ಸೌದಿ ಅರೇಬಿಯಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ
ರಿಯಾದ್, ಜುಲೈ 05 : ಸೌದಿ ಅರೇಬಿಯದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ಒಟ್ಟು ಮೂರು ನಗರಗಳಲ್ಲಿ ಸ್ಫೋಟಗಳು ನಡೆದಿದ್ದು, ಎರಡು ಸ್ಫೋಟ ಮುಸ್ಲಿಮರ ಪವಿತ್ರ ಕ್ಷೇತ್ರ ಮದೀನಾದ ಆವರಣದಲ್ಲಿ ನಡೆದಿದೆ.
ರಂಜಾನ್ ಮಾಸದಲ್ಲಿಯೇ ಈ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಸೋಮವಾರ ಸಂಜೆ ಈ ದಾಳಿಗಳು ನಡೆದಿದ್ದು, ಯಾವ ಸಂಘಟನೆಯೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಸ್ಫೋಟದಲ್ಲಿ ಮೂವರು ಆತ್ಮಾಹುತಿ ದಾಳಿಕೋರರು ಸಾವನ್ನಪ್ಪಿದ್ದಾರೆ. ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. [ರಂಜಾನ್ ತಿಂಗಳಲ್ಲಿ ಹೆಚ್ಚಾಗುತ್ತಿದೆ ಉಗ್ರರ ದಾಳಿ!]

ಮುಸ್ಲಿಮರ ಪವಿತ್ರ ಕ್ಷೇತ್ರ ಮದೀನಾದ ಆವರಣದಲ್ಲಿ ಎರಡು ಸ್ಫೋಟಗಳು ನಡೆದಿದೆ. ಅಲ್ಪ ಸಂಖ್ಯಾತ ಶಿಯಾ ಸಮುದಾಯದವರೇ ಹೆಚ್ಚಾಗಿ ನೆಲೆಸಿರುವ ಕಾತಿಫ್ ಪ್ರದೇಶದಲ್ಲಿ ಮತ್ತೊಂದು ಸ್ಫೋಟ ನಡೆದಿದೆ. [ಬಾಂಗ್ಲಾ ದಾಳಿ: ಸ್ನೇಹಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುಸೇನ್]
ರಂಜಾನ್ ಮಾಸದಲ್ಲಿ ಭಾರೀ ಸಂಖ್ಯೆಯ ಭಕ್ತರು ಮದೀನಾದ ಆವರಣದಲ್ಲಿ ಸೇರಿರುತ್ತಾರೆ. ಈ ಸಮಯದಲ್ಲಿಯೇ ಬಾಂಬ್ ಸ್ಫೋಟ ನಡೆದಿದೆ. ಐಎಸ್‌ಐಎಸ್ ಉಗ್ರರು ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.












Click it and Unblock the Notifications