ಸಿರಿಯಾದಲ್ಲಿ ಬಂಡುಕೋರರ ಬೆಂಕಿ: ಜೀವ ಉಳಿಸಿಕೊಳ್ಳಲು ಓಡುತ್ತಿರುವ ಜನ!
ಸಿರಿಯಾ ಕೊತ, ಕೊತ ಕುದಿಯುತ್ತಿದ್ದು, ಸಿರಿಯಾದಲ್ಲಿ ಬಂಡುಕೋರರ ಬೆಂಕಿ ಧಗಧಗಿಸಿದೆ. ಸಿರಿಯಾ ಸರ್ಕಾರದ ವಿರುದ್ಧ ಹಲವು ವರ್ಷಗಳ ಹಿಂದೆ ಶುರುವಾಗಿದ್ದ ಬಡಿದಾಟ ಒಂದಷ್ಟು ತಣ್ಣಗೆ ಆಗಿತ್ತು. ಇದರ ಜೊತೆಗೆ ಬಂಡುಕೋರರು ಕೂಡ ಸೈಲೆಂಟ್ ಆಗಿದ್ದರು. ಆದರೆ ಈ ಪರಿಸ್ಥಿತಿ ಈಗ ಮತ್ತೆ ಬದಲಾಗಿದ್ದು, ಸಿರಿಯಾದಲ್ಲಿ ಬಂಡುಕೋರರು ನೇರವಾಗಿ ದಾಳಿಯನ್ನ ಆರಂಭ ಮಾಡಿದ್ದಾರೆ. ಸಿರಿಯಾ ಸರ್ಕಾರದ ವಿರುದ್ಧ ರೊಚ್ಚಿಗೆದ್ದು ಅಟ್ಯಾಕ್ ಮಾಡುತ್ತಿರುವ ಬಂಡುಕೋರರು, ಇದೀಗ ಪ್ರಮುಖ ನಗರಗಳನ್ನೇ ತಮ್ಮ ವಶಕ್ಕೆ ಪಡೆಯುತ್ತಿದ್ದಾರೆ.
ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಆಡಳಿತದ ವಿರುದ್ಧವೇ ತಿರುಗಿಬಿದ್ದಿದ್ದ ಬಂಡುಕೋರರ ಗುಂಪು, 2011 ರಲ್ಲಿ ಬೃಹತ್ ಹೋರಾಟ ಶುರು ಮಾಡಿತ್ತು. ಹೀಗೆ ಶುರುವಾಗಿದ್ದ ಹೋರಾಟ ಸುಮಾರು 13 ವರ್ಷ, 9 ತಿಂಗಳು ಮುಗಿಸಿರುವ ಸಮಯದಲ್ಲೇ ನೇರವಾಗಿ ಸಿರಿಯಾ ದೇಶದ ರಾಜಧಾನಿಗೆ ನುಗ್ಗಿರುವ ಬಂಡುಕೋರರ ಗುಂಪು ಡಮಾಸ್ಕಸ್ ನಗರವನ್ನು ವಶಕ್ಕೆ ಪಡೆದಿದೆ. ಈ ಮೂಲಕ ಹೊಸ ಸಂಚಲನ ಮಧ್ಯಪ್ರಾಚ್ಯ ಭಾಗದಲ್ಲಿ ಇದೀಗ ಸೃಷ್ಟಿಯಾಗಿದೆ.

ಗಾಜಾ, ಲೆಬನಾನ್ ಜೊತೆಗೆ ಸಿರಿಯಾ!
ಮಧ್ಯಪ್ರಾಚ್ಯ ಈಗ ಯುದ್ಧದ ಕಾರ್ಖಾನೆ ರೀತಿ ಆಗಿ ಹೋಗಿದೆ. ಯಾಕಂದ್ರೆ ಈ ಭಾಗದಲ್ಲಿ ಈಗಾಗಲೇ ಹಲವು ಯುದ್ಧಗಳು ನಡೆಯುತ್ತಿವೆ. ಒಂದು ಕಡೆ ಇಸ್ರೇಲ್ & ಗಾಜಾ ಪಟ್ಟಿ ಮಧ್ಯೆ ರಣಭೀಕರ ಕಾಳಗ ನಡೆಯುತ್ತಿದೆ, ಮತ್ತೊಂದು ಕಡೆ ಇಸ್ರೇಲ್ & ಲೆಬನಾನ್ ನಡುವೆ ಕೂಡ ಭೀಕರ ಯುದ್ಧ ನಡೆದಿತ್ತು. ಇದಕ್ಕಿಂತ ಮೊದಲೇ ಸಿರಿಯಾದಲ್ಲಿ ನಾಗರಿಕ ದಂಗೆಗಳು ಶುರು ಆಗಿದ್ದವು. ಇದೀಗ ಸಿರಿಯಾ ಆಂತರಿಕ ದಂಗೆ ಅಂತಿಮ ಹಂತಕ್ಕೆ ಬಂದಂತೆ ಕಾಣುತ್ತಿದೆ. ಇದರ ಭಾಗವಾಗಿ ಇದೀಗ ಬಂಡುಕೋರರು ಸಿರಿಯಾ ಮೇಲೆ ಭಾಗಶಃ ಹಿಡಿತ ಸಾಧಿಸಿದ್ದಾರೆ.
ಸಿರಿಯಾ ದೇಶದಲ್ಲಿ ದೊಡ್ಡ ತಿಕ್ಕಾಟ
ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಕುಟುಂಬ ಸುಮಾರು 50 ವರ್ಷಗಳಿಂದ ಸಿರಿಯಾದಲ್ಲಿ ಆಡಳಿತ ನಡೆಸಿಕೊಂಡು ಬರುತ್ತಿದೆ. ಹೀಗಿದ್ದಾಗ ಬಶರ್ ಅಲ್ ಅಸ್ಸಾದ್ ಕುಟುಂಬದ ಆಡಳಿತ ವಿರೋಧಿಸಿ, ಸಿರಿಯಾ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ತಿಕ್ಕಾಟವು ಕೂಡ ಆರಂಭ ಆಗಿತ್ತು. ಸಿರಿಯಾ ಸರ್ಕಾರದ ವಿರುದ್ಧ ರೊಚ್ಚಿಗೆದ್ದು ಅಟ್ಯಾಕ್ ಮಾಡುತ್ತಿರುವ ಬಂಡುಕೋರರು, ಇದೀಗ ಪ್ರಮುಖ ನಗರಗಳನ್ನೇ ತಮ್ಮ ವಶಕ್ಕೆ ಪಡೆಯುತ್ತಿದ್ದಾರೆ. 2011 ರಲ್ಲಿ ಶುರುವಾಗಿದ್ದ ಈ ತಿಕ್ಕಾಟ ಇದೀಗ ಕೊನೆಯಾಗುವ ಹಂತ ತಲುಪಿದೆ.
ಪ್ರಮುಖವಾಗಿ ಸಿರಿಯಾ ರಾಜಧಾನಿಗೆ ನುಗ್ಗಿದ ಬಂಡುಕೋರರು ಅಧ್ಯಕ್ಷರೇ ಎಸ್ಕೇಪ್ ಆಗುವಂತೆ ಮಾಡಿದ್ದಾರೆ. ತಮ್ಮ ಜೀವನ & ಜೀವ ಉಳಿಸಿಕೊಳ್ಳಲು, ಸಿರಿಯಾ ಅಧ್ಯಕ್ಷರಾದ ಬಶರ್ ಅಲ್ ಅಸ್ಸಾದ್ ಎಸ್ಕೇಪ್ ಆಗಿದ್ದಾರಾ? ಎಂಬ ಪ್ರಶ್ನೆ ಮೂಡಿದೆ. ಆದರೆ ಈ ಕುರಿತು ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ, ಆದರೆ ಹಿಂಸಾಚಾರವು ಭುಗಿಲೆದ್ದಿದೆ. ಹೀಗಾಗಿ ಸಿರಿಯಾ ಮತ್ತೆ ಬೂದಿ ಮುಚ್ಚಿರುವ ಕೆಂಡವಾಗಿದೆ.












Click it and Unblock the Notifications