ಅಫ್ಘಾನ್‌ನಲ್ಲಿ ವಿದೇಶಿ ನೆರವಿಲ್ಲದೆ ಬಜೆಟ್ ಮಂಡಿಸಲು ತಾಲಿಬಾನ್ ಸಜ್ಜು
ಕಾಬೂಲ್, ಡಿಸೆಂಬರ್ 18: ವಿದೇಶಿ ನೆರವಿಲ್ಲದೆ ಹೊಸ ಬಜೆಟ್ ಮಂಡಿಸಲು ತಾಲಿಬಾನ್ ಸಿದ್ಧತೆ ನಡೆಸಿದೆ.
ಎರಡು ದಶಕಗಳಲ್ಲಿ ಮೊದಲ ಬಾರಿಗೆ ವಿದೇಶಿ ನೆರವಿಲ್ಲದೆ ಅಫ್ಘಾನಿಸ್ತಾನದ ನೂತನ ತಾಲಿಬಾನ್ ಸರ್ಕಾರದ ಹಣಕಾಸು ಸಚಿವಾಲಯವು ಕರಡು ರಾಷ್ಟ್ರೀಯ ಬಜೆಟ್ ಅನ್ನು ಸಿದ್ಧಪಡಿಸಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಹಣಕಾಸು ಸಚಿವಾಲಯದ ವಕ್ತಾರ ಅಹ್ಮದ್ ವಾಲಿ ಹಕ್ಮಲ್ ಅವರು ಡಿಸೆಂಬರ್ 2022ರವರೆಗೆ ನಡೆಯುವ ಕರಡು ಬಜೆಟ್‌ನ ಗಾತ್ರವನ್ನು ಬಹಿರಂಗಪಡಿಸಲಿಲ್ಲ. ಆದರೆ ಅದನ್ನು ಪ್ರಕಟಿಸುವ ಮೊದಲು ಕ್ಯಾಬಿನೆಟ್ ಅನುಮೋದನೆಗೆ ಹೋಗುವುದಾಗಿ AFP ಗೆ ತಿಳಿಸಿದರು.
ದೇಶವು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವಾಗ ಮತ್ತು 'ಹಸಿವಿನ ಹಿಮಪಾತ' ಇದೊಂದು ಮಾನವೀಯ ದುರಂತ ಎಂದು ವಿಶ್ವಸಂಸ್ಥೆಯು ಕರೆದಿದ್ದು ಇದರ ನಡುವೆ ತಾಲಿಬಾನ್ ಸರ್ಕಾರ ಹೊಸ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದೆ.
ಆಗಸ್ಟ್‌ನಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಜಾಗತಿಕ ದಾನಿಗಳು ಹಣಕಾಸಿನ ನೆರವನ್ನು ಸ್ಥಗಿತಗೊಳಿಸಿದರು. ಪಾಶ್ಚಿಮಾತ್ಯ ಶಕ್ತಿಗಳು ವಿದೇಶದಲ್ಲಿರುವ ಶತಕೋಟಿ ಡಾಲರ್‌ಗಳ ಆಸ್ತಿಗಳ ಪ್ರವೇಶವನ್ನು ಸ್ಥಗಿತಗೊಳಿಸಿದವು.

ನಮ್ಮ ದೇಶೀಯ ಆದಾಯದಿಂದ ಬಜೆಟ್ ಗೆ ಹಣಕಾಸು ಒದಗಿಸಲು ಪ್ರಯತ್ನಿಸುತ್ತಿದ್ದು, ನಾವು ಮಾಡಬಹುದು ಎಂದು ನಾವು ನಂಬುತ್ತೇವೆ ಎಂದು ಅವರು ಈ ಹಿಂದೆ ಟ್ವೀಟ್ ಮಾಡಿದ್ದರು.
ಅಫ್ಘಾನಿಸ್ತಾನದ ಆರ್ಥಿಕತೆ ಬಹುತೇಕ ಪತನದತ್ತ ಸಾಗಿದೆ. ಹಳ್ಳಿಗಾಡುಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯೇ ಇಲ್ಲದಂತಾಗಿದೆ. ನೂರಾರು ಮೈಲಿ ದೂರಕ್ಕೆ ಒಂದರಂತೆ ಇರುವ ಬ್ಯಾಂಕ್ನಲ್ಲಿ ಸಿಕ್ಕಾಪಟ್ಟೆ ಜನಜಂಗುಳಿ.
ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿದ್ದು, ನಿರ್ದಿಷ್ಟ ಅವಧಿಗೆ ಚಿಕಿತ್ಸೆ ಪಡೆಯುತ್ತಿರುವವರ ಪಾಡಂತೂ ಶತ್ರುಗಳಿಗೂ ಬೇಡ ಎಂಬಂತಾಗಿದೆ. ಏಕೆಂದರೆ, ಹೀಗೆ ನೂರಾರು ಮೈಲಿ ಆಚೆಗೆ ಒಂದರಂತೆ ಇರುವ ಬ್ಯಾಂಕ್ಗಳಲ್ಲಿ ಕೂಡ ಎಲ್ಲ ಗ್ರಾಹಕರಿಗೂ ನಗದು ಸಿಗುತ್ತಾ ಇಲ್ಲ.
ಆಗಸ್ಟ್ 15ರಂದು ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡಾಗಿಂದ ಅಲ್ಲಿನ ಆರ್ಥಿಕತೆ ಬಹುತೇಕ ಕುಸಿದುಹೋಗಿದೆ. ಜಗತ್ತಿನಲ್ಲೇ ಅತ್ಯಂತ ಭೀಕರ ಮಾನವೀಯ ಬಿಕ್ಕಟ್ಟು ತಲೆದೋರಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಇದ್ದ ಮಿಲಿಯನ್ಗಟ್ಟಲೆ ಡಾಲರ್ ಅನುದಾನ ಮಾಯವಾಗಿದೆ. ಸರ್ಕಾರಕ್ಕೆ ಸೇರಿದ ಬಿಲಿಯನ್ಗಟ್ಟಲೆ ಡಾಲರ್ ಆಸ್ತಿಗೆ ತಡೆ ಬಿದ್ದಿದೆ. ಇನ್ನು ಆರ್ಥಿಕ ನಿರ್ಬಂಧದ ಕಾರಣಕ್ಕೆ ಹಾಗತಿಕ ಮಟ್ಟದ ಬ್ಯಾಂಕಿಂಗ್ ವ್ಯವಸ್ಥೆಯ ನೆರವು ಈಗಿನ ಸರ್ಕಾರಕ್ಕೆ ಸಿಗುತ್ತಿಲ್ಲ.
ಬ್ಯಾಂಕ್, ಉದ್ಯಮಗಳಿಗೆ ಹಣಕಾಸಿನ ಕೊರತೆ ಎದುರಾಗಿದ್ದು, ಆಹಾರ ಮತ್ತು ತೈಲ ಬೆಲೆಗಳು ತಾರಾಮಾರಾ ಏರಿಕೆ ಆಗಿವೆ. ಈ ವರ್ಷದ ಅಂತ್ಯದ ಹೊತ್ತಿಗೆ ಅಫ್ಘಾನಿಸ್ತಾನದಲ್ಲಿ 32 ಲಕ್ಷ ಮಕ್ಕಳು ಗಂಭೀರ ಸ್ವರೂಪದ ಅಪೌಷ್ಟಿಕತೆಯಿಂದ ನರಳುವಂತಾಗಬಹುದು, ಆ ಪೈಕಿ 10 ಲಕ್ಷ ಮಕ್ಕಳು ತಾಪಮಾನ ಇಳಿಕೆಯಿಂದ ಸಾವಿಗೀಡಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಆಹಾರಕ್ಕೆ ಬದಲಾಗಿ ಪೀಠೋಪಕರಣಗಳ ವಿನಿಮಯ
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಎಂಥ ಪರಿಸ್ಥಿತಿ ಅಂದರೆ, ಹತಾಶ ಕುಟುಂಬಗಳು ರಸ್ತೆ ಪಕ್ಕದಲ್ಲಿ ತಮ್ಮ ಮನೆಯ ಪೀಠೋಪಕರಣಗಳನ್ನು ಆಹಾರಕ್ಕೆ ಬದಲಿಯಾಗಿ ನೀಡುತ್ತಿದ್ದಾರೆ.
ಇತರ ಪ್ರಮುಖ ನಗರಗಳಲ್ಲಿ ಸರ್ಕಾರದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ತುರ್ತು ಔಷಧಗಳನ್ನು ಖರೀದಿ ಮಾಡುವುದಕ್ಕೆ ಹಣ ಇಲ್ಲ. ಅಷ್ಟೇ ಅಲ್ಲ, ವೈದ್ಯರು, ನರ್ಸ್ಗಳಿಗೆ ಹಣ ಪಾವತಿಸುವುದಕ್ಕೂ ಆಗುತ್ತಿಲ್ಲ. ವೈದ್ಯಕೀಯ ಸಿಬ್ಬಂದಿ ಪೈಕಿ ಕೆಲವರು ಈಗಾಗಲೇ ಕೆಲಸ ಬಿಟ್ಟಿದ್ದಾರೆ.
ಆರ್ಥಿಕ ನಿರಾಶ್ರಿತರು ಇರಾನ್, ಪಾಕಿಸ್ತಾನದ ಗಡಿಯ ಕಡೆಗೆ ಸಾಗುತ್ತಕೇ ಇದ್ದಾರೆ. ಅಂತರರಾಷ್ಟ್ರೀಯ ಸಮುದಾಯಗಳಿಗೆ ಅಫ್ಘಾನಿಸ್ತಾನದ ಜನರ ಬಗ್ಗೆ ಅಪಾರ ಕಾಳಜಿ ಇರುವುದು ಹೌದು. ಆದರೆ ಹಣವನ್ನು ತಾಲಿಬಾನ್ಗಳ ಕೈಗೆ ಇಡುವುದು ಹೇಗೆ ಎಂಬುದು ಆತಂಕಕ್ಕೆ ಕಾರಣವಾಗಿದೆ.
ಅಫ್ಘಾನಿಸ್ತಾನ ಮತ್ತು ನೆರೆಯ ದೇಶಗಳಲ್ಲಿ ಇರುವ ಆಫ್ಘನ್ ನಿರಾಶ್ರಿತರಿಗೆ 129 ಕೋಟಿ ಅಮೆರಿಕನ್ ಡಾಲರ್ ಒದಗಿಸುವುದಾಗಿ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟವು ಭರವಸೆ ನೀಡಿವೆ. ಈ ನೆರವಿನಿಂದ ತುಂಮ ದೊಡ್ಡ ಮಟ್ಟದ ಅನುಕೂಲ ಏನೂ ಆಗಲ್ಲ ಎನ್ನುತ್ತಾರೆ ಆರ್ಥಿಕತಜ್ಞರು ಮತ್ತು ಎನ್ಜಿಒಗಳು.
"ಒಂದು ವೇಳೆ ಇಲ್ಲಿನ ವ್ಯವಸ್ಥೆಯನ್ನು ಮುಂದಿನ ಕೆಲ ತಿಂಗಳಲ್ಲಿ ಕಳೆದುಕೊಂಡು ಬಿಟ್ಟರೆ, ದೇಶಕ್ಕೆ ಅಗತ್ಯ ಇರುವುದನ್ನು ಪೂರೈಕೆ ಮಾಡುವುದಕ್ಕೆ ಬೇಕಾದದ್ದನ್ನು ಪುನರ್ನಿರ್ಮಿಸುವುದು ಕಷ್ಟ.
ಈ ಹಿಂದಿನ ಸರ್ಕಾರದ ಅಧಿಯಲ್ಲಿ ದೇಶದ ಜಿಡಿಪಿಯ ಶೇ 45ರಷ್ಟು ವಿದೇಶೀ ನೆರವಿನಿಂದ ಬರುತ್ತಿತ್ತು. ಅದು ಸರ್ಕಾರದ ಬಜೆಟ್‌ನ ಶೇ 75ರಷ್ಟು ಆಗುತ್ತಿತ್ತು. ಅದರಲ್ಲೇ ಆರೋಗ್ಯ, ಶೈಕ್ಷಣಿಕ ಸೇವೆಯೂ ಒಳಗೊಂಡಿತ್ತು. ಆದರೆ ಯಾವಾಗ ತಾಲಿಬಾನ್ ಆಡಳಿತ ಬಂತೋ ಅಮೆರಿಕದಲ್ಲಿನ ಬೈಡನ್ ಆಡಳಿತವು ಅಫ್ಘಾನಿಸ್ತಾನದ ವಿದೇಶೀ ಮೀಸಲು ಮೊತ್ತವಾದ 950 ಕೋಟಿ ಡಾಲರ್ ಸ್ಥಗಿತಗೊಳಿಸಿತು. ಅಫ್ಘಾನಿಸ್ತಾನದ ಕೇಂದ್ರ ಬ್ಯಾಂಕ್ ಅವಲಂಬಿತ ಆಗಿದ್ದ ಯುಎಸ್ ಡಾಲರ್ ಒಳಗೊಂಡ ರವಾನೆಯನ್ನು ನಿಲ್ಲಿಸಿತು.
ಅಫ್ಘಾನಿಸ್ತಾನವು ಮೂಲಭೂತ ಆಹಾರಗಳು, ಇಂಧನ ಮತ್ತು ಉತ್ಪಾದನೆ ಸರಕುಗಳಿಗಾಗಿ ಆಮದುಗಳ ಮೇಲೆ ದೀರ್ಘಕಾಲದಿಂದ ಅವಲಂಬಿತವಾಗಿದೆ. ಇದು ಅಲ್ಲಿನ ಜೀವಸೆಲೆಯಾಗಿದ್ದು, ಈ ಬೇಸಿಗೆಯಲ್ಲಿ ತಾಲಿಬಾನ್‌ನ ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ನೆರೆಯ ದೇಶಗಳು ತಮ್ಮ ಗಡಿಗಳನ್ನು ಮುಚ್ಚಿದ ನಂತರ ವ್ಯಾಪಾರದ ಅಡೆತಡೆಗಳು ಔಷಧದಂತಹ ಮುಖ್ಯ ಸರಕುಗಳ ಕೊರತೆ ಉಂಟುಮಾಡಿದೆ. ಆದರೆ ಹಣಕಾಸಿನ ಸೇವೆಗಳ ಕುಸಿತವು ಅಮೆರಿಕನ್ ಡಾಲರ್‌ಗಳು ಮತ್ತು ಆಮದುಗಳಿಗಾಗಿ ಬ್ಯಾಂಕ್ ಸಾಲಗಳನ್ನು ಅವಲಂಬಿಸಿರುವ ವ್ಯಾಪಾರಿಗಳ ಕತ್ತು ಹಿಸುಕಿದೆ.
ಐತಿಹಾಸಿಕವಾಗಿಯೇ ಯಾವುದೇ ದೇಶ ಇಷ್ಟು ವೇಗವಾಗಿ ಇಷ್ಟು ದೊಡ್ಡ ಪ್ರಮಾಣದ ಆರ್ಥಿಕ ಪತನ ಕಂಡಿರಲಿಲ್ಲ ಎನ್ನುತ್ತಾರೆ ಆರ್ಥಿಕ ತಜ್ಞರು. ಅಂತರರಾಷ್ಟ್ರೀ ಹಣಕಾಸು ನಿಧಿಯಿಂದ ಕಳೆದ ತಿಂಗಳು ಎಚ್ಚರಿಸಿದಂತೆ, ಈ ವರ್ಷ ಶೇ 30ರಷ್ಟು ಆರ್ಥಿಕತೆ ಕುಸಿಯಬಹುದು.
ವೈದ್ಯರನ್ನೂ ಒಳಗೊಂಡಂತೆ ಶಿಕ್ಷಕರು ಮತ್ತಿತರ ಸರ್ಕಾರಿ ನೌಕರರಿಗೆ ತಿಂಗಳುಗಳಿಂದ ವೇತನ ಬಂದಿಲ್ಲ. ಯುಎನ್ಡಿಪಿ ಅಂದಾಜು ಮಾಡುವಂತೆ, ಮುಂದಿ ವರ್ಷದ ಮಧ್ಯ ಭಾಗದ ಹೊತ್ತಿಗೆ ಅಫ್ಘನ್ ಜನಸಂಖ್ಯೆಯ ಶೇ 97ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿರುತ್ತಾರೆ.
ಇನ್ನು ಈಗಾಗಲೇ ಅಂದಿನದು ಅಂದಿಗೆ ಎಂದು ಬದುಕುತ್ತಿರುವವರ ಸ್ಥಿತಿ ಮತ್ತೂ ಭೀಕರವಾಗುತ್ತದೆ. ಅಂದಹಾಗೆ ತಾಲಿಬಾನ್ನಿಂದ ಅಫ್ಘಾನಿಸ್ತಾನ್ ತೆಕ್ಕೆಗೆ ತೆಗೆದುಕೊಳ್ಳುವ ಮುಂಚೆಯೇ ಆರ್ಥಿಕತೆ ತೆವಳುತ್ತಿತ್ತು. ನಿಧಾನ ಪ್ರಗತಿ, ಭ್ರಷ್ಟಾಚಾರ, ತೀವ್ರ ಬಡತನ ಹಾಗೂ ಗಂಭೀರ ಸ್ವರೂಪದ ಬರದಿಂದ ದೇಶ ನರಳುತ್ತಿತ್ತು.
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications