ವಯಸ್ಕರರಿಗೆ ಮಾತ್ರ; ಟ್ರಂಪ್ ದು ಚಿಕ್ಕದು, ಮಜಾ ಬರಲಿಲ್ಲ ಎಂದ ನಟಿ

ಈ ಸುದ್ದಿಯು ವಯಸ್ಕರಿಗಾಗಿ ಮಾತ್ರ. ಈ ಸುದ್ದಿಯನ್ನು ಬಯಲು ಮಾಡಿರುವುದು ನೀಲಿ ಚಿತ್ರಗಳ ನಟಿ. ಇನ್ನೂ ಬಿಡುಗಡೆ ಆಗಬೇಕಿರುವ ಆಕೆಯ ಹೊಸ ಪುಸ್ತಕ 'Full Disclosure'ನಲ್ಲಿ ಬಯಲು ಮಾಡಿದ್ದು, ಅದರೊಳಗಿನ ವಿಚಾರವನ್ನು ಹೆಕ್ಕಿ 'ದ ಗಾರ್ಡಿಯನ್' ಪ್ರಕಟಿಸಿದೆ. ಆ ಮಹಿಳೆ ಹೆಸರು ಸ್ಟೊರ್ಮಿ ಡೇನಿಯಲ್ಸ್. ಆಕೆ ಬಯಲು ಮಾಡಿರುವ ವಿಚಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಸಂಬಂಧಿಸಿದ್ದು.

ಪೂರ್ತಿಯಾಗಿ ಟ್ರಂಪ್ ಗೆ ಸಂಬಂಧಿಸಿದ್ದು ಎಂದು ಹೇಳಿಬಿಟ್ಟರೆ ತಪ್ಪಾದೀತು. ನಿರ್ದಿಷ್ಟವಾಗಿ 'ಆ' ಅಂಗದ ಬಗ್ಗೆ ಪುಸ್ತಕದಲ್ಲಿ ಆಗಿರುವ ಪ್ರಸ್ತಾವ ಈಗ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. "ತಮಗೆ ಇರುವುದು ವಿಲಕ್ಷಣವಾದ ಜನನಾಂಗ ಎಂಬುದು ಅವರಿಗೆ ಗೊತ್ತಿದೆ" ಎಂದು ಆಕೆ ತನ್ನ ಪುಸ್ತಕದಲ್ಲಿ ಬರೆದುಕೊಂಡಿದ್ದು, 'ಅದಕ್ಕೆ' ಅಣಬೆಗೆ ಇರುವಂತೆ ದೊಡ್ಡ ತಲೆ ಇದೆ ಎಂದಿದ್ದಾಳೆ.

"ನಾನು ಮಲಗಿದ್ದೆ. ನನ್ನ ಜತೆ ಲೈಂಗಿಕ ಸಂಪರ್ಕ ಬೆಳೆಸಿದ ವ್ಯಕ್ತಿಗೆ ಯೇತಿ ಎಂಬ ಪ್ರಾಣಿಗೆ ಇರುವಂಥ ಕೂದಲಿದೆ. ಇನ್ನು ಜನನಾಂಗವು ಮಾರಿಯೋ ಕಾರ್ಟ್ ವಿಡಿಯೋಗೇಮ್ ಆಟದಲ್ಲಿ ಬರುವ ಮಶ್ರೂಮ್ (ಅಣಬೆ) ಪಾತ್ರಧಾರಿಯಿದ್ದಂತೆ ಇದೆ. ನನ್ನ ಜೀವನದಲ್ಲಿ ಅತ್ಯಂತ ಕನಿಷ್ಠ ಮಟ್ಟದ ಲೈಂಗಿಕ ತೃಪ್ತಿ ನೀಡಿದ ಸನ್ನಿವೇಶ ಅದು. ಆದರೆ ಅವರು ತಮ್ಮ ಅಭಿಪ್ರಾಯ ಹೇಳಲಿಲ್ಲ" ಎಂದು ಆಕೆ ಬರೆದುಕೊಂಡಿದ್ದಾಳೆ.

ಡೇನಿಯಲ್ಸ್ ಜತೆಗೆ ಸಂಬಂಧ ಇಲ್ಲ ಎನ್ನುತ್ತಿರುವ ಟ್ರಂಪ್

ಡೇನಿಯಲ್ಸ್ ಜತೆಗೆ ಸಂಬಂಧ ಇಲ್ಲ ಎನ್ನುತ್ತಿರುವ ಟ್ರಂಪ್

ಡೊನಾಲ್ಡ್ ಟ್ರಂಪ್ ಜತೆಗೆ ಲೈಂಗಿಕ ಸಂಪರ್ಕ ಇದ್ದ ವಿಚಾರ ಹೊರಗೆಲ್ಲೂ ತಿಳಿಸದಿರುವಂತೆ ಆಕೆಗೆ $1,30,000 ಹಣ ಪಾವತಿಸಲು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮುಂಚೆ ಮುಂದಾಗಿದ್ದರು ಎಂಬ ಬಗ್ಗೆ ನಡೆಯುತ್ತಿರುವ ತನಿಖೆಗೆ ಡೇನಿಯಲ್ಸ್ ಸಹಕರಿಸುತ್ತಿದ್ದಾರೆ. ಆದರೆ ಡೇನಿಯಲ್ಸ್ ಜತೆಗೆ ಯಾವುದೇ ಸಂಪರ್ಕ ಇರಲಿಲ್ಲ ಎಂದು ಟ್ರಂಪ್ ಹೇಳಿಕೊಂಡು ಬಂದಿದ್ದಾರೆ.

ಡೇನ್ಸಿಯಲ್ಸ್ ಳ ಪುಸ್ತಕ ಕಾಲ್ಪನಿಕ ಕಥೆಯಂತೆ

ಡೇನ್ಸಿಯಲ್ಸ್ ಳ ಪುಸ್ತಕ ಕಾಲ್ಪನಿಕ ಕಥೆಯಂತೆ

ಡೇನ್ಸಿಯಲ್ಸ್ ಳ ಮುಂಬರುವ ಪುಸ್ತಕ ಒಂದು ಕಾಲ್ಪನಿಕ ಕಥೆ ಎಂದು ಟ್ರಂಪ್ ಛೇಡಿಸಿದ್ದಾರೆ. ಕ್ಯಾಲಿಫೋರ್ನಿಯಾದ ಲೇಕ್ ಟಾಹೋದಲ್ಲಿ 2006ರಲ್ಲಿ ನಡೆ ಸೆಲಿಬ್ರಿಟಿ ಗಾಲ್ಫ್ ಪಂದ್ಯಾವಳಿಯಲ್ಲಿ ಮೊದಲ ಸಲ ಟ್ರಂಪ್ ಕ್ಯಾಪ್ ನ ಮೇಲೆ ನನ್ನ ಕಣ್ಣು ಬಿದ್ದಿದ್ದು ಎಂದು ಆಕೆ ಹೇಳಿಕೊಂಡಿದ್ದಾರೆ. ಆ ದಿನ ಕೆಂಪು ಕ್ಯಾಪ್ ಧರಿಸಿದ್ದರು ಎಂದು ಕೂಡ ಬರೆದುಕೊಂಡಿದ್ದಾರೆ.

ಸ್ಟೊರ್ಮಿ ಡೇನಿಯಲ್ಸ್ ನಿಜವಾದ ಹೆಸರು ಸ್ಟೆಫಾನಿ ಕ್ಲಿಫೋರ್ಡ್

ಸ್ಟೊರ್ಮಿ ಡೇನಿಯಲ್ಸ್ ನಿಜವಾದ ಹೆಸರು ಸ್ಟೆಫಾನಿ ಕ್ಲಿಫೋರ್ಡ್

ಸ್ಟೊರ್ಮಿ ಡೇನಿಯಲ್ಸ್ ನಿಜವಾದ ಹೆಸರು ಸ್ಟೆಫಾನಿ ಕ್ಲಿಫೋರ್ಡ್. ಡೊನಾಲ್ಡ್ ಟ್ರಂಪ್ ನ ಬಗ್ಗೆ ಇರುವ ವರ್ಣರಂಜಿತ ಕಥೆಗಳಿಗೆ ಆಕೆಯು ಬರೆದಿರುವ ಪುಸ್ತಕದ ಮಾಹಿತಿಯು ತಣ್ಣೀರು ಎರಚುವಂತಿದೆ. ಡೊನಾಲ್ಡ್ ಟ್ರಂಪ್ ಜನನಾಂಗ ಸರಾಸರಿಗಿಂತ ಚಿಕ್ಕದಾಗಿದ್ದು, ಆದರೆ "ಸ್ವಾಭಾವಿಕವಾಗಿ ಚಿಕ್ಕದಲ್ಲ" ಎಂದು ಬರೆದುಕೊಂಡಿದ್ದಾಳೆ. ಜತೆಗೆ ಟ್ರಂಪ್ ತನ್ನ ರಿಯಾಲಿಟಿ ಟಿ.ವಿ. ಶೋ 'ಅಪ್ರೆಂಟಿಸ್'ನಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದರು. ಜತೆಗೆ ಆ ರಿಯಾಲಿಟಿ ಟಿ.ವಿ. ಶೋನಲ್ಲಿ ಮುಂದಿನ ಹಂತಕ್ಕೆ ಹೋಗಲು ಮೋಸ ಕೂಡ ಮಾಡಬಹುದು ಎಂದು ಟ್ರಂಪ್ ತಿಳಿಸಿದ್ದಾಗಿ ಡೇನಿಯಲ್ಸ್ ಬರೆದುಕೊಂಡಿದ್ದಾಳೆ.

ಅದೆಲ್ಲ ಖಾಸಗಿ ವಿಚಾರ ಎಂದಿದ್ದರು ಮಾಜಿ ಪತ್ನಿ

ಅದೆಲ್ಲ ಖಾಸಗಿ ವಿಚಾರ ಎಂದಿದ್ದರು ಮಾಜಿ ಪತ್ನಿ

ಡೊನಾಲ್ಡ್ ಟ್ರಂಪ್ ನ ಮಾಜಿ ಪತ್ನಿ ಮರ್ಲಾ ಮೇಪಲ್ಸ್ ಈ ಬಗ್ಗೆ ಯಾವುದೇ ಅಭಿಪ್ರಾಯ ತಿಳಿಸಲು ನಿರಾಕರಿಸಿದ್ದಾರೆ. "ಅದೆಲ್ಲ ಖಾಸಗಿ ವಿಚಾರ" ಎಂದು ಟ್ಯಾಬ್ಲಾಯ್ಡ್ ವೊಂದಕ್ಕೆ ಅವರು ತಿಳಿಸಿದ್ದರು. ಬೇರೆ ಯಾರೋ ಹೇಳಿದ್ದರು ಅನ್ನೋದನ್ನು ನಾನು ಯಾವಾಗಲೂ ಹೇಳಿಲ್ಲ. ಇದು ನಿಜವಾ? ನಾನು ಆ ಬಗ್ಗೆ ಏನೂ ಮಾತನಾಡಲ್ಲ. ಸತ್ಯ ಹೊರಗೆ ಬರುತ್ತದೆ. ಕೇವಲ ಇಲ್ಲಿ ಮಾತ್ರ ಅಲ್ಲ ಎಂದು ಮರ್ಲಾ ಮೇಪಲ್ಸ್ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+