ದ್ವೀಪರಾಷ್ಟ್ರ ಶ್ರೀಲಂಕಾಗೆ ಹೊಸ ಪ್ರಧಾನಿ & ಹೊಸ ಸಚಿವರ ಆಯ್ಕೆ ಕಸರತ್ತು!
ಶ್ರೀಲಂಕಾ ಚುನಾವಣೆ ಮುಕ್ತಾಯವಾದ ನಂತರ ಇದೀಗ ಮತ್ತೊಂದು ಕುತೂಹಲ ಕೆರಳಿದೆ. ಆ ದೇಶದಲ್ಲಿ ಇದೀಗ ಹೊಸ ಪ್ರಧಾನಿ ಆಯ್ಕೆ ನಡೆಯಬೇಕಿದೆ. ಇದರ ಜೊತೆಗೆ ಸಂಪುಟದ ರಚನೆ ಅಂದ್ರೆ ಸಚಿವ ಸಂಪುಟದ ರಚನೆ ಕೂಡ ಆಯ್ಕೆ ಆಗಬೇಕಿದೆ. ಈ ಮೂಲಕ ದ್ವೀಪರಾಷ್ಟ್ರ ಶ್ರೀಲಂಕಾ ಆಡಳಿತಕ್ಕೆ ಒಂದು ಭದ್ರ ಅಡಿಪಾಯ ಹಾಕಬೇಕಿದೆ. ಒಂದು ದಿನದ ಹಿಂದಷ್ಟೇ ಈ ದೇಶದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಯಾರಾಗುತ್ತಾರೆ ಪ್ರಧಾನಿ? ಮುಂದೆ ಓದಿ.
ಶ್ರೀಲಂಕಾ & ಭಾರತದ ನಡುವೆ ಸಾವಿರಾರು ವರ್ಷಗಳ ನಂಟು ಇದೆ. ಹಾಗೇ ಭಾರತದ ಜೊತೆ ಶ್ರೀಲಂಕಾ ಹಲವಾರು ವ್ಯಾಪಾರ ಸಂಬಂಧ ಮುಂದುವರಿಸಿಕೊಂಡು ಬಂದಿದೆ. ಹೀಗಿದ್ದಾಗಲೇ ಎರಡೂ ದೇಶಗಳ ನಡುವೆ ಜಲಗಡಿ ವಿವಾದ ಕಡಿಮೆ ಏನೂ ಇಲ್ಲ. ಇದೆಲ್ಲವನ್ನೂ ಮೀರಿ ಭಾರತ ಮತ್ತು ಶ್ರೀಲಂಕಾ ಅಕ್ಕಪಕ್ಕ ಇರುವ ನೆರೆಯ ದೇಶಗಳು. ಹೀಗಿದ್ದಾಗ ಶ್ರೀಲಂಕಾದಲ್ಲಿ ಹೊಸ ಪ್ರಧಾನಿ ಆಯ್ಕೆ ಆಗುತ್ತಿರುವುದು ಸಹಜವಾಗಿ ಭಾರತದಲ್ಲೂ ಕುತೂಹಲ ಕೆರಳಿಸಿದೆ.

ಲಂಕೆಗೆ ಯಾರು ಹೊಸ ಪ್ರಧಾನಿ
ಹೌದು, ಶ್ರೀಲಂಕಾದ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಎನ್‌ಪಿಪಿ ಭರ್ಜರಿ ಗೆಲುವು ಕಂಡಿದೆ. ಶ್ರೀಲಂಕಾ ಅಧ್ಯಕ್ಷರಾಗಿ ಇತ್ತೀಚೆಗೆ ಅನುರಾ ಕುಮಾರ ದಿಸ್ಸನಾಯಕೆ ಆಯ್ಕೆ ಆಗಿದ್ದರು. ಇದೇ ಅನುರಾ ಕುಮಾರ ದಿಸ್ಸನಾಯಕೆ ನೇತೃತ್ವದಲ್ಲಿ ನ್ಯಾಷನಲ್ ಪೀಪಲ್ಸ್ ಪವರ್ ಚುನಾವಣೆಯಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದೆ.
ಒಟ್ಟು 225 ಸದಸ್ಯ ಬಲದ ಶ್ರೀಲಂಕಾ ಸಂಸತ್ತಿನಲ್ಲಿ ಈಗ 159 ಸ್ಥಾನಗಳನ್ನ ಗೆದ್ದು ದಿಸ್ಸನಾಯಕೆ ತಮ್ಮ ಬಲ ಪ್ರದರ್ಶನ ಮಾಡಿದ್ದಾರೆ. ಇಷ್ಟೆಲ್ಲದರ ನಡುವೆ, ಶ್ರೀಲಂಕಾಗೆ ನವೆಂಬರ್ 18 ರ ಸೋಮವಾರ ಅಂದ್ರೆ ನಾಳೆ ಹೊಸ ಪ್ರಧಾನಿ ಮತ್ತು ಹೊಸ ಸಚಿವರು ನೇಮಕ ಆಗಲಿದ್ದಾರೆ. ಹೀಗಾಗಿ ಶ್ರೀಲಂಕಾ ದೇಶದಲ್ಲಿ ಇದೀಗ ಸಂಭ್ರಮ ಮನೆ ಮಾಡಿದ್ದು, ತೀವ್ರ ಕಟ್ಟೆಚ್ಚರ ಕೂಡ ವಹಿಸಲಾಗಿದೆ. ಭಾರಿ ಭದ್ರತೆ ಕೂಡ ಕೈಗೊಂಡಿದ್ದು, ಈಗಾಗಲೇ ಒಂದು ಬಾರಿ ದೊಡ್ಡ ದಂಗೆ ಎದುರಿಸಿರುವ ಲಂಕೆ ಫುಲ್ ಅಲರ್ಟ್ ಆಗಿದೆ.
ಲಂಕಾದ ಹೊಸ ಸರ್ಕಾರದ ನಿಲುವೇನು?
ಶ್ರೀಲಂಕಾ ಜೊತೆ ಭಾರತ ಸ್ವಾತಂತ್ರ್ಯ ಬಂದಾಗಿನಿಂದ ಕೂಡ ಸಂಬಂಧವನ್ನು ವೃದ್ಧಿಸಿಕೊಂಡು ಬಂದಿದೆ. ಯಾಕಂದ್ರೆ ಶ್ರೀಲಂಕಾ & ಭಾರತ ಅಕ್ಕಪಕ್ಕದ ದೇಶಗಳು, ಇದಕ್ಕಿಂತ ಹೆಚ್ಚಾಗಿ ಹಿಂದೂ ಮಹಾಸಾಗರದ ಮೇಲೆ ಭಾರತ ತನ್ನ ಬಲ ಪ್ರದರ್ಶನ ಮಾಡಲು ಶ್ರೀಲಂಕಾ ಜೊತೆಗೆ ಉತ್ತಮ ಸಂಬಂಧವನ್ನ ಹೊಂದಬೇಕು ಎಂಬ ಅಭಿಪ್ರಾಯ ಕೇಳಿ ಬರುತ್ತದೆ. ಹೀಗಿದ್ದಾಗ ಶ್ರೀಲಂಕಾ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ? ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಭಾರತದ ಜೊತೆಗೆ ಹೊಸ ಅಧ್ಯಕ್ಷ & ಹೊಸ ಸರ್ಕಾರ ಯಾವ ರೀತಿ ಸಂಬಂಧ ಗಟ್ಟಿಗೊಳಿಸುತ್ತೆ? ಎಂಬುದನ್ನ ಕಾದು ನೋಡಬೇಕು. ಹಾಗೇ ಹೊಸ ಪ್ರಧಾನಿ ಆಯ್ಕೆ ಕೂಡ ಭಾರಿ ದೊಡ್ಡ ಪರಿಣಾಮ ಬೀರುವ ನಿರೀಕ್ಷೆಗಳು ಇವೆ. ಹೀಗಾಗಿ ಇಡೀ ಜಗತ್ತಿನ ಗಮನವು ಸದ್ಯಕ್ಕೆ ಶ್ರೀಲಂಕಾ ಮೇಲೆ ನೆಟ್ಟಿದ್ದು, ನಾಳೆ ಅಂದ್ರೆ ಸೋಮವಾರ ಈ ಬಗ್ಗೆ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ.












Click it and Unblock the Notifications