ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಸೂಟ್‌ಕೇಸ್‌ ತುಂಬಿದ ಹಡಗಿನಲ್ಲಿ ಲಂಕಾ ಅಧ್ಯಕ್ಷ ರಾಜಪಕ್ಸೆ ಪಲಾಯನ!

|
Google Oneindia Kannada News

ಕೊಲಂಬೋ, ಜುಲೈ 9: ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ರಾಜೀನಾಮೆಗೆ ಒತ್ತಾಯಿಸಿ ಸಾವಿರಾರು ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಅವರ ನಿವಾಸಕ್ಕೆ ನುಗ್ಗಿದ್ದು ಒಂದು ಕಡೆಯಾದರೆ ಸೂಟ್‌ಕೇಸ್‌ಗಳನ್ನು ತುಂಬಿಕೊಂಡು ಹಡಗಿನಲ್ಲಿ ಅವರು ಪಲಾಯನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

Explainer: ಶ್ರೀಲಂಕಾದಲ್ಲಿ ಅಧ್ಯಕ್ಷರ ಮನೆಗೆ ಜನರು ನುಗ್ಗುವ ಮೊದಲು ಆಗಿದ್ದೇನು?Explainer: ಶ್ರೀಲಂಕಾದಲ್ಲಿ ಅಧ್ಯಕ್ಷರ ಮನೆಗೆ ಜನರು ನುಗ್ಗುವ ಮೊದಲು ಆಗಿದ್ದೇನು?

Recommended Video

Sri Lanka ಜನತೆ ರಾಷ್ಟ್ರಪತಿಗಳ ಮನೆಗೆ ನುಗ್ಗಿದ್ದು ಹೀಗೆ | *World | OneIndia Kannada

ದೇಶದ ಆರ್ಥಿಕ ಬಿಕ್ಕಟ್ಟು ಮತ್ತು ಪ್ರತಿಭಟನೆಗಳ ಗೊಂದಲದ ಮಧ್ಯೆ, ಶ್ರೀಲಂಕಾ ನೌಕಾಪಡೆಯ ಹಡಗಿನಲ್ಲಿ ಸೂಟ್‌ಕೇಸ್‌ಗಳನ್ನು ಲೋಡ್ ಮಾಡುತ್ತಿರುವ ವೀಡಿಯೊಗಳು ಸಖತ್ ವೈರಲ್ ಆಗುತ್ತಿದ್ದು, ಈ ಎಲ್ಲಾ ಸೂಟ್‌ಕೇಸ್‌ಗಳು ಅಧ್ಯಕ್ಷ ರಾಜಪಕ್ಸೆ ಅವರದ್ದೇ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Sri Lanka President Gotabaya Rajapaksa Flee in Suitcases Loaded Navy Ship amid Economic Crisis

ಎಸ್‌ಎಲ್‌ಎನ್‌ಎಸ್ ಗಜಬಾಹು ಹಡಗಿನಲ್ಲಿ ಮೂವರು ವ್ಯಕ್ತಿಗಳು ದೊಡ್ಡ ಸೂಟ್‌ಕೇಸ್‌ಗಳನ್ನು ಹೊತ್ತೊಯ್ಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗುತ್ತಿವೆ. ಈ ಮೂವರು ವ್ಯಕ್ತಿಗಳು ಅವಸರದಲ್ಲಿ ಓಡುತ್ತಿರುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಖಾಸಗಿ ಸುದ್ದಿ ವಾಹಿನಿಯ ವರದಿ ಹೇಳುವುದೇನು?:

ಕೊಲಂಬೊ ಬಂದರಿನಲ್ಲಿರುವ ಹಾರ್ಬರ್ ಮಾಸ್ಟರ್, ಒಂದು ಗುಂಪು ಎಸ್ಎಲ್ಎನ್ಎಸ್ ಸಿಂದೂರಲಾ ಮತ್ತು ಎಸ್ಎಲ್ಎನ್ಎಸ್ ಗಜಬಾಹು ಹಡಗನ್ನು ಹತ್ತಿ ಬಂದರು ಎಂದು ಹೇಳಿರುವ ಬಗ್ಗೆ ಎಂದು ನ್ಯೂಸ್ 1 ಚಾನೆಲ್ ವರದಿ ಮಾಡಿದೆ. ಅವರು ಮ್ಯಾನಿಫೆಸ್ಟ್ ಅಥವಾ ಹಡಗುಗಳನ್ನು ಹತ್ತಿದವರ ಬಗ್ಗೆ ವಿವರಗಳನ್ನು ನೀಡಲು ಸಾಧ್ಯವಿಲ್ಲ ಎಂದು ಚಾನೆಲ್ ಹೇಳಿದೆ.

English summary
Video: Sri Lanka President Gotabaya Rajapaksa Flee in Suitcases Loaded Navy Ship amid Economic Crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X