ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಜಾಬ್ ವಿರೋಧಿ ಪ್ರತಿಭಟನೆ: ಕೂದಲು ಕತ್ತರಿಸಿಕೊಂಡ ಟರ್ಕಿಶ್ ಗಾಯಕಿ

|
Google Oneindia Kannada News

ಇರಾನ್‌ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗೆ ಟರ್ಕಿ ದೇಶದ ಗಾಯಕಿ ಮೆಲೆಕ್ ಮೊಸ್ಸೊ ತಮ್ಮ ಬೆಂಬಲವನ್ನು ನೀಡಿದ್ದಾರೆ. ತಮ್ಮ ಕೂದಲನ್ನು ಕತ್ತರಿಸುವ ಮೂಲಕ ಇರಾನ್ ಹಿಜಾಬ್‌ ವಿರೋಧಿ ಮಹಿಳೆಯರ ಸೈನ್ಯವನ್ನು ಸೇರಿಕೊಂಡಿದ್ದಾರೆ. ಮೆಲೆಕ್ ಮೊಸ್ಸೊ ಅವರು ತಮ್ಮ ಕೂದಲು ಕತ್ತರಿಸುತ್ತಿರುವ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಸೆಪ್ಟೆಂಬರ್ 17 ರಂದು ಕಟ್ಟುನಿಟ್ಟಾದ ಹಿಜಾಬ್ ನಿಯಮಗಳನ್ನು ಪಾಲಿಸದೇ ಇದ್ದ ಕಾರಣ ನೈತಿಕತೆಯ ಪೋಲೀಸರ ಬಂಧನದಲ್ಲಿದ್ದ 22 ವರ್ಷದ ಮಹಾಸಾ ಅಮಿನಿಯ ಸಾವನ್ನಪ್ಪಿದರು. ನಂತರ ಇರಾನ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಆಕೆಯ ಸಾವಿನ ಹತ್ತು ದಿನಗಳ ನಂತರ ನಗರಗಳು, ಪಟ್ಟಣಗಳು ​​ಮತ್ತು ಹಳ್ಳಿಗಳು ಸೇರಿ ಕನಿಷ್ಠ 46 ಸ್ಥಳಗಳಲ್ಲಿ ಇರಾನಿನಾದ್ಯಂತ ಪ್ರತಿಭಟನೆಗಳು ಹರಡಿವೆ. ಭದ್ರತಾ ಪಡೆಗಳೊಂದಿಗಿನ ಘರ್ಷಣೆಯ ನಡುವೆ ನಡೆದ ಪ್ರತಿಭಟನೆಯಲ್ಲಿ ಈವರೆಗೆ 75 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳಾಗಿವೆ.

ಬಿಕಿನಿಯಿಂದ ಬುರ್ಖಾ; ಇರಾನ್‌ನಲ್ಲಿ ಇಸ್ಲಾಮಿಕ್ ಕ್ರಾಂತಿ ಆಗಿದ್ದೇಗೆ?ಬಿಕಿನಿಯಿಂದ ಬುರ್ಖಾ; ಇರಾನ್‌ನಲ್ಲಿ ಇಸ್ಲಾಮಿಕ್ ಕ್ರಾಂತಿ ಆಗಿದ್ದೇಗೆ?

ಇರಾನ್‌ನಲ್ಲಿ ಪ್ರತಿಭಟನಾಕಾರರು ಮಹಾಸಾ ಅಮಿನಿಯ ಸಾವು ಬಂಧನದ ಬಳಿಕ ಹಿಂಸೆಯಿಂದಾಗಿದೆ. ಅವರು ಬಂಧಿಸುವ ಮುನ್ನ ಆರೋಗ್ಯವಾಗಿದ್ದು. ಬಂಧನದ ಬಳಿಕೆ ಅವರು ಅನಾರೋಗ್ಯವಾಗಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ತಮ್ಮ ಕೂದಲನ್ನು ಬಟ್ಟೆಯಲ್ಲಿ ಮುಚ್ಚುವುದಾದರೆ ಕೂದಲು ಯಾಕೆ ಬೇಕು ಎಂಬ ಬೇಸರದಿಂದ ಹಲವಾರು ಮಹಿಳೆಯರು ಕೂದಲನ್ನು ಕತ್ತರಿಸಿಕೊಂಡು ಆಕ್ರೋಶ ಹೊರಹಾಕಿದ್ದಾರೆ. ಇದರೊಂದಿಗೆ ಹಿಜಾಬ್‌ಗೂ ಬೆಂಕಿಯನ್ನು ಹಚ್ಚಿದ್ದಾರೆ. ಇಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಬಹುದು. ಸದ್ಯ ಇದಕ್ಕೆ ಹಿಜಾಬ್ ವಿರೋಧಿ ಪ್ರತಿಭಟನೆಗೆ ಟರ್ಕಿಶ್ ಗಾಯಕಿ ಮೆಲೆಕ್ ಮೊಸ್ಸೊ ತಮ್ಮ ಬೆಂಬಲವನ್ನು ನೀಡಿ ತಮ್ಮ ಕೂದಲನ್ನು ಕತ್ತರಿಸಿಕೊಂಡಿದ್ದಾರೆ.

ಇರಾನ್ ದೇಶದಲ್ಲಿ ಜಾರಿಯಲ್ಲಿರುವ ಕಟ್ಟುನಿಟ್ಟಿನ ಡ್ರೆಸ್ ಕೋಡ್ ವಿರುದ್ಧ ಪ್ರತಿಭಟಿಸಲು ಮಹಿಳಾ ಪ್ರತಿಭಟನಾಕಾರರು ತಮ್ಮ ಕೂದಲನ್ನು ಕತ್ತರಿಸಿ ಹಿಜಾಬ್‌ಗೆ ಬೆಂಕಿ ಹಚ್ಚುವ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ. ಇಂಥ ಹಲವಾರು ವಿಡಿಯೋಗಳು ಇರಾನ್‌ನಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ.

ಇರಾನ್ ಅಧ್ಯಕ್ಷರು ಅಮೆರಿಕನ್ ನಿರೂಪಕಿಗೆ ಹೆಡ್‌ಸ್ಕಾರ್ಫ್ ಹಾಕಲು ಹೇಳಿದಾಗ...!!ಇರಾನ್ ಅಧ್ಯಕ್ಷರು ಅಮೆರಿಕನ್ ನಿರೂಪಕಿಗೆ ಹೆಡ್‌ಸ್ಕಾರ್ಫ್ ಹಾಕಲು ಹೇಳಿದಾಗ...!!

Support for Irans anti-hijab protest: Turkish singer Melek cuts her hair

ಇರಾನ್‌ನ ಷರಿಯಾ ಅಥವಾ ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ, ಏಳು ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ತಮ್ಮ ಕೂದಲನ್ನು ಮುಚ್ಚಲು ಉದ್ದವಾದ, ಸಡಿಲವಾದ ಬಟ್ಟೆಗಳನ್ನು ಧರಿಸುವ ನಿಯಮವನ್ನು ಪಾಲಿಸಬೇಕು. ಜುಲೈ 5 ರಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಹಿಜಾಬ್ ಕಾನೂನನ್ನು ಜಾರಿಗೊಳಿಸಲು ಆದೇಶಿಸಿದ ನಂತರ ಮಹಿಳೆಯರು ಹೇಗೆ ಬಟ್ಟೆ ಧರಿಸಬಹುದು ಎಂಬ ನಿರ್ಬಂಧಗಳ ಹೊಸ ಪಟ್ಟಿಯೇ ಇದೆ. ಮಹಿಳೆಯರು ಮುಖ ಕಾಣುವಂತಿಲ್ಲ, ಕೂದಲು ಕಾಣುವಂತಿಲ್ಲ. ಹಿಜಾಬ್‌ ಕಡ್ಡಾಯವಾಗಿ ಧರಿಸಬೇಕು. ಒಂದು ವೇಳೆ ನಿಯಮ ಮೀರಿದ ಅಪರಾಧಿಗಳು ಸಾರ್ವಜನಿಕ ಖಂಡನೆ, ದಂಡ ಅಥವಾ ಬಂಧನವನ್ನು ಎದುರಿಸುತ್ತಾರೆ.

English summary
Turkish singer Melek Mosso shows support for anti-hijab protests in Iran by cutting her hair.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X