ತಾಲಿಬಾನ್ ಉಗ್ರರ ದಾಳಿಯಲ್ಲಿ 30 ಅಫ್ಘನ್ ಪೊಲೀಸರು ಸಾವು

ಅಪ್ಘಾನಿಸ್ತಾನದ ಪಶ್ಚಿಮ ಫರ್ಹಾ ಪ್ರಾಂತ್ಯದಲ್ಲಿ ತಾಲಿಬಾನ್ ನಿಂದ ರಾತ್ರಿ ದಾಳಿ ನಡೆಸಿದ್ದು, ಈ ವೇಳೆ 30 ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳಿ ತಿಳಿಸಿದ್ದಾರೆ. ಪ್ರಾಂತ್ಯದ ಕೌನ್ಸಿಲ್ ಸದಸ್ಯ ದದುಲ್ಲಾ ಕಾನಿ ಗುರುವಾರ ಮಾತನಾಡಿ, ಪ್ರಾಂತ್ಯದ ಖಾಕಿ ಜಿಲ್ಲೆಯ ಪೊಲೀಸ್ ಔಟ್ ಪೋಸ್ಟ್ ಮೇಲೆ ತಾಲಿಬಾನ್ ಉಗ್ರರು ನಾಲ್ಕು ಗಂಟೆಗೂ ಹೆಚ್ಚು ಕಾಲ ದಾಳಿ ನಡೆಸಿದರು ಎಂದು ತಿಳಿಸಿದ್ದಾರೆ.

ಕಾಬೂಲ್ ನಲ್ಲಿ ಜನ ಪ್ರತಿನಿಧಿ ಸಮೀಉಲ್ಲಾ ಸಮೀಮ್ ಮಾತನಾಡಿ, ಮೃತಪಟ್ಟವರಲ್ಲಿ ಜಿಲ್ಲಾ ಪೊಲೀಸ್ ಕಮ್ಯಾಂಡರ್ ಅಬ್ದುಲ್ ಜಬಹಾರ್ ಕೂಡ ಇದ್ದಾರೆ. ದಾಳಿ ನಂತರ ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಹಾಗೂ ಮದ್ದು-ಗುಂಡುಗಳನ್ನು ತಾಲಿಬಾನಿ ಉಗ್ರರು ಹೊತ್ತೊಯ್ದಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರತಿಯಾಗಿ ವಾಯು ದಾಳಿ ನಡೆಸಿ, ಹದಿನೇಳು ಮಂದಿ ತಾಲಿಬಾನ್ ಉಗ್ರರನ್ನು ಕೊಲ್ಲಲಾಗಿದೆ ಎಂದು ಅವರು ಹೇಳಿದ್ದಾರೆ. ಇತ್ತೀಚಿನ ತಿಂಗಳಲ್ಲಿ ತಾಲಿಬಾನ್ ನಿಂದ ಅಫ್ಘಾನಿಸ್ತಾನದ ಒಂದಿಲ್ಲೊಂದು ಕಡೆ ದಾಳಿ ನಡೆಯುತ್ತಲೇ ಇದೆ. ಅಫ್ಘನ್ ಸೈನ್ಯದಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

Taliban kill 30 policemen in Afghanistan, official sources

ಗಾಯಾಳುಗಳು ಹಾಗೂ ಮೃತಪಟ್ಟವರ ಸಂಖ್ಯೆಯ ಬಗ್ಗೆ ಅಧಿಕಾರಿಗಳು ನಿಯಮಿತವಾಗಿ ಮಾಹಿತಿ ನೀಡುತ್ತಿಲ್ಲ. ಆದರೆ ಒಂದು ಅಂದಾಜಿನ ಪ್ರಕಾರ ಪ್ರತಿ ದಿನ 45 ಅಫ್ಘನ್ ಪೊಲೀಸರು ಅಥವಾ ಸೈನಿಕರಿಗೆ ಗಾಯಗಳಾಗುತ್ತಿವೆ ಅಥವಾ ಸಾವನ್ನಪ್ಪುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+