ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿಸ್ ನ ಲೈಂಗಿಕ ಕ್ರೌರ್ಯಕ್ಕೆ ನಲುಗಿದವಳ ಕರುಳು ಹಿಂಡುವ ಕಥೆ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 17: ಆಕೆ ಹೆಸರು ನಾದಿಯಾ ಮುರಾದ್ ಬಸಿ ತಹಾ. ವಯಸ್ಸು ಇಪ್ಪತ್ಮೂರು ವರ್ಷ. ಆಕೆಯನ್ನು ವಿಶ್ವಸಂಸ್ಥೆಯಿಂದ ಮಾನವ ಕಳ್ಳ ಸಾಗಣೆ ವಿರುದ್ಧದ ಅಭಿಯಾನಕ್ಕೆ ಸದ್ಭಾವನಾ ರಾಯಭಾರಿಯನ್ನಾಗಿ ಮಾಡಲಾಗಿದೆ. ಆಕೆ ಕೂಡ ಮಾನವ ಕಳ್ಳಸಾಗಣೆಯಿಂದ ಬಚಾವಾದ ಹೆಣ್ಣುಮಗಳು. ಈ ರೀತಿ ಸಂತ್ರಸ್ತೆಯೊಬ್ಬಳಿಗೆ ಇಂಥ ಗೌರವ ಸಿಗುತ್ತಿರುವುದು ಸಹ ಇದೇ ಮೊದಲು.

ಇರಾಕ್ ನ ಯಾಜಿದಿ ಜನಾಂಗಕ್ಕೆ ಸೇರಿದ ನಾದಿಯಾ ಮುರಾದ್, ಆ ಜನಾಂಗದ ಸಂಕಷ್ಟಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಧ್ವನಿಯಾಗಿದ್ದಾಳೆ. ಐಎಸ್ ಐಎಸ್ ಉಗ್ರರಿಂದ ಇರಾಕ್ ನಲ್ಲಾದ ಕೊಲೆ, ದೌರ್ಜನ್ಯ ಹಾಗೂ ಮಹಿಳೆಯರ ಮೇಲಿನ ಅತ್ಯಾಚಾರದ ಬಗ್ಗೆ ಆಕೆ ಹೇಳುತ್ತಿದ್ದರೆ ತಾನಾಗಿಯೇ ಕಣ್ಣೀರು ಕಪಾಳಕ್ಕೆ ಇಳಿಯುತ್ತದೆ. ದೇಶ-ಭಾಷೆ ಯಾವುದಾದರೇನು ನೋವು ಎಲ್ಲರಿಗೂ ನೋವೇ ಅಲ್ಲವೆ, ಆ ರೀತಿ ನೋವುಂಡ ಹೆಣ್ಣುಮಗಳ ಕರುಣಾಜನಕ ಕಥೆ ಇಲ್ಲಿದೆ.[ಐಎಸ್ಐಎಸ್ ಗೆ ಭಾರತೀಯರೆಂದರೆ ಲೈಂಗಿಕ ಗುಲಾಮರಂತೆ!]

Nadia murad

ಯಾಜಿದಿ ಜನಾಂಗದ ಮೇಲಾದ ದೌರ್ಜನ್ಯವನ್ನು ಆಕೆ ಮಾತುಗಳಲ್ಲೇ ಕೇಳಬೇಕು. "ಉತ್ತರ ಇರಾಕ್ ನ ಕೊಚೊದವಳು ನಾನು. ಕಾಲೇಜಿನಲ್ಲಿ ಓದುತ್ತಿದ್ದೆ. ಬೇಸಿಗೆಯ ಒಂದು ದಿನ ಐಎಸ್ ಐಎಸ್ ಉಗ್ರರು ನಮ್ಮ ಗ್ರಾಮವನ್ನ ಸುತ್ತುವರಿದರು. ಯಾಜಿದಿ ಜನಾಂಗದ 312 ಗಂಡಸರನ್ನ ಒಂದೇ ಗಂಟೆಯಲ್ಲಿ ಕೊಂದರು. ಸಣ್ಣ ವಯಸ್ಸಿನ ಹೆಣ್ಣುಮಕ್ಕಳನ್ನು ಗುಲಾಮರನ್ನಾಗಿ ಮಾಡಿಕೊಳ್ಳಲು ಹೊತ್ತೊಯ್ದರು.

"ನಮ್ಮನ್ನೆಲ್ಲ ಮೊಸೂಲ್ ಗೆ ಹೊತ್ತೊಯ್ದು ಮೂರು ದಿನ ಅಲ್ಲಿಟ್ಟಿದ್ದರು. ಆ ಮೇಲೆ ಅಲ್ಲಿದ್ದ ಗಂಡಸರು ನಮ್ಮನ್ನು ಹಂಚಿಕೊಂಡರು. ಕೆಲವು ಯುವತಿಯರು ಆತ್ಮಹತ್ಯೆ ಮಾಡಿಕೊಂಡರು. ನನಗೆ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸಿರಲಿಲ್ಲ. ಬೇಕಾದರೆ ಅವರೇ ಕೊಲ್ಲಲಿ ಎಂದುಕೊಂಡೆ. ನನ್ನನ್ನ ಕರೆದುಕೊಂಡು ಹೋದವನಿಗೆ ಹೆಂಡತಿ, ಮಗಳು ಇದ್ದರು. ಒಂದು ಕೋಣೆಯೊಳಗೆ ನನ್ನನ್ನ ಇಟ್ಟರು.[ಇರಾಕಿ ಉಗ್ರರ ಕಣ್ಣು ದಕ್ಷಿಣ ಭಾರತದ ಮೇಲೆ ಏಕಿದೆ?]

"ಒಂದು ಸಲ ತಪ್ಪಿಸಿಕೊಳ್ಳೋಕೆ ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ಅದಕ್ಕೆ ಶಿಕ್ಷೆ ಅನ್ನೋ ಹಾಗೆ ಆರು ಜನ ಸೇರಿ ನನ್ನ ಮೇಲೆ ಅತ್ಯಾಚಾರ ಮಾಡಿದರು. ಹೊಡೆದರು. ನಾನು ಪ್ರಜ್ಞೆ ತಪ್ಪುವವರೆಗೆ ನನ್ನ ದೇಹದ ಮೇಲೆ ದೌರ್ಜನ್ಯ ಮಾಡಿದರು. ಈ ರೀತಿಯ ಹಿಂಸೆ ಮೂರು ತಿಂಗಳು ಅನುಭವಿಸಿದ್ದೀನಿ" ಎಂದು ಮುರಾದ್ ಹೇಳುತ್ತಾಳೆ.

ಈ ರೀತಿ ತಪ್ಪಿಸಿಕೊಳ್ಳಲು ಯುವತಿಯರು ಪ್ರಯತ್ನಿಸಿದರೆ ಆಕೆಯನ್ನು ಒಂದು ಕೋಣೆಯಲ್ಲಿರಿಸಿ, ಆ ಕಾಂಪೌಂಡ್ ನಲ್ಲಿರುವ ಎಲ್ಲ ಐಎಸ್ ಐಎಸ್ ಉಗ್ರರೂ ಅತ್ಯಾಚಾರ ಮಾಡುತ್ತಿದ್ದರು. ನನ್ನನ್ನ ಅದೆಷ್ಟೋ ಸಲ ಕೊಂಡು, ಮಾರಿದ್ದಿದೆ ಎಂದು ಮುರಾದ್ ಹೇಳುತ್ತಿದ್ದರೆ ಮೈಯಲ್ಲಿ ನಡುಕ ಹುಟ್ಟುತ್ತದೆ.[ಇರಾಕಿ ಉಗ್ರರಿಂದ 'ಏಡ್ಸ್ ಬಾಂಬ್' ಬೀಳಲಿದೆ ಎಚ್ಚರ!]

2014ರ ನವೆಂಬರ್ ನಲ್ಲಿ ಮುರಾದ್ ಅಲ್ಲಿಂದ ತಪ್ಪಿಸಿಕೊಳ್ಳುತ್ತಾಳೆ. ಸದ್ಯಕ್ಕೆ ಜರ್ಮನಿಯ ಶುಡ್ ಗೆರ್ಟ್ ನಲ್ಲಿ ಆಶ್ರಯ ಪಡೆದಿದ್ದಾಳೆ. ಅಂದಹಾಗೆ, ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಕೆಯ ಹೆಸರನ್ನು ಸೂಚಿಸಲಾಗಿತ್ತು. ಮುರಾದ್ ಇನ್ನು ಮುಂದೆ ಹೆಣ್ಣುಮಕ್ಕಳ ಮಾನವ ಕಳ್ಳಸಾಗಣೆ ವಿರುದ್ಧದ ಅಭಿಯಾನದಲ್ಲಿ ತೊಡಗಿಸಿಕೊಳ್ಳುತ್ತಾಳೆ.

English summary
A 23 years old Nadia Murad basee taha, a survivor of the ISIS atrocities, was selected to be the United Nations Goodwill Ambassador for human trafficking.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X