Sudan Operation Kaveri : ಅಂದೇ ಈ ಬಗ್ಗೆ ಧ್ವನಿ ಎತ್ತಿದ್ದೆ, ಆದರೆ..? ಸಿದ್ದರಾಮಯ್ಯ
ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಭಾರತ ಸರ್ಕಾರ ಅಂತಿಮವಾಗಿ ಸೋಮವಾರ ಆಪರೇಷನ್ ಕಾವೇರಿಯನ್ನು ಪ್ರಾರಂಭಿಸಿತು. 131 ಭಾರತೀಯರ ಮೂರನೇ ಬ್ಯಾಚ್ ಆಪರೇಷನ್ ಕಾವೇರಿ ಅಡಿಯಲ್ಲಿ ಯುದ್ಧ ಪೀಡಿತ ಸುಡಾನ್ ಅನ್ನು ತೊರೆದಿದೆ. ಈ ಘಟನೆ ಸದ್ಯ ರಾಜಕೀಯ ಕೆಸರೆರೆಚಾಟಕ್ಕೆ ಸಾಕ್ಷಿಯಾಗಿದೆ.
ಅಧಿಕಾರವನ್ನು ಪಡೆಯಲು ಎರಡು ಮಿಲಿಟರಿ ಬಣಗಳ ನಡುವಿನ ಹಿಂಸಾಚಾರ ಅಲ್ಲಿರುವ ಭಾರತೀಯರ ಬಗ್ಗೆ ಆತಂಕವನ್ನು ಸೃಷ್ಟಿ ಮಾಡಿದೆ. ಭಾರತ ಸರ್ಕಾರವು ಅಲ್ಲಿನ ಭಾರತೀಯರ ಸುರಕ್ಷತೆಯನ್ನು ಖಾತ್ರಿಪಡಿಸುವ ಪ್ರಯತ್ನಗಳಲ್ಲಿದೆ. ಪರಿಸ್ಥಿತಿಯು ತುಂಬಾ ಸೂಕ್ಷ್ಮವಾಗಿದೆ.

ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ ಸರ್ಕಾರದ ಸಹಾಯಕ್ಕಾಗಿ ದನಿ ಎತ್ತಿದಾಗ ವಿದೇಶಾಂಗ ಸಚಿವರು ನನ್ನ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಅನ್ನನೀರಿಲ್ಲದೆ ನೆರವಿಗಾಗಿ ಕಾದು ಕುಳಿತ ಅಸಹಾಯಕ ಜೀವಗಳ ಪರವಾಗಿ ನಾನು ದನಿ ಎತ್ತಿದಾಗ ದೇಶದ ವಿದೇಶಾಂಗ ಸಚಿವರೇ ಇದು ರಾಜಕೀಯ ಎಂದು ಟೀಕಿಸಿ ನನ್ನನ್ನು ಚಕಿತಗೊಳಿಸಿದ್ದರು.
— Siddaramaiah (@siddaramaiah) April 25, 2023
ಆ ಸಂದರ್ಭದಲ್ಲಿ ದೇಶಾದ್ಯಂತ ಜನ ನನ್ನ ದನಿಗೆ ದನಿಗೂಡಿಸಿ ಕೇಂದ್ರ ಸರ್ಕಾರದ ಕಿವಿ ಹಿಂಡಿ ಅದರ ಕರ್ತವ್ಯವನ್ನು ನೆನಪಿಸಿದ್ದರು.
ಅವರಿಗೆಲ್ಲ ಧನ್ಯವಾದಗಳು.… https://t.co/MOFjoLPO9Q
ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಸುಡಾನ್ ಬಿಕ್ಕಟ್ಟು ರಾಜಕೀಯ ಗದ್ದಲವನ್ನು ಸೃಷ್ಟಿ ಮಾಡಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಹಲವಾರು ಜೀವಗಳನ್ನು ಅಪಾಯದಲ್ಲಿಟ್ಟುಕೊಂಡು 'ರಾಜಕೀಯ ಮಾಡುತ್ತಿದ್ದಾರೆ' ಎಂದು ಸಿದ್ದರಾಮಯ್ಯ ಅವರ ವಿರುದ್ಧ ಕಿಡಿ ಕಾರಿದ್ದರು.

ಇದಕ್ಕೆ ಸಿಟ್ಟಾದ ಸಿದ್ದರಾಮಯ್ಯ, 'ಅನ್ನನೀರಿಲ್ಲದೆ ನೆರವಿಗಾಗಿ ಕಾದು ಕುಳಿತ ಅಸಹಾಯಕ ಜೀವಗಳ ಪರವಾಗಿ ನಾನು ದನಿ ಎತ್ತಿದಾಗ ದೇಶದ ವಿದೇಶಾಂಗ ಸಚಿವರೇ ಇದು ರಾಜಕೀಯ ಎಂದು ಟೀಕಿಸಿ ನನ್ನನ್ನು ಚಕಿತಗೊಳಿಸಿದ್ದರು. ಆ ಸಂದರ್ಭದಲ್ಲಿ ದೇಶಾದ್ಯಂತ ಜನ ನನ್ನ ದನಿಗೆ ದನಿಗೂಡಿಸಿ ಕೇಂದ್ರ ಸರ್ಕಾರದ ಕಿವಿ ಹಿಂಡಿ ಅದರ ಕರ್ತವ್ಯವನ್ನು ನೆನಪಿಸಿದ್ದರು. ಅವರಿಗೆಲ್ಲ ಧನ್ಯವಾದಗಳು. ಮಾನವೀಯತೆಯನ್ನು ಮೀರಿದ್ದು ಯಾವುದೂ ಇಲ್ಲ, ರಾಜಕಾರಣ ಕೂಡಾ' ಎಂದು ಟ್ವೀಟ್ ಮಾಡಿದ್ದಾರೆ.
आईएनएस सुमेधा 278 यात्रियों के साथ जेद्दाह पहुंचा।
— ANI_HindiNews (@AHindinews) April 25, 2023
विदेश मंत्री डॉ.एस जयशंकर ने ट्वीट किया, "मैं सऊदी अरब के विदेश मंत्री फैसल बिन फरहान और सऊदी अरब के अधिकारियों को उनके पूर्ण सहयोग के लिए धन्यवाद देता हूं।" pic.twitter.com/2UWVVNJhoG
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸಂಪರ್ಕಿಸಿ, ಅವರ ಪರಿಸ್ಥಿತಿಯನ್ನು ವಿಚಾರಿಸಿ ಅವರಿಗೆ ಸೂಕ್ತ ಸಲಹೆಯನ್ನು ನೀಡಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಸುಮಾರು 500 ಭಾರತೀಯರು ಪೋರ್ಟ್ ಸುಡಾನ್ ತಲುಪಿದ್ದಾರೆ. ಅಲ್ಲಿನ ಮುಖ್ಯ ಬಂದರನ್ನು ಕೆಲವರು ತಲುಪಿದರೆ ಇನ್ನೂ ಅನೇಕರು ದಾರಿಯಲ್ಲಿದ್ದಾರೆ. ಅವರನ್ನೆಲ್ಲ ಅಲ್ಲಿಂದ ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿದೆ. ಸುಡಾನ್‌ನಲ್ಲಿ ಸಿಲುಕಿರುವ ಒಟ್ಟು ಭಾರತೀಯರ ಸಂಖ್ಯೆ ಸುಮಾರು 4000 ಎಂದು ಹೇಳಲಾಗಿದೆ. ಸದ್ಯ 500 ಜನರ ರಕ್ಷಣೆ ಮಾಡಲು ಕೇಂದ್ರ ಮುಂದಾಗಿದೆ. ಆದರೆ ಇದು ಉತ್ತಮ ಆರಂಭ ಎಂದು ಹೇಳಲಾಗುತ್ತಿದೆ.
278 ಭಾರತೀಯರಿರುವ ಹಡಗು ಸೌದಿ ಅರೇಬಿಯಾದ ಜಿದ್ದಾ ನಗರದಲ್ಲಿರುವ ಸುಡಾನ್ ಬಂದರಿನಿಂದ ನಿರ್ಗಮಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ತಿಳಿಸಿದ್ದಾರೆ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications