ಸೂರ್ಯಗ್ರಹಣ ಕಣ್ತುಂಬಿಕೊಂಡ ಜನರು, ಕಂಕಣ ಸೂರ್ಯಗ್ರಹಣದ ಬಗ್ಗೆ ಇಲ್ಲಿದೆ ಮಾಹಿತಿ... Solar Eclipse
ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಿದ್ದು, ಕಂಕಣ ಸೂರ್ಯಗ್ರಹಣ ಕಣ್ತುಂಬಿಕೊಂಡ ಜನರು ಪುಳಕಿತರಾದರು. ಖಗೋಳ ಲೋಕದಲ್ಲಿ ಮತ್ತೊಂದು ಅದ್ಭುತ ಘಟನೆ ನಡೆದಿದ್ದು, ಫೆಬ್ರವರಿ ತಿಂಗಳಲ್ಲಿ ವರ್ಷದ ಮೊದಲ ಸೂರ್ಯಗ್ರಹಣ ಬಂದಿದೆ. ಬಾಹ್ಯಾಕಾಶ ಲೋಕದ ವಿಸ್ಮಯವನ್ನ ಇಡೀ ಪ್ರಪಂಚವೇ ಕಣ್ತುಂಬಿಕೊಂಡಿದೆ. 2026 ಫೆಬ್ರವರಿ 17 ಮಂಗಳವಾರ ಸಂಭವಿಸಿದ ಕಂಕಣ ಸೂರ್ಯಗ್ರಹಣ, ದಕ್ಷಿಣ ಆಫ್ರಿಕಾ ಸೇರಿ ಜಿಂಬಾಬ್ವೆ, ಬೋತ್ಸ್‌ವಾನಾ, ನಮೀಬಿಯಾ, ಮಾರಿಷಸ್, ತಾಂಜೇನಿಯಾ ಭಾಗದಲ್ಲಿ ಕಾಣಿಸಿದೆ.
ಹಾಗೇ ಆಫ್ರಿಕಾ ದೇಶಗಳ ಜೊತೆ ದಕ್ಷಿಣ ಅಮೆರಿಕದ ಹಲವು ಭಾಗಳಲ್ಲಿ ಈ ಕಂಕಣ ಸೂರ್ಯಗ್ರಹಣವು ಗೋಚರಿಸಿ ಗಮನ ಸೆಳೆದಿದೆ. ಅರ್ಜೆಂಟಿನಾ, ಅಂಟಾರ್ಟಿಕಾ ಭಾಗವೂ ಸೇರಿದಂತೆ ಸುತ್ತಮುತ್ತ ಇರುವ ಹಲವು ಪ್ರದೇಶದಲ್ಲಿ ಗ್ರಹಣ ಕಂಡಿದೆ. ವೈಜ್ಞಾನಿಕ ಅಧ್ಯಯನದ ದೃಷ್ಟಿಯಿಂದ ಕೂಡ ವಿಜ್ಞಾನಿಗಳಿಗೆ ಕಂಕಣ ಸೂರ್ಯಗ್ರಹಣ ಸಾಕಷ್ಟು ಮಹತ್ವದಾಗಿತ್ತು, ಅಲ್ಲದೆ ಇದಕ್ಕಾಗಿ ಸಾಕಷ್ಟು ದಿನಗಳ ಕಾಲ ಕಾದು ಕುಳಿತಿದ್ದ ವಿಜ್ಞಾನಿಗಳು ಯಶಸ್ಸು ಕಂಡರು. ಗ್ರಹಣದ ವೇಳೆ ಸೂರ್ಯನ ತೀವ್ರ ಬೆಳಕು ಮುಚ್ಚಲ್ಪಡುವ ಕಾರಣ ಖಗೋಳ ವಿಜ್ಞಾನಿಗಳು ಸೂರ್ಯನ ಕೊರೋನಾ ಭಾಗ ಅಧ್ಯಯನ ಮಾಡಲು ಸಾಕಷ್ಟು ಸುಲಭ ಆಗಿತ್ತು. ಇದಕ್ಕಾಗಿಯೇ ಜಗತ್ತಿನ ಬಹುತೇಕ ಎಲ್ಲಾ ಟೆಲಿಸ್ಕೋಪ್‌ಗಳು ಸೂರ್ಯನ ಕಡೆಗೆ ಮುಖಮಾಡಿ ನಿಂತಿದ್ದವು.

ಸೌರ ಜ್ವಾಲೆಯ ಅಧ್ಯಯನಕ್ಕೂ ಸಹಕಾರಿ
ಕೊರೋನಾ ಜೊತೆಗೆ ಸೌರ ಜ್ವಾಲೆ & ಕೊರೋನಲ್ ಮಾಸ್ ಇಜೆಕ್ಷನ್ ಗಮನಿಸಲು ಕೂಡ ಇದೇ ಗ್ರಹಣದ ಸಮಯ ಸಹಕಾರಿ ಆಗಿತ್ತು. ಹೀಗಾಗಿ ಜಗತ್ತಿನ ದೊಡ್ಡ ದೊಡ್ಡ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಆಕಾಶದತ್ತ ಮುಖಮಾಡಿ ಕೂತಿದ್ದವು. ವಿಜ್ಞಾನಿಗಳು ಕೂಡ ಸೂರ್ಯಗ್ರಹಣ ಸ್ಪಷ್ಟವಾಗಿ ಕಂಡ ಜಾಗಕ್ಕೆ ಪ್ರಯಾಣ ಬೆಳೆಸಿ, ಮನುಷ್ಯರ ಭವಿಷ್ಯದ ಉಳಿವಿಗಾಗಿ ಅಧ್ಯಯನ ಮಾಡಿದ್ದಾರೆ. ಈ ಮೂಲಕ ಸುಮಾರು 4 ಗಂಟೆಗೂ ಹೆಚ್ಚು ಕಾಲ ಗೋಚರಿಸಿದ ಕಂಕಣ ಸೂರ್ಯಗ್ರಹಣ ಇಡೀ ಪ್ರಪಂಚದ ಗಮನ ಸೆಳೆದಿತ್ತು. ಇನ್ನು ಈ ಬಾರಿ ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸಿಲ್ಲ, ಏಕೆಂದರೆ ಸೂರ್ಯಗ್ರಹಣ ಸಂಭವಿಸುವ ಹೊತ್ತಿಗೆ ಭಾರತದಲ್ಲಿ ಕತ್ತಲೆ ಆವರಿಸಿತ್ತು.
ಸೂರ್ಯಗ್ರಹಣ ಹೇಗೆ ಸಂಭವಿಸುತ್ತದೆ?
ಮನುಷ್ಯರು ವಾಸ ಮಾಡುತ್ತಿರುವ ಭೂ ಗ್ರಹ, ಸೂರ್ಯ ಎಂಬ ನಮ್ಮ ಸೌರವ್ಯೂಹದ ನಕ್ಷತ್ರದ ಸುತ್ತಲೂ ಸುತ್ತುತ್ತದೆ. ಇನ್ನು ಚಂದ್ರ ಎಂಬ ಭೂಮಿ ಉಪಗ್ರಹ ಭೂಮಿಯ ಸುತ್ತಲೂ ಸುತ್ತುತ್ತೆ. ಈ ನಡುವೆ ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಯ ಸುತ್ತಲೂ ಸುತ್ತು ಹಾಕುತ್ತಾ ಹಾಕುತ್ತಾ ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತೆ. ಭೂಮಿ & ಸೂರ್ಯನ ನಡುವೆ ಬರುವ ಚಂದ್ರ ತನ್ನ ನೆರಳನ್ನ ಭೂಮಿ ಮೇಲೆ ಬೀಳುವಂತೆ ಮಾಡಿ, ಸೂರ್ಯನಿಗೆ ಅಡ್ಡಲಾಗಿ ನಿಲ್ಲುತ್ತಾನೆ. ಈ ಸಮಯದಲ್ಲೇ ಸೂರ್ಯ ನಾಪತ್ತೆ ಆಗುವುದು & ಆಕಾಶದಲ್ಲಿ ಕತ್ತಲು & ಬೆಳಕಿನ ಆಟ ನಡೆಯುವುದು ಗಮನ ಸೆಳೆಯುತ್ತದೆ. ಇದೀಗ ಮತ್ತೊಮ್ಮೆ ಆಕಾಶದಲ್ಲಿ ಕತ್ತಲು & ಬೆಳಕಿನ ಆಟ ನಡೆದು ಇತಿಹಾಸದ ಪುಟ ಸೇರಿದೆ.












Click it and Unblock the Notifications