ್ವೆಸ್ಟ್‌ಮೆಂಟ್‌ ಫಂಡ್'‌ ಲಸಿಕೆಗೆ ಸಂಬಂಧಿಸಿದಂತೆ ಕಝಕಿಸ್ತಾನ್‌, ಬ್ರೆಜಿಲ್‌ ಮತ್ತು ಮೆಕ್ಸಿಕೋದ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದಲ್ಲದೆ ಈ ಲಸಿಕೆಯ 30 ಕೋಟಿ ಡೋಸ್‌ ತಯಾರಿಕೆ ಭಾರತದ ಜೊತೆ ಪಾಲುದಾರಿಕೆಯ ಒಪ್ಪಂದವನ್ನೂ ಮಾಡಿಕೊಂಡಿದೆ.

English summary
Terrorists are using the situation that has developed due to the coronavirus pandemic, strengthening their positions. So these phenomena are linked in an interview RIA News Russian Deputy Foreign Minister Oleg Syromolotov.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X