ಲಂಕಾ ಹಿಂಸಾಚಾರ; ಸಂಸದ ಸೇರಿ ಮೂವರು ಬಲಿ; ರಾಜಪಕ್ಸ ಮನೆಗೆ ಬೆಂಕಿ
ಆರ್ಥಿಕ ದುಸ್ಥಿತಿಯಿಂದ ಕಂಗಾಲಾಗಿರುವ ಶ್ರೀಲಂಕಾದಲ್ಲಿ ಜನರ ಪ್ರತಿಭಟನೆ ಎಡಬಿಡದೆ ನಡೆಯುತ್ತಿದ್ದು ನಿನ್ನೆ ಹಲವೆಡೆ ಹಿಂಸಾಚಾರ ಘಟನೆಗಳು ನಡೆದಿವೆ. ಈ ದುರಂತದಲ್ಲಿ ಒಬ್ಬ ಸಂಸದ ಸೇರಿ ಮೂವರು ಸಾವನ್ನಪ್ಪಿದ್ದಾರೆ.
ಕೊಲಂಬೋ, ಮೇ 10: ಆರ್ಥಿಕ ದುಸ್ಥಿತಿಯಿಂದ ಕಂಗಾಲಾಗಿರುವ ಶ್ರೀಲಂಕಾದಲ್ಲಿ ಜನರ ಪ್ರತಿಭಟನೆ ಎಡಬಿಡದೆ ನಡೆಯುತ್ತಿದ್ದು ನಿನ್ನೆ ಹಲವೆಡೆ ಹಿಂಸಾಚಾರ ಘಟನೆಗಳು ನಡೆದಿವೆ. ಈ ದುರಂತದಲ್ಲಿ ಒಬ್ಬ ಸಂಸದ ಸೇರಿ ಮೂವರು ಸಾವನ್ನಪ್ಪಿದ್ದಾರೆ. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದು ತಿಳಿದುಬಂದಿದೆ. ಕೆಲ ಗಂಟೆಗಳ ಮೊದಲು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಹಿಂದ ರಾಜಪಕ್ಸೆಗೆ ಸೇರಿದ ಮನೆಯೊಂದನ್ನೂ ದುಷ್ಕರ್ಮಿಗಳು ಸುಟ್ಟುಹಾಕಿರುವ ಘಟನೆ ನಡೆದಿದೆ. ರಾಜಪಕ್ಸೆ ಮಾತ್ರವಲ್ಲ ಇನ್ನೂ ಹಲವು ರಾಜಕಾರಣಿಗಳ ಮನೆಗಳನ್ನ ಪ್ರತಿಭಟನಾಕಾರರು ಬೆಂಕಿ ಇಟ್ಟ ಘಟನೆ ನಿನ್ನೆ ರಾತ್ರಿ ನಡೆದಿರುವುದು ಬೆಳಕಿಗೆ ಬಂದಿದೆ. ಹಿಂಸಾಚಾರವನ್ನು ನಿಗ್ರಹಿಸಲು ಲಂಕಾ ಸೇನೆ ಪ್ರಯತ್ನಿಸುತ್ತಿದೆ.
ಶ್ರೀಲಂಕಾದಲ್ಲಿ ಸರಕಾರಿ ವಿರೋಧಿ ಪ್ರತಿಭಟನೆ ಒಂದೆಡೆಯಾದರೆ, ಇದನ್ನು ವಿರೋಧಿಸಿ ಮತ್ತೊಂದು ಗುಂಪು ಸರಕಾರದ ಪರವಾಗಿ ಪ್ರತಿಭಟನೆ ನಡೆಸುತ್ತಿದೆ. ನಿನ್ನೆ ಸರಕಾರದ ಪರ ಇರುವವರು ಮತ್ತು ಸರಕಾರ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತಿರುವವರ ಮಧ್ಯೆ ಘರ್ಷಣೆಯಾಗಿ ಹಿಂಸಾಚಾರಕ್ಕೆ ತಿರುಗಿದೆ. ಈ ದುರಂತ ಘಟನೆಯಲ್ಲಿ ಶ್ರೀಲಂಕಾದ ಆಡಳಿತಾರೂಢ ಎಸ್‌ಎಲ್‌ಪಿಪಿ ಪಕ್ಷದ ಸಂಸದ ಅಮರಕೀರ್ತಿ ಅಥುಕೋರಾಲ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ೧೫೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಹೆದರಿಕೆಯಿಂದ ಸಂಸದ ಆತ್ಮಹತ್ಯೆ:
ಶ್ರೀಲಂಕಾ ಸಂಸದ ಅಮರಕೀರ್ತಿ ಅಥುಕೋರಾಲ ಜನರಿಂದ ಹಲ್ಲೆಯಾಗುವ ಭೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ನಿತ್ತಂಬುವಾ ನಗರದಲ್ಲಿ ಜನರ ಪ್ರತಿಭಟನೆ ನಡೆಯುತ್ತಿದ್ದಾಗ ಸಂಸದರಿದ್ದ ಕಾರನಿಂದ ಪ್ರತಿಭಟನಾಕಾರರತ್ತ ಗುಂಡು ಹಾರಿಸಲಾಗಿದೆ. ಇದರಿಂದ ಆಕ್ರೋಶಗೊಂಡ ಜನರು ಆ ಕಾರಿನ ಮೇಲೆ ದಾಳಿ ಮಾಡಿದ್ಧಾರೆ. ಸಂಸದ ಅಮರಕೀರ್ತಿ ಕಾರಿನಿಂದ ಇಳಿದು ತಪ್ಪಿಸಿಕೊಂಡು ಕಟ್ಟಡವೊಂದಕ್ಕೆ ನುಗ್ಗಿದ್ದಾರೆ. ಅಲ್ಲಿ ಅವರು ಸ್ವಯಂ ಆಗಿ ಗುಂಡು ಹಾರಿಸಿಕೊಂಡು ಸತ್ತರೆಂದು ಘಟನೆ ವೇಳೆ ಇದ್ದವರು ಮಾಹಿತಿ ನೀಡಿದ್ಧಾರೆ. ಸ್ಥಳದಲ್ಲಿ ಸಂಸದನ ಜೊತೆ ಅವರ ಭದ್ರತಾ ಅಧಿಕಾರಿಯೂ ಸಾವನ್ನಪ್ಪಿರುವುದು ಕಂಡುಬಂದಿದೆ.
ಸಂಸದರ ಮನೆಗಳನ್ನ ಗುರಿಯಾಗಿಸಿದ ಪ್ರತಿಭಟನಾಕಾರರು:
ಶ್ರೀಲಂಕಾದ ವಿವಿಧೆಡೆ ಪ್ರತಿಭಟನಾಕಾರರು ಸಂಸದರ ಮನೆಗಳ ಮೇಲೆ ದಾಳಿ ಮಾಡಿದ ಘಟನೆ ತಲ್ಲಣಗೊಳಿಸಿದೆ. ಹಂಬನ್‌ತೋಟಾ ಜಿಲ್ಲೆಯಲ್ಲಿರುವ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಕುಟುಂಬದಕ್ಕೆ ಸೇರಿದ ಪೂರ್ವಿಕರ ಮನೆಗೆ ಜನರು ಬೆಂಕಿ ಇಟ್ಟಿದ್ಧಾರೆ. ರಾಜಪಕ್ಸೆ ವಸ್ತುಸಂಗ್ರಹಾಲಯವನ್ನೂ ದುಷ್ಕರ್ಮಿಗಳು ಬಿಟ್ಟಿಲ್ಲ.
ರಾಜಪಕ್ಸೆ ಮಾತ್ರವಲ್ಲ ಅನೇಕ ಸಂಸದರ ಮನೆಗಳ ಮೇಲೂ ಜನರ ದಾಳಿಯಾಗಿದೆ. ಸನತ್ ನಿಶಾಂತ, ರಮೇಶ್ ಪದಿರಾನ, ಮಹಿಪಾಲ ಹೇರಾತ್, ತಿಸ್ಸಾ ಕುಟ್ಟಿಯಾರಾಚ್ಚಿ, ನಿಮಲ್ ಲಂಜಾ, ಬಂಡುಲ ಗುಣವರ್ದನ, ಪ್ರಸನ್ನ ರಣತುಂಗ, ಚನ್ನ ಜಯಸುಮನ, ಕೋಕಿಲ ಗುಣವರ್ದನ, ಅರುಂದಿಕಾ ಫರ್ನಾಂಡೋ, ಪವಿತ್ರ ವಣ್ಣಿಯಾರಚಿ ಮೊದಲಾದ ಸಂಸದರ ಮನೆಗಳನ್ನು ಪ್ರತಿಭಟನಾಕಾರರು ಗುರಿಯಾಗಿಸಿ ಬೆಂಕಿ ಇಟ್ಟರೆನ್ನಲಾಗಿದೆ.
ವಿದ್ಯಾರ್ಥಿ ಸಂಘಟನೆಯಾದ ಅಂತರ್ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟ (ಐಯುಎಸ್‌ಎಫ್)ಕ್ಕೆ ಸೇರಿದ ಹಲವು ಮಂದಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು ತಿಳಿದುಬಂದಿದೆ. ಆಡಳಿತಾರೂಢ ಎಸ್‌ಎಲ್‌ಪಿಪಿ ಪಕ್ಷದ ಕಚೇರಿಗಳ ಮೇಲೂ ಜನರು ದಾಳಿ ಮಾಡಿದ್ಧಾರೆ.
ಅಮೆರಿಕ ಗಮನ:
ಶ್ರೀಲಂಕಾದಲ್ಲಿ ಉದ್ಭವಿಸಿರುವ ಹಿಂಸಾಚಾರ ಪರಿಸ್ಥಿತಿಯನ್ನು ಗಮನಿಸುತ್ತಿರುವುದಾಗಿ ಅಮೆರಿಕ ದೇಶ ಹೇಳಿದೆ. ಇಲ್ಲಿನ ವಿದ್ಯಮಾನಗಳು ಆತಂಕ ಮೂಡಿಸುವಂತಿವೆ. ಶಾಂತಿಯುತ ಪ್ರತಿಭಟನಾಕಾರರು ಮತ್ತು ಅಮಾಯಕ ಜನರ ವಿರುದ್ಧ ನಡೆದಿರುವ ಹಿಂಸಾಚಾರದಿಂದ ಕಳವಳಗೊಂಡಿದ್ದೇವೆ. ಲಂಕಾದ ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರತ್ತ ಎಲ್ಲಾ ಜನರೂ ಗಮನ ಕೊಡಬೇಕೆಂದು ಮನವಿ ಮಾಡುತ್ತೇವೆ ಎಂದು ಅಮೆರಿಕ ತಿಳಿಸಿದೆ.
(ಒನ್ಇಂಡಿಯಾ ಸುದ್ದಿ)
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications