ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಮಗುವಿನ ಜನನದಿಂದ 800 ಕೋಟಿ ತಲುಪಿದ ವಿಶ್ವದ ಜನಸಂಖ್ಯೆ

|
Google Oneindia Kannada News

ನವದೆಹಲಿ, ನವೆಂಬರ್ 15: ವಿಶ್ವಸಂಸ್ಥೆಯು 'ವಿಶ್ವ ಜನಸಂಖ್ಯೆಯ ನಿರೀಕ್ಷೆಗಳು 2022' ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ, ನವೆಂಬರ್ 15ರಂದು ವಿಶ್ವದ ಜನಸಂಖ್ಯೆ 8 ಶತಕೋಟಿ (800 ಕೋಟಿ) ಮುಟ್ಟಿದೆ. ಇಂತಹ ಅಪರೂಪದ ಸಂದರ್ಭದಲ್ಲಿ ಇಂದು ಜನಿಸಿದ ಮೊದಲ ಮಗುವಿನಿಂದ ವಿಶ್ವದ ಜನಸಂಖ್ಯೆ 800 ಕೋಟಿಗೆ ತಲುಪಿದೆ.

'ಇದೊಂದು ದೊಡ್ಡ ಸಾಧನೆಯಾಗಿದೆ. ಈ ಸುಂದರ ಕ್ಷಣವನ್ನು ಹಂಚಿಕೊಳ್ಳಲು ನನಗೆ ಇಷ್ಟವಾಗುತ್ತಿದೆ' ಎಂದು ವಿಶ್ವಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ.

ಇಂತಹ ಅಪರೂಪದ ಮಗುವಿನ ಜನನ ಇಂದು ಫಿಲಿಪೈನ್ಸ್‌ನಲ್ಲಿ ಆಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ಕೇಕ್‌ ಕಟ್‌ ಮಾಡಿ ಸಂಭ್ರಮಿಸಿದ್ದಾರೆ.

ಇಂದು ನವೆಂಬರ್ 15ರ ಬೆಳಿಗ್ಗೆ ಫಿಲಿಪೈನ್ಸ್‌ನಲ್ಲಿ ಜನಿಸಿದ ವಿನಿಸ್, ವಿಶ್ವದ 800ನೇ ಕೋಟಿ ಜನಸಂಖ್ಯೆಗೆ ಸಾಕ್ಷಿಯಾದ ಮಗು. ಮಾರ್ಗರಿಟಾ ವಿಲೋರೆಂಟೆ ಎಂಬ ಮಹಿಳೆ ಫಿಲಿಪ್ಪೀನ್ಸ್‌ನ ಡಾ. ಜೋಸ್ ಫ್ಯಾಬೆಲ್ಲಾ ಮೆಮೂರಿಯಲ್‌ ಆಸ್ಪತ್ರೆಯಲ್ಲಿ ಈ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಾಹಿತಿಯ ಪ್ರಕಾರ, ಈ ಸುಂದರ ಹೆಣ್ಣು ಮಗು ಸಂಪೂರ್ಣವಾಗಿ ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Symbolic Eight Billionth Baby Born In Manila

ವಿಶ್ವದ 8ನೇ ಮಿಲಿಯನ್ ವ್ಯಕ್ತಿ ವಿನಿಸ್ ಅವರ ಜನ್ಮದಿನವನ್ನು ಫಿಲಿಪೈನ್ಸ್‌ನ ಡಾ. ಜೋಸ್ ಫಾಬೆಲಾ ಸ್ಮಾರಕ ಆಸ್ಪತ್ರೆಯಲ್ಲಿ ಆಚರಿಸಲಾಯಿತು. ಈ ಮಗು ಆಸ್ಪತ್ರೆಯಲ್ಲಿ ಜನಿಸಿರುವುದು ವಿಶೇಷ ಎಂದು ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಮಗುವಿನ ತಾಯಿಗೆ ಕೇಕ್ ನೀಡಿದ್ದಾರೆ. ಈ ವಿಶೇಷ ಕೇಕ್‌ನಲ್ಲಿ "8 ಬಿಲಿಯನ್‌ ಬೇಬಿ" (800 ಕೋಟಿಯ ಮಗು) ಎಂದು ಬರೆಯಲಾಗಿದೆ.

ಚೀನಾವನ್ನು ಹಿಂದಿಕ್ಕಲಿದೆ ಭಾರತ!

ವಿಶ್ವಸಂಸ್ಥೆಯ ಜುಲೈ 2022ರ ವರದಿಯ ಪ್ರಕಾರ, ಭಾರತವು 2023ರಲ್ಲಿ ಜನಸಂಖ್ಯೆಯ ವಿಷಯದಲ್ಲಿ ಚೀನಾವನ್ನು ಹಿಂದಿಕ್ಕಲಿದೆ. ಅಂದರೆ ಮುಂದಿನ ವರ್ಷ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲಿದೆ. 2022ರಲ್ಲಿ ಚೀನಾದ ಜನಸಂಖ್ಯೆಯು 142.6 ಕೋಟಿಗೆ ಹತ್ತಿರವಾಗಲಿದ್ದು, ಭಾರತದ ಜನಸಂಖ್ಯೆಯು ಸುಮಾರು 141.2 ಕೋಟಿಯಾಗಲಿದೆ. ಭಾರತದ ಜನಸಂಖ್ಯೆಯು ವಿಶ್ವದ ಜನಸಂಖ್ಯೆಯ ಶೇಕಡಾ 17ರಷ್ಟಿದೆ. ಮತ್ತೊಂದೆಡೆ, ಗ್ಲೋಬಲ್ ಪ್ರಿಂಟ್ ನೆಟ್‌ವರ್ಕ್‌ನ 2022ರ ವರದಿಯ ಪ್ರಕಾರ, ಭಾರತದ ಜನಸಂಖ್ಯೆಯನ್ನು ಪರಿಗಣಿಸಿ, ಅದರ ಭೂಮಿಯಲ್ಲಿರುವ ಜೈವಿಕ ಸಂಪನ್ಮೂಲಗಳಲ್ಲಿ ಶೇಕಡಾ 171 ರಷ್ಟು ಕೊರತೆಯಿದೆ. ಅಂದರೆ, ಈ ಕೊರತೆಯನ್ನು ಯಾವಾಗ ಪೂರೈಸಲಾಗುತ್ತದೆ. ಭಾರತದ 141 ಕೋಟಿ ಜನಸಂಖ್ಯೆಗೆ ಇದು ಸಾಕಾಗುತ್ತದೆ ಎಂದು ವಿಶ್ವ ಸಂಸ್ಥೆಯ ವರದಿ ಹೇಳಿದೆ.

English summary
A baby girl born in Manila on Tuesday is one of the newborns symbolising being the 8 billionth person in the world Read more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X