Get Updates
Get notified of breaking news, exclusive insights, and must-see stories!

ಸುಡಾನ್ ಸೇನಾ ಸಂಘರ್ಷ: ಭಾರತದ ಪ್ರಜೆ ಸೇರಿ ಕನಿಷ್ಠ 56 ಮಂದಿ ಸಾವು, 500 ಜನರಿಗೆ ಗಾಯ

ಸುಡಾನ್‌ನಲ್ಲಿ ನಡೆಯುತ್ತಿರುವ ಸೇನಾ ಸಂಘರ್ಷದಲ್ಲಿ ಓರ್ವ ಭಾರತೀಯ ಸೇರಿದಂತೆ 56 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಸುಡಾನ್‌ನಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಪ್ರಜೆಯೊಬ್ಬರು ಶನಿವಾರದಂದು ಗುಂಡು ತಗುಲಿ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

"ರಾಯಭಾರ ಕಚೇರಿಯು ಕುಟುಂಬಕ್ಕೆ ಸಂಪೂರ್ಣ ಸಹಾಯವನ್ನು ನೀಡಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಖಾರ್ಟೂಮ್‌ನಲ್ಲಿನ ಪರಿಸ್ಥಿತಿಯು ಅತ್ಯಂತ ಕಳವಳಕಾರಿಯಾಗಿದೆ. ನಾವು ಬೆಳವಣಿಗೆಗಳನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ" ಎಂದು EAM ಎಸ್ ಜೈಶಂಕರ್ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

Sudan military conflict: At least 56 dead, 500 injured, including an Indian citizen

ಸೇನೆ ಮತ್ತು ಅರೆಸೈನಿಕ ಪಡೆಯ ನಡುವಿನ ಅಧಿಕಾರದ ಹೋರಾಟ ಸುಡಾನ್ ಅನ್ನು ಬೆಚ್ಚಿಬೀಳಿಸಿದೆ. ಈ ದಾಳಿಯಲ್ಲಿ 56 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಸುಮಾರು 600 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರತಿಸ್ಪರ್ಧಿ ಪಡೆಗಳು ಅಧ್ಯಕ್ಷೀಯ ಅರಮನೆ, ರಾಜ್ಯ ಮತ್ತು ಸೇನಾ ಪ್ರಧಾನ ಕಛೇರಿಗಳ ಅಧಿಕಾರಕ್ಕಾಗಿ ಕಾದಾಡುತ್ತಿದೆ. ಇದರಿಂದಾಗಿ ನಿವಾಸಿಗಳು ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ರಾಜಧಾನಿ ಖಾರ್ಟೌಮ್‌ನಲ್ಲಿ ಗುಂಡೇಟಿನಿಂದ ಪಾರಾಗಲು ಜನ ಪ್ರಯತ್ನಿಸುತ್ತಿದ್ದಾರೆ.

ಪಶ್ಚಿಮ ಡಾರ್ಫುರ್ ಪ್ರದೇಶ ಮತ್ತು ಉತ್ತರದ ಮೆರೋವ್ ಪಟ್ಟಣದಲ್ಲಿ ಮಿಲಿಟರಿ ಮತ್ತು ಆರ್‌ಎಸ್‌ಎಫ್ ಸಿಬ್ಬಂದಿ ಸೇರಿದಂತೆ ಅನೇಕ ಅಸಂಖ್ಯಾತ ಸಾವುನೋವುಗಳಾಗಿವೆ ಎಂದು ಸುಡಾನ್ ವೈದ್ಯರ ಒಕ್ಕೂಟ ಹೇಳಿದೆ ಎಂದು ಸುದ್ದಿ ಸಂಸ್ಥೆ ಎಪಿ ವರದಿ ಮಾಡಿದೆ.

ರಾಯಿಟರ್ಸ್ ಪ್ರಕಾರ, ಮಿಲಿಟರಿ ಹಾಗೂ ಪ್ಯಾರಾಮಿಲಿಟರಿ ನಡುವೆ ಸಂಘರ್ಷ ಅಪಾರ ಪ್ರಮಾಣದ ಜೀವಹಾನಿ ಮಾಡಿದೆ. ಒಂದು ದಿನದ ಭಾರೀ ಕಾಳಗದಲ್ಲಿ ಹಲವಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. "ಸೂಡಾನ್‌ನ ದಾಲ್ ಗ್ರೂಪ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಪ್ರಜೆ ಆಲ್ಬರ್ಟ್ ಆಗಸ್ಟಿನ್ ನಿನ್ನೆ ದಾರಿತಪ್ಪಿ ಸಂಘರ್ಷ ಪೀಡಿತ ಪ್ರದೇಶಕ್ಕೆ ತೆರಳಿದ್ದಾಗ ಗುಂಡು ತಗುಲಿ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ" ಎಂದು ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಟ್ವೀಟ್ ಮಾಡಿದೆ.

ಪರಸ್ಪರ ದಾಳಿಯ ವೇಳೆ ಮಿಲಿಟರಿ ಮತ್ತು ಆರ್‌ಎಸ್‌ಎಫ್ ಸಾವಿರಾರು ಸೈನಿಕರನ್ನು ಒಟ್ಟುಗೂಡಿಸಿರುವ ರಾಜಧಾನಿ ಮತ್ತು ಅದರ ಸಮೀಪವಿರುವ ನೆರೆಹೊರೆಗಳಲ್ಲಿ ದಿನವಿಡೀ ಭಾರೀ ಗುಂಡಿನ ಸದ್ದು ಕೇಳಿಸಿದೆ.

ಆರ್‌ಎಸ್‌ಎಫ್ ಖಾರ್ಟೂಮ್ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿ ಕೆಲವು ವಿಮಾನಗಳಿಗೆ ಬೆಂಕಿ ಹಚ್ಚಿದೆ ಎಂದು ಆರೋಪಿಸಲಾಗಿದೆ. ದಾಳಿ ಬಳಿಕ ಮಿಲಿಟರಿಯ ಪ್ರಧಾನ ಕಛೇರಿ ಮತ್ತು ರಿಪಬ್ಲಿಕನ್ ಅರಮನೆ ಸೇರಿದಂತೆ ಎಲ್ಲಾ ಕಾರ್ಯತಂತ್ರದ ಸೌಲಭ್ಯಗಳು ತನ್ನ ಪಡೆಗಳ ನಿಯಂತ್ರಣದಲ್ಲಿದೆ ಎಂದು ಆರ್‌ಎಸ್‌ಎಫ್ ಹೇಳಿದೆ. ಜೊತೆಗೆ ಖಾರ್ಟೂಮ್‌ಗೆ ಹೆಚ್ಚಿನ ಪಡೆಗಳನ್ನು ನಿಯೋಜಿಸುವುದಾಗಿ ಬೆದರಿಕೆ ಹಾಕಿದೆ ಎಂದು ಎಪಿ ವರದಿ ಮಾಡಿದೆ.

"ವರದಿಯಾದ ಗುಂಡಿನ ದಾಳಿಗಳು ಮತ್ತು ಘರ್ಷಣೆಗಳ ದೃಷ್ಟಿಯಿಂದ, ಎಲ್ಲಾ ಭಾರತೀಯರು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ, ಮನೆಯೊಳಗೆ ಉಳಿಯಿರಿ ಮತ್ತು ತಕ್ಷಣದ ಪರಿಣಾಮದಿಂದ ಹೊರಗೆ ಹೋಗುವುದನ್ನು ನಿಲ್ಲಿಸಿ. ದಯವಿಟ್ಟು ಶಾಂತವಾಗಿರಿ ಮತ್ತು ನವೀಕರಣಗಳಿಗಾಗಿ ಕಾಯಿರಿ" ಎಂದು ಖಾರ್ಟೂಮ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಟ್ವೀಟ್ ಮಾಡಿದೆ.

ಅಂತೆಯೇ ರಾಯಭಾರ ಕಚೇರಿ ಆಗಸ್ಟೀನ್ ಅವರ ಕುಟುಂಬ ಮತ್ತು ವೈದ್ಯಕೀಯ ಪ್ರಾಧಿಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮುಂದಿನ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ಮಾಹಿತಿ ನೀಡಿದೆ. ಇನ್ನು ಸೇನಾ ಸಂಘರ್ಷ ಘಟನೆಯಲ್ಲಿ 500ಕ್ಕೂ ಹೆಚ್ಚಿನವರಿಗೆ ಗಂಭೀರ ಗಾಯಗಳಾಗಿವೆ ಎಂದು ಸುಡಾನ್ ಕೇಂದ್ರ ವೈದ್ಯಕೀಯ ಮಂಡಳಿಯು ತಿಳಿಸಿದೆ.

ಈ ಘರ್ಷಣೆಯು ಇನ್ನೂ ಮುಂದುವರಿದಿದ್ದು ಗಾಯಾಳುಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ತಿಳಿಸಿವೆ. ಸುಡಾನ್‌ನ ರಾಜಧಾನಿಯಾದ ಖಾರ್ಟೂಮ್‌ ಪ್ರದೇಶದ ವಿವಿಧೆಡೆ ಶಸಸ್ತ್ರ ಸೇನೆ ಮತ್ತು ಅರೆಸೈನಿಕ ಪಡೆ ನಡುವೆ ನಡೆಯುತ್ತಿರುವ ಸಮರ ರಾಜಕೀಯ ಸಂಘರ್ಷವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+