ಪಾಕ್‌ನಲ್ಲಿ ರಷ್ಯಾ, ಚೀನಾ, ಇರಾನ್ ಬೇಹುಗಾರಿಕೆ ಅಧಿಕಾರಿಗಳ ಸಭೆ

ಇಸ್ಲಾಮಾಬಾದ್, ಜುಲೈ 11: ಅಫ್ಘಾನಿಸ್ತಾನದಲ್ಲಿ ಇಸ್ಲಾಮಿಕ್ ಸ್ಟೇಟ್‌ ಉಗ್ರರ ಬೆಳವಣಿಗೆಯ ಕುರಿತಂತೆ ಚರ್ಚಿಸಲು ರಷ್ಯಾ, ಚೀನಾ ಮತ್ತು ಇರಾನ್‌ಗಳ ಬೇಹುಗಾರಿಕಾ ಮುಖ್ಯಸ್ಥರು ಪಾಕಿಸ್ತಾನದಲ್ಲಿ ಸಭೆ ಸೇರಿದ್ದಾರೆ.

ಅಫ್ಘಾನಿಸ್ತಾನದ ಪ್ರದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ಪ್ರಬಲವಾಗಿ ತಲೆ ಎತ್ತುತ್ತಿರುವ ಅಪಾಯಕಾರಿ ಬೆಳವಣಿಗೆ ಬಗ್ಗೆ ಈ ಚರ್ಚೆ ಕೇಂದ್ರೀಕರಿಸಿದೆ ಎಂದು ರಷ್ಯಾದ ವಿದೇಶಿ ಬೇಹುಗಾರಿಕಾ ಸೇವೆಯ ವಕ್ತಾರ ಸರ್ಜಿ ಇವಾನೊವ್ ಹೇಳಿದ್ದಾರೆ.

ರಷ್ಯಾದ ವಿದೇಶಿ ಬೇಹುಗಾರಿಕಾ ನಿರ್ದೇಶಕ ಸರ್ಜಿ ನಾರಿಷ್ಕಿನ್ ಹಾಗೂ ಚೀನಾ ಮತ್ತು ಇರಾನ್‌ನ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ.

spy chiefs from russia, china, iran and pak hold high level meeting

ಅಫ್ಘಾನಿಸ್ತಾನದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ಅಮೆರಿಕ ಬೆಂಬಲ ನೀಡುತ್ತಿದೆ ಎಂದು ಕೆಲವು ತಿಂಗಳ ಹಿಂದೆ ರಷ್ಯಾದ ರಾಜತಾಂತ್ರಿಕರು ಆರೋಪಿಸಿದ್ದರು.

2015ರಲ್ಲಿ ಇಸ್ಲಾಮಿಕ್ ಸ್ಟೇಟ್, ತನ್ನ ಆಫ್ಘನ್ ನೆಲೆಯನ್ನು ಸ್ಥಾಪಿಸಿದ್ದಾಗಿ ಘೋಷಣೆ ಮಾಡಿತ್ತು. ಅಮೆರಿಕ ನಡೆಸಿದ ಡ್ರೋಣ್ ದಾಳಿಯಲ್ಲಿ ಅದರ ಇಬ್ಬರು ಪ್ರಮುಖ ನಾಯಕರು ಹತ್ಯೆಯಾಗಿದ್ದರು.

ಆದರೆ, ಆ ಸಂಘಟನೆ ಇಂದಿಗೂ ಅಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಸಿರಿಯಾ ಮತ್ತು ಇರಾಕ್‌ನ ಸುಮಾರು ನೂರು ಉಗ್ರರು ಇಲ್ಲಿ ನೆಲೆಯೂರಿದ್ದಾರೆ ಎನ್ನಲಾಗಿದೆ.

ಮಧ್ಯಪ್ರಾಚ್ಯದಲ್ಲಿ ನಿರಂತರ ದಾಳಿಗಳ ಬಳಿಕ ದುರ್ಬಲವಾದ ಇಸ್ಲಾಮಿಕ್ ಸ್ಟೇಟ್, ಅಲ್ಲಿಂದ ಅಫ್ಘಾನಿಸ್ತಾನದ ಕಡೆಗೆ ತೆರಳುತ್ತಿದ್ದು, ಅಲ್ಲಿ ಪ್ರಬಲವಾಗುತ್ತಿದೆ. ಇದರ ಬಗ್ಗೆ ಚೀನಾ, ರಷ್ಯಾ ಇರಾನ್ ಮತ್ತು ಪಾಕಿಸ್ತಾನದ ಭದ್ರತಾ ಅಧಿಕಾರಿಗಳು ಕಳವಳಗೊಂಡಿದ್ದಾರೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.

ಅಫ್ಘಾನಿಸ್ತಾನದ ಭದ್ರತಾ ವಿಚಾರವಾಗಿ ಹೆಚ್ಚು ದೃಢವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಕಳೆದ ತಿಂಗಳು ನಡೆದ ಶಾಂಘೈ ಸಹಕಾರ ಸಮ್ಮೇಳನದ ವೇಳೆ ಪಾಕಿಸ್ತಾನದಲ್ಲಿ ಉನ್ನತ ಮಟ್ಟದ ಸಭೆ ನಡೆಸುವುದಾಗಿ ಪ್ರಕಟಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+