Get Updates
Get notified of breaking news, exclusive insights, and must-see stories!

'ಒಂದು ನಿಮಿಷದಲ್ಲಿ ನೋವಿಲ್ಲದೆ ಸಾಯಿಸುವ ಯಂತ್ರ': ಈ ದೇಶದಲ್ಲಿ ಅನುಮೋದನೆ

ಜ್ಯೂರಿಚ್ ಡಿಸೆಂಬರ್ 8: ಸ್ವಿಟ್ಜರ್ಲೆಂಡ್‌ ಸರ್ಕಾರ 'ಆತ್ಮಹತ್ಯೆ ಯಂತ್ರ' ಬಳಕೆಗೆ ಕಾನೂನು ಅನುಮೋದನೆ ನೀಡಿದೆ. ಒಬ್ಬ ವ್ಯಕ್ತಿಯು ಕೇವಲ ಒಂದು ನಿಮಿಷದಲ್ಲಿ ಈ ಯಂತ್ರವನ್ನು ಬಳಸಿ ತನ್ನ ಪ್ರಾಣವನ್ನು ತ್ಯಾಗ ಮಾಡಬಹುದು. ಈ ಯಂತ್ರದ ಪ್ರಮುಖ ವಿಷಯವೆಂದರೆ, ಈ ಯಂತ್ರವನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡವರು ಯಾವುದೇ ನೋವು ಅನುಭವಿಸದೇ ಸಾಯುತ್ತಾರೆ. ಈ ಯಂತ್ರ ಬಳಸಲು ಸರಕಾರದಿಂದ ಅನುಮತಿ ಸಿಕ್ಕ ಬಳಿಕ ಹಲವು ಪ್ರಶ್ನೆಗಳೂ ಹುಟ್ಟಿಕೊಳ್ಳುತ್ತಿವೆ.

ಸ್ವಿಟ್ಜರ್ಲೆಂಡ್‌ನಲ್ಲಿ 'ಆತ್ಮಹತ್ಯೆ ಯಂತ್ರ' ಬಳಕೆ

ಸ್ವಿಟ್ಜರ್ಲೆಂಡ್‌ನಲ್ಲಿ 'ಆತ್ಮಹತ್ಯೆ ಯಂತ್ರ' ಬಳಕೆ

ಸ್ವಿಟ್ಜರ್ಲೆಂಡ್ ಸರ್ಕಾರವು 'ಸಾರ್ಕೊ' ಎಂಬ 'ಆತ್ಮಹತ್ಯೆ ಯಂತ್ರ'ವನ್ನು ಕಾನೂನುಬದ್ಧಗೊಳಿಸಿದೆ. ಈ ಯಂತ್ರವನ್ನು ಬಳಸಿ ನಿಮಿಷದಲ್ಲಿ ನೋವು ಇಲ್ಲದೆ ವ್ಯಕ್ತಿಯನ್ನು ಕೊಲ್ಲಬಹುದು. ವರದಿಯ ಪ್ರಕಾರ, ಈ ಯಂತ್ರವನ್ನು ಬಳಸುವ ವ್ಯಕ್ತಿಯು ಹೈಪೋಕ್ಸಿಯಾ ಮತ್ತು ಹೈಪೋಕ್ಯಾಪ್ನಿಯಾದಿಂದ ಬಳಲುತ್ತಾರೆ. ಅಂದರೆ, ದೇಹದೊಳಗಿನ ಆಮ್ಲಜನಕದ ಮಟ್ಟವು ಗಮನಾರ್ಹವಾಗಿ ಕುಸಿದು ಅವನು ಸಾಯುತ್ತಾನೆ. ಈ ಪ್ರಕ್ರಿಯೆಯಲ್ಲಿ, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾವುದೇ ನೋವು ಅನುಭವಿಸುವುದಿಲ್ಲ.

ಆತ್ಮಹತ್ಯೆ ಯಂತ್ರ ಹೇಗಿದೆ ನೋಡಿ

ಆತ್ಮಹತ್ಯೆ ಯಂತ್ರ ಹೇಗಿದೆ ನೋಡಿ

ಈ ಆತ್ಮಹತ್ಯಾ ಯಂತ್ರವನ್ನು ಶವಪೆಟ್ಟಿಗೆಯಂತೆ ವಿನ್ಯಾಸಗೊಳಿಸಲಾಗಿದೆ. ಈ ಯಂತ್ರದ ಒಳಗೆ ಕುಳಿತು ಸಹ ಕಾರ್ಯ ನಿರ್ವಹಿಸಬಹುದಾಗಿದೆ. ವರದಿಯ ಪ್ರಕಾರ, ಯಾವುದೇ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಮತ್ತು ಮಾತನಾಡಲು ಅಥವಾ ಕೇಳಲು ಅಥವಾ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಸಾಧ್ಯವಾಗದ ರೋಗಿಗಳು ಮಾತ್ರ ಈ ಯಂತ್ರವನ್ನು ಬಳಸಬಹುದಾಗಿದೆ. ವರದಿಯ ಪ್ರಕಾರ, ದಯಾಮರಣವನ್ನು ಬಯಸುವವರಿಗೆ ಈ ಯಂತ್ರವನ್ನು ವಿನ್ಯಾಸಗೊಳಿಸಲಾಗಿದೆ. ಈ ಗಾಜಿನ ಶವಪೆಟ್ಟಿಗೆಯಲ್ಲಿ ಕುಳಿತ ನಂತರ, ಈ ಯಂತ್ರವು ಮಾನವ ದೇಹದಲ್ಲಿ ಇರುವ ಆಮ್ಲಜನಕದ ಮಟ್ಟವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ಇದು ಅವರ ಸಾವಿಗೆ ಕಾರಣವಾಗುತ್ತದೆ.

ಈ ಯಂತ್ರವನ್ನು ತಯಾರಿಸಿದ ಡಾಕ್ಟರ್

ಈ ಯಂತ್ರವನ್ನು ತಯಾರಿಸಿದ ಡಾಕ್ಟರ್

ವರದಿಯ ಪ್ರಕಾರ, ಸ್ವಿಟ್ಜರ್ಲೆಂಡ್ ಮೂಲದ ಎನ್‌ಜಿಒ ಎಕ್ಸಿಟ್ ಇಂಟರ್‌ನ್ಯಾಷನಲ್‌ನ ನಿರ್ದೇಶಕ ಮತ್ತು ಡಾಕ್ಟರ್ ಡೆತ್ ಎಂದು ಕರೆಯಲ್ಪಡುವ ಪ್ರಸಿದ್ಧ ವೈದ್ಯ ಡಾ. ಫಿಲಿಪ್ ನಿಟ್ಷ್ಕೆ ಅವರು ಈ ಯಂತ್ರವನ್ನು ರಚಿಸಿದ್ದಾರೆ. ಯಂತ್ರವನ್ನು ತಯಾರಿಸುವ ಆಲೋಚನೆ ಅವರ ಮನಸ್ಸಿನಲ್ಲಿ ಬಂದಿತು. ಇದನ್ನು ತಯಾರಿಸಲು ಪ್ರಯತ್ನಿಸಿದರು. ಇದು ಕೊನೆಗೆ ಯಶಸ್ವಿಯಾಗಿದೆ. ಈ ಸಂಪೂರ್ಣ ಪ್ರಕ್ರಿಯೆಯು ಒಂದು ನಿಮಿಷಕ್ಕಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಈ ಶವಪೆಟ್ಟಿಗೆ ವ್ಯಕ್ತಿಯು "ಶಾಂತವಾಗಿ ಮತ್ತು ನೋವುರಹಿತವಾಗಿ" ಸಾಯಲು ಅನುವು ಮಾಡಿಕೊಡುತ್ತದೆ. ಇದು ದಯಾಮರಣ ಯಂತ್ರಗಳಲ್ಲಿನ ಪ್ರಗತಿಗೆ ಇತ್ತೀಚಿನ ಉದಾಹರಣೆಯಾಗಿದೆ ಮತ್ತು ದಯಾಮರಣ ಕಾನೂನುಬದ್ಧವಾಗಿರುವ ದೇಶಗಳಲ್ಲಿ ಈ ಯಂತ್ರಗಳನ್ನು ಸಾಕಷ್ಟು ಮಾರಾಟ ಮಾಡುವ ಸಾಧ್ಯತೆ ಇದೆ.

ಟೀಕೆಗೆ ಗುರಿಯಾದ ಸರ್ಕಾರ

ಟೀಕೆಗೆ ಗುರಿಯಾದ ಸರ್ಕಾರ

ಡಾ.ಡೆತ್ ಅವರು ತಯಾರಿಸಿದ ಈ ಯಂತ್ರಕ್ಕೆ ಕಾನೂನು ಒಪ್ಪಿಗೆ ಸಿಕ್ಕ ಬಳಿಕ, ಡಾ.ಡೆತ್ ಹಾಗೂ ಸರ್ಕಾರದ ಮೇಲೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಜಗತ್ತಿನಾದ್ಯಂತ ಇಂತಹ ಯಂತ್ರದ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ. ಕಳೆದ ವರ್ಷ 1,300 ಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಳ್ಳಲು ಸರ್ಕಾರದ ಅನುಮತಿಯನ್ನು ಕೋರಿದರು. ಈ ಯೋಜನೆಯು ತುಂಬಾ ದುಬಾರಿಯಾಗಿದೆ. ಜೊತೆಗೆ ಇದು ಸಹಜ ಸಾವಾಗುವುದಿಲ್ಲ ಎಂದು ಹಲವಾರು ಜನ ಟೀಕಿಸಿದ್ದಾರೆ. ಆದರೆ ಇದು ಬದುಕಲು ಸಾಧ್ಯವಾಗದೇ, ಗಂಭೀರ ಕಾಐಇಲೆಗಳಿಂದ ಬಳಲುತ್ತಿರುವವರಿಗೆ ಸಹಕಾರಿಯಾಗಲಿದೆ ಎಂದು ವೈದ್ಯರು ಹೇಳುತ್ತಾರೆ.

ಆತ್ಮಹತ್ಯೆ ಯಂತ್ರ

ಆತ್ಮಹತ್ಯೆ ಯಂತ್ರ

ದಯಾಮರಣ ಬಯಸುತ್ತಿರುವವರಿಗೆ ಈ ಸಾಧನ ಸಮಾಧಿ ಇದ್ದಂತೆ. ವರದಿಯ ಪ್ರಕಾರ, ಈ ಸಾಧನದಲ್ಲಿ ಸಾರಜನಕದ ಹರಿವು ಇದೆ, ಇದು ಮನುಷ್ಯರ ದೇಹದಲ್ಲಿ ಇರುವ ಆಮ್ಲಜನಕವನ್ನು ಅತ್ಯಂತ ವೇಗವಾಗಿ ಕಡಿಮೆ ಮಾಡಲು ಪ್ರಾರಂಭಿಸುತ್ತದೆ. ನಂತರ ವ್ಯಕ್ತಿಯು ಸಾಯುತ್ತಾನೆ. ವ್ಯಕ್ತಿಯ ಮರಣದ ನಂತರ, ಮೃತ ದೇಹವು ಶವಪೆಟ್ಟಿಗೆಯಲ್ಲಿ ಹೊರಬರುತ್ತದೆ ಮತ್ತು ಯಂತ್ರವು ಶವಪೆಟ್ಟಿಗೆಯಿಂದ ಪ್ರತ್ಯೇಕಗೊಳ್ಳುತ್ತದೆ.

ಹಿಟ್ಲರನ ಗ್ಯಾಸ್ ಚೇಂಬರ್‌ಗೆ ಹೋಲಿಕೆ

ಹಿಟ್ಲರನ ಗ್ಯಾಸ್ ಚೇಂಬರ್‌ಗೆ ಹೋಲಿಕೆ

ಈ ಆತ್ಮಹತ್ಯಾ ಯಂತ್ರವನ್ನು ತೀವ್ರವಾಗಿ ಟೀಕಿಸಲಾಗುತ್ತಿದೆ. ಅನೇಕರು ಇದನ್ನು ಹಿಟ್ಲರನ ಗ್ಯಾಸ್ ಚೇಂಬರ್‌ಗೆ ಹೋಲಿಸುತ್ತಿದ್ದಾರೆ. ಇಂತಹ ಯಂತ್ರಗಳು 'ಆತ್ಮಹತ್ಯೆ'ಯನ್ನು ವೈಭವೀಕರಿಸುತ್ತವೆ ಮತ್ತು ಜನರನ್ನು ಆತ್ಮಹತ್ಯೆಗೆ ಪ್ರೋತ್ಸಾಹಿಸುತ್ತವೆ ಎಂದು ಹಲವರು ಹೇಳುತ್ತಾರೆ. ಆದರೆ, ಈಗ ಸ್ವಿಟ್ಜರ್ಲೆಂಡ್ ಸರ್ಕಾರವು ಸಿರ್ಕೊ ಎಂಬ ಆತ್ಮಹತ್ಯೆ ಯಂತ್ರಕ್ಕೆ ಕಾನೂನು ಅನುಮೋದನೆ ನೀಡಿರುವುದರಿಂದ ಮುಂದಿನ ವರ್ಷದಿಂದ ಅದರ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ.

Recommended Video

      ವಾಯುಪಡೆಯ Mi-17V5 ಹೆಲಿಕಾಪ್ಟರ್ ಸ್ಪೆಷಾಲಿಟಿ ಏನು? | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+