• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಫ್ಘಾನಿಸ್ತಾನದಲ್ಲಿ ತನ್ನ ವ್ಯಾಪ್ತಿ ವಿಸ್ತರಣೆಗೆ ಚೀನಾದ ಬೆಂಬಲ ಕೋರಿದ ತಾಲಿಬಾನ್‌

|
Google Oneindia Kannada News

ಕಾಬೂಲ್‌, ಜು.28: ತಾಲಿಬಾನ್ ನಾಯಕ ಮುಲ್ಲಾ ಬರದಾರ್ ಅಖುಂಡ್ ಜುಲೈ 27 ರಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿಯನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ. ಅಫ್ಘಾನಿಸ್ತಾನದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಚೀನಾದ ಬೆಂಬಲವನ್ನು ತಾಲಿಬಾನ್‌ ಕೋರಿದೆ. ಹಾಗೆಯೇ ಯಾವುದೇ ಮೂರನೇ ದೇಶಕ್ಕೆ ಬೆದರಿಕೆಯೊಡ್ಡಲು ತಮ್ಮ ಪ್ರದೇಶವನ್ನು ಭಯೋತ್ಪಾದಕರು ಬಳಸುವುದನ್ನು ತಡೆಯಲಾಗುವುದು ಎಂದು ತಾಲಿಬಾನ್‌ ಹೇಳಿದೆ. ಉಯಿಘರ್ ಉಗ್ರಗಾಮಿ ಸಂಘಟನೆಗೆ ವಖಾನ್ ಕಾರಿಡಾರ್ ಮೂಲಕ ಅಫ್ಘಾನಿಸ್ತಾನದ ಎಮಿರೇಟ್‌ನಲ್ಲಿ ಆಶ್ರಯ ಸಿಗಬಹುದೆಂದು ಆತಂಕಗೊಂಡಿದ್ದರಿಂದ ಮುಲ್ಲಾ ಬರಾಡರ್ ಈ ಭರವಸೆ ನೀಡಿದ್ದಾರೆ.

ಮುಲ್ಲಾ ಬರದಾರ್ ಒಂಬತ್ತು ಜನರ ಉನ್ನತ ನಿಯೋಗದ ಮುಖ್ಯಸ್ಥರಾಗಿ ಎರಡು ದಿನಗಳ ಕಾಲ ಚೀನಾಕ್ಕೆ ಪ್ರಯಾಣ ಬೆಳೆಸಿದರು. ಚೀನಾದ ಉಪ ವಿದೇಶಾಂಗ ಸಚಿವರು ಮತ್ತು ಅಫ್ಘಾನಿಸ್ತಾನದ ಚೀನಾದ ವಿಶೇಷ ಪ್ರತಿನಿಧಿ ವಾಂಗ್ ಜೊತೆಗೆ ಪ್ರತ್ಯೇಕ ಸಭೆ ನಡೆಸಿದರು ಎಂದು ತಾಲಿಬಾನ್ ಪ್ರಕಟಣೆಯಲ್ಲಿ ತಿಳಿಸಿದೆ. "ಸಭೆಗಳು ಉಭಯ ದೇಶಗಳಿಗೆ ಸಂಬಂಧಿಸಿದ ರಾಜಕೀಯ, ಆರ್ಥಿಕ ಮತ್ತು ಭದ್ರತಾ ವಿಷಯಗಳು, ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿ ಮತ್ತು ಶಾಂತಿ ಪ್ರಕ್ರಿಯೆಯ ಮೇಲೆ ಕೇಂದ್ರೀಕರಿಸಿದೆ" ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ," ಎನ್ನಲಾಗಿದೆ.

 ತಾಲಿಬಾನ್‌ ದಾಳಿಗೆ ತತ್ತರಿಸಿದ ಅಫ್ಘಾನ್‌ ಮೇಲೆ ಭಾರತದ ಹೂಡಿಕೆ ಎಷ್ಟು?: ಇಲ್ಲಿದೆ ಸಂಪೂರ್ಣ ವಿವರ ತಾಲಿಬಾನ್‌ ದಾಳಿಗೆ ತತ್ತರಿಸಿದ ಅಫ್ಘಾನ್‌ ಮೇಲೆ ಭಾರತದ ಹೂಡಿಕೆ ಎಷ್ಟು?: ಇಲ್ಲಿದೆ ಸಂಪೂರ್ಣ ವಿವರ

ಯಾವುದೇ ಮೂರನೇ ರಾಷ್ಟ್ರದ ವಿರುದ್ಧ ಅಫ್ಘಾನ್‌ ಭೂಪ್ರದೇಶವನ್ನು ಬಳಸಲು ಅನುಮತಿಸುವುದಿಲ್ಲ ಎಂದು ಬೀಜಿಂಗ್‌ಗೆ ಭರವಸೆ ನೀಡುದೆ. ಈ ಮೂಲಕ, ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳು ಮತ್ತು ಅಲ್ ಖೈದಾದಂತಹ ಪ್ಯಾನ್-ಇಸ್ಲಾಮಿಕ್ ಗುಂಪುಗಳು ಅಫ್ಘಾನಿಸ್ತಾನದಲ್ಲಿನ ಪ್ರದೇಶ ಬಳಸಬಹುದು ಎಂಬ ಆತಂಕಗಳನ್ನು ನಿವಾರಿಸಲು ತಾಲಿಬಾನ್ ಪ್ರಯತ್ನಿಸುತ್ತಿದೆ. ಆಮೂಲಾಗ್ರ ಇಸ್ಲಾಂ ಧರ್ಮವನ್ನು ವಿರೋಧಿಸುವ ದೇಶಗಳನ್ನು ಗುರಿಯಾಗಿಸಲು ಭಯೋತ್ಪಾದಕ ತರಬೇತಿ ಶಿಬಿರಗಳನ್ನು ಸ್ಥಾಪಿಸುವುದು.

1996-2001ರ ನಡುವೆ ಅಧಿಕಾರದಲ್ಲಿದ್ದ ಮೊದಲ ಅವಧಿಯಲ್ಲಿ, ಅಲ್ ಖೈದಾ, ಹರ್ಕತ್-ಉಲ್-ಅನ್ಸರ್, ಹುಜಿ ಬಾಂಗ್ಲಾದೇಶದಂತಹ ಬಹುಪಾಲು ಪ್ಯಾನ್-ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳಿಗೆ ತಾಲಿಬಾನ್ ಆಶ್ರಯ ನೀಡಿತ್ತು. ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾದಂತಹ ಗುಂಪುಗಳಿಗೆ ತರಬೇತಿ ಶಿಬಿರಗಳನ್ನು ನಡೆಸಿತ್ತು.

ಅಫ್ಘಾನಿಸ್ತಾನದ ಜನರಿಗೆ ಚೀನಾ ನಿರಂತರ ಸಹಕಾರ ನೀಡಿದ್ದಕ್ಕಾಗಿ ತಾಲಿಬಾನ್ ನಿಯೋಗವು ಧನ್ಯವಾದಗಳನ್ನು ಅರ್ಪಿಸಿದೆ. ವಿಶೇಷವಾಗಿ ಕೊರೊನಾವೈರಸ್‌ ವಿರುದ್ದದ ಹೋರಾಟದಲ್ಲಿ ಸಹಕಾರ ನೀಡಿದ ಕಾರಣಕ್ಕೆ ತಾಲಿಬಾನ್‌ ಚೀನಾಕ್ಕೆ ಧನ್ಯವಾದ ತಿಳಿಸಿದೆ.

ಅಫ್ಘಾನಿಸ್ತಾನ ಘರ್ಷಣೆಯಲ್ಲಿ ಭಾರತೀಯ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಮೃತ್ಯುಅಫ್ಘಾನಿಸ್ತಾನ ಘರ್ಷಣೆಯಲ್ಲಿ ಭಾರತೀಯ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಮೃತ್ಯು

ಆಗಸ್ಟ್ 31 ರಂದು ಅಫ್ಘಾನಿಸ್ತಾನವನ್ನು ತೊರೆಯುವುದಾಗಿ ಯುಎಸ್ ಈಗಾಗಲೇ ಘೋಷಿಸಿದೆ. "ಯುಎಸ್ ಜೊತೆಗಿನ ಸಂಬಂಧವನ್ನು ಪುನರುಜ್ಜೀವನಗೊಳಿಸಲು ಪಾಕಿಸ್ತಾನವು ತಾಲಿಬಾನ್ ಮೇಲೆ ತನ್ನ ಪ್ರಭಾವವನ್ನು ಸಾಧಿಸಲು ಪ್ರಯತ್ನಿಸುತ್ತಿದ್ದರೆ, ಸುನ್ನಿ ಇಸ್ಲಾಮಿಸ್ಟ್ ಗುಂಪು ಚೀನಾದೊಂದಿಗಿನ ತನ್ನ ಸಂಬಂಧವನ್ನು ಬಲಪಡಿಸಲು ಇಸ್ಲಾಮಾಬಾದ್ ಮೇಲೆ ಮತ್ತೆ ದಾಳಿ ಮಾಡುತ್ತಿದೆ. ಅಫ್ಘಾನಿಸ್ತಾನದೊಂದಿಗೆ ದ್ವಿಪಕ್ಷೀಯ ವ್ಯಾಪಾರದ ಮೇಲೆ ಹಿಡಿತ ಸಾಧಿಸಲು ಮತ್ತು ಆ ದೇಶದಲ್ಲಿ ಕಲ್ಲಿದ್ದಲು, ತಾಮ್ರ ಮತ್ತು ಕಬ್ಬಿಣದ ಅದಿರಿನಂತಹ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಚೀನಿಯರು ತಮ್ಮ ಕಡೆಯಿಂದ ಗಡಿ ಹಾಗೂ ರಸ್ತೆ ಮಾರ್ಗವನ್ನು ಅಫ್ಘಾನಿಸ್ತಾನಕ್ಕೆ ಮತ್ತು ಅದರ ಮಧ್ಯ ಏಷ್ಯಾದಲ್ಲಿ ವಿಸ್ತರಿಸುವತ್ತ ನೋಡುತ್ತಿದ್ದಾರೆ," ಎಂದು ಯುಎಸ್ ಮತ್ತು ಭಾರತದ ರಾಜತಾಂತ್ರಿಕರು ಹೇಳಿದರು.

(ಒನ್‌ಇಂಡಿಯಾ ಸುದ್ದಿ)

English summary
With frontline Taliban leader Mullah Baradar Akhund meeting Chinese foreign minister Wang Yi on July 27, seeking support of Beijing to expand its footprint in Afghanistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X