• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಕ್ಕರೆ ಸಂಕಷ್ಟದಲ್ಲಿ ಸಿಲುಕಿದ ಪಾಕಿಸ್ತಾನ, 1 ಕೆಜಿ ಬೆಲೆ ಎಷ್ಟು?

|
Google Oneindia Kannada News

ಇಸ್ಲಾಮಾಬಾದ್, ನವೆಂಬರ್ 04: ಪಾಕಿಸ್ತಾನವು ಸಕ್ಕರೆ ಸಂಕಷ್ಟದಲ್ಲಿ ಸಿಲುಕಿದೆ. ಒಂದು ಕೆಜಿ ಸಕ್ಕರೆ ಬೆಲೆ ಬರೋಬ್ಬರಿ 145 ರೂ. ತಲುಪಿದೆ.

ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳುವಲ್ಲಿ ಪಾಕಿಸ್ತಾನ ಪ್ರಮುಖ ಸ್ಥಾನ ವಹಿಸಿತ್ತು. ತಾಲಿಬಾನಿಗಳು ಪಾಕಿಸ್ತಾನವು ನಮ್ಮ ಎರಡನೇ ಮನೆ ಎಂದು ಕರೆದಿದ್ದರು. ಈಗ ಆ ದೇಶಕ್ಕೆ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಕೊಡಿಸಲು ಇನ್ನಿಲ್ಲದ ತಂತ್ರಗಳನ್ನು ಅನುಸರಿಸುತ್ತಿದೆ. ಈ ಬೆನ್ನಲ್ಲೇ ಪಾಕಿಸ್ತಾನಕ್ಕೆ ಸಂಕಷ್ಟವೊಂದು ಎದುರಾಗಿದೆ.

ವಿದೇಶಿ ನಾಯಕರು ನೀಡಿದ್ದ ಉಡುಗೊರೆಗಳನ್ನು ಮಾರಿಕೊಳ್ತಿದ್ದಾರಂತೆ ಇಮ್ರಾನ್ ಖಾನ್ವಿದೇಶಿ ನಾಯಕರು ನೀಡಿದ್ದ ಉಡುಗೊರೆಗಳನ್ನು ಮಾರಿಕೊಳ್ತಿದ್ದಾರಂತೆ ಇಮ್ರಾನ್ ಖಾನ್

ಒಂದೆಡೆ ಅಫ್ಘಾನಿಸ್ತಾನದಲ್ಲೂ ಆಹಾರ, ಆರ್ಥಿಕ ಬಿಕ್ಕಟ್ಟು ತಲೆದೋರಿದೆ. ಇನ್ನು ಪಾಕಿಸ್ತಾನದಲ್ಲಿ ಮೊದಲಿನಿಂದಲೂ ಆರ್ಥಿಕ ಬಿಕ್ಕಟ್ಟು ಇದ್ದು, ಇದೀಗ ಸಕ್ಕರೆ ಬೆಲೆ ತೀವ್ರ ಹೆಚ್ಚಳವಾಗಿರುವುದು ಜನರನ್ನು ಸಂಕಷ್ಟಕ್ಕೆ ತಳ್ಳಿದೆ.

ಅಲ್ಲಿನ ಸ್ಥಳೀಯ ಮಾಧ್ಯಮಗಳು ಹೇಳುವಂತೆ 'ಸಕ್ಕರೆ ಸಂಕಷ್ಟ'ದಲ್ಲಿ ಪಾಕಿಸ್ತಾನ ಸಿಲುಕಿದೆ. ಈಗ ಅಲ್ಲಿ ಒಂದು ಕೆ.ಜಿ ಸಕ್ಕರೆಗೆ ಹೋಲ್​ಸೇಲ್ ಬೆಲೆ 140 ರೂಪಾಯಿ ಇದ್ದರೆ, ರಿಟೇಲ್ ಬೆಲೆ 145 ರೂಪಾಯಿ ಇದೆ ಎಂದು ಅಲ್ಲಿನ ಎಆರ್​ವೈ ನ್ಯೂಸ್ (ARY News) ವರದಿ ಮಾಡಿದೆ. ಅಂದಹಾಗೆ ಇದು ಅಲ್ಲಿನ ಪ್ರಮುಖ ನಗರವಾದ ಕರಾಚಿಯಲ್ಲಿನ ಬೆಲೆ.

ಕಳೆದ ಎರಡು ದಿನಗಳಲ್ಲೇ ಸಕ್ಕರೆ ಬೆಲೆ ಪಾಕಿಸ್ತಾನದಲ್ಲಿ ಒಂದು ಕೆ.ಜಿಗೆ 13 ರೂಪಾಯಿ ಏರಿಕೆಯಾಗಿದೆ. 50 ಕೆಜಿಯ ಸಕ್ಕರೆ ಮೂಟೆ ಬೆಲೆ 200 ರೂಪಾಯಿ ಹೆಚ್ಚಳವಾಗಿದ್ದು, 6,600 ರೂಪಾಯಿ ಆಸುಪಾಸಿನಲ್ಲಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಈಗಾಗಲೇ ಹಣದುಬ್ಬರ ಪಾಕಿಸ್ತಾನವನ್ನು ಆವರಿಸಿದ್ದು, ಆಹಾರ ಬೆಲೆಗಳು ಏರಿಕೆಯಾಗುತ್ತಿವೆ. ಇದರಿಂದ ಹೊರಬರುವ ಸಲುವಾಗಿ ಇಮ್ರಾನ್ ಖಾನ್ ಸರ್ಕಾರ ಸುಮಾರು 120 ಬಿಲಿಯನ್ ರೂಪಾಯಿ ಮೊತ್ತದ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಅದರಲ್ಲಿ ಅತ್ಯಂತ ಮುಖ್ಯವಾಗಿ ತುಪ್ಪ, ಹಲವು ವಿಧದ ಹಿಟ್ಟು, ಬೇಳೆಗಳ ಮೇಲೆ ಶೇಕಡಾ 30ರಷ್ಟು ರಿಯಾಯಿತಿ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಕ್ಕರೆ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.

ಸಕ್ಕರೆ ಮಿಲ್​ಗಳಿಂದ ಸಕ್ಕರೆ ಪೂರೈಕೆ ನಿಂತುಹೋಗಿರುವ ಕಾರಣದಿಂದ ಈ ರೀತಿಯಲ್ಲಿ ಬೆಲೆ ಹೆಚ್ಚಳವಾಗಿದೆ ಎಂದು ಪಾಕಿಸ್ತಾನದ ಶುಗರ್ ಡೀಲರ್ಸ್​ ಅಸೋಸಿಯೇಷನ್ ಸ್ಪಷ್ಟನೆ ನೀಡಿದೆ. ಕರಾಚಿ ಮಾತ್ರವಲ್ಲದೇ ಬಹುತೇಕ ಎಲ್ಲಾ ನಗರಗಳಲ್ಲೂ ಕೂಡಾ ಸಕ್ಕರೆ ಬೆಲೆ ಕೆ.ಜಿಗೆ 140 ರೂಪಾಯಿ ದಾಟಿದೆ.

ಪಾಕಿಸ್ತಾನದಲ್ಲಿ ಜನರು ಸಧ್ಯ ಹಣದುಬ್ಬರದ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ಈ ಕಾರಣದಿಂದ ಹಿಟ್ಟು, ತರಕಾರಿ, ಮೊಟ್ಟೆ ಮತ್ತು ಮಾಂಸ, ಸಕ್ಕರೆ ಬೆಲೆಗಳು ವಿಪರೀತ ಏರಿಕೆಯಾಗಿವೆ. ನೆರೆಯ ದೇಶ ಪಾಕ್ ನಲ್ಲಿ ಸಕ್ಕರೆ ಬೆಲೆ ಪ್ರತಿ ಕೆಜಿಗೆ 100 ರೂ. ಆಗಿದೆ. ಸಬ್ಸಿಡಿ ದರದಲ್ಲಿ ಸಕ್ಕರೆಯನ್ನು ತೆಗೆದುಕೊಳ್ಳಲು ಜನರು ರಂಜಾನ್ ತಿಂಗಳಲ್ಲಿ ಪ್ರತಿದಿನ ಜನರು ಸರ್ತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾಗುತ್ತದೆ. ಈ ಕಾರಣದಿಂದಾಗಿ ಇಮ್ರಾನ್ ಖಾನ್ ಸರ್ಕಾರ ಈಗ ಪ್ರತಿಪಕ್ಷಗಳಿಗೆ ಆಹಾರವಾಗಿದೆ.

ಖಾಸಗಿ ವಲಯಕ್ಕೆ ಭಾರತದಿಂದ ಐದು ಲಕ್ಷ ಟನ್ ಬಿಳಿ ಸಕ್ಕರೆಯನ್ನು ಆಮದು ಮಾಡಿಕೊಳ್ಳಲು ಆರ್ಥಿಕ ಸಮನ್ವಯ ಸಮಿತಿ(ಇಸಿಸಿ)ಯು ಅವಕಾಶ ನೀಡಿದೆ. ಭಾರತದಲ್ಲಿ ಸಕ್ಕರೆಯ ಬೆಲೆ ಸಾಕಷ್ಟು ಕಡಿಮೆ. ಹೀಗಾಗಿ ನಾವು ಮತ್ತೆ ಭಾರತದೊಂದಿಗೆ ವ್ಯಾಪಾರವನ್ನು ಪುನರಾರಂಭಿಸಲು ನಿರ್ಧರಿಸಿದ್ದೇವೆ ಎಂದರು.

ಇನ್ನು ಹತ್ತಿ ನಿಷೇಧದ ಹಿನ್ನಲೆಯಲ್ಲಿ ನಮ್ಮ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳ ಮೇಲೆ ನೇರ ಪರಿಣಾಮ ಬೀರಿತ್ತು. ಪಾಕಿಸ್ತಾನದ ವರ್ತಕರು ಹೇಳುವಂತೆ, ಆ ದೇಶದಲ್ಲಿ 5,00,000 ಟನ್ ಸಕ್ಕರೆ ಕೊರತೆ ಎದುರಾಗಿದೆ. ಅಂದ ಹಾಗೆ ಬ್ರೆಜಿಲ್ ನಂತರ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ದೇಶ ಭಾರತ. ವರ್ಷದಲ್ಲಿ 60 ಲಕ್ಷ ಟನ್ ಸಕ್ಕರೆ ರಫ್ತು ಮಾಡುವ ಗುರಿಯೊಂದಿಗೆ ಹೆಚ್ಚುವರಿ ಸರಕನ್ನು ಭಾರತ ಹೊಂದಿದೆ.

English summary
Amid the rising inflation in Pakistan, prices of sugar have been jacked up in various parts of the country, local media reported on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X