ಖಗ್ರಾಸ ಸೂರ್ಯಗ್ರಹಣ ಎಲ್ಲೆಲ್ಲಿ ವೀಕ್ಷಣೆಗೆ ಲಭ್ಯ

ಬೆಂಗಳೂರು, ಆಗಸ್ಟ್ 20: ಸುಮಾರು 99 ವರ್ಷಗಳ ನಂತರ ಉತ್ತರ ಅಮೆರಿಕದಲ್ಲಿ ಆಗಸ್ಟ್ 21ರ ಅಮವಾಸ್ಯೆಯಂದು ಖಗ್ರಾಸ ಸೂರ್ಯಗ್ರಹಣ ಸಂಭವಿಸಲಿದೆ. ಸೂರ್ಯ ಗ್ರಹಣ ನೋಡುವುದು ಎಲ್ಲೆಲ್ಲಿ? ಯಾವಾಗ? ವಿವರ ಮುಂದಿದೆ.

ಈ ಅತ್ಯದ್ಭುತ ಖಗೋಳ ವಿದ್ಯಮಾನಕ್ಕಾಗಿ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಭರ್ಜರಿ ತಯಾರಿ ನಡೆಸಿದೆ. ಸಂಪೂರ್ಣ ಸೂರ್ಯ ಗ್ರಹಣಕ್ಕಿಂತ ಮೊದಲು, ಗ್ರಹಣದ ಸಮಯ ಮತ್ತು ನಂತರದ ಚಿತ್ರಗಳನ್ನು ಸೆರೆಹಿಡಿಯಲು 11 ಬಾಹ್ಯಾಕಾಶ ನೌಕೆ, 3 ನಾಸಾ ವಿಮಾನ, ಎತ್ತರದಲ್ಲಿ ಹಾರಲಿರುವ 50ಕ್ಕೂ ಹೆಚ್ಚು ಏರ್ ಬಲೂನ್ ಗಳು ಸಿದ್ಧಗೊಂಡಿದ್ದು, ಆಕಾಶದಿಂದ ಖಗೋಳ ವಿಜ್ಞಾನಿಗಳು ಕೂಡ ಫೋಟೋ ಸೆರೆಹಿಡಿಯಲಿದ್ದಾರೆ.

ಎರಡು ಗಂಟೆಗಳ ಅವಧಿಯಲ್ಲಿ ಓರೆಗಾಂವ್ ನಿಂದ ದಕ್ಷಿಣ ಕ್ಯಾಲಿಫೋರ್ನಿಯಾವರೆಗೆ 14 ರಾಜ್ಯಗಳಲ್ಲಿ ಈ ಖಗ್ರಾಸ್ ಸೂರ್ಯ ಗ್ರಹಣ ಕಂಡುಬರಲಿದ್ದು, ಎರಡು ನಿಮಿಷಗಳ ಕಾಲ ಸೂರ್ಯ ನೋಡುವವರಿಗೆ ಸುಟ್ಟು ಕರಕಲಾದಂತೆ ಕಾಣಿಸಲಿದ್ದಾನೆ.

ಆ ಎರಡು ನಿಮಿಷಗಳ ಕಾಲ ಕತ್ತಲು ಆವರಿಸಿಕೊಳ್ಳಲಿದೆ. ಇಲಿನಾಯ್ ನಲ್ಲಿ ಅತಿ ಹೆಚ್ಚು ಅವಧಿ ಈ ಗ್ರಹಣ ವೀಕ್ಷಣೆಗೆ ಲಭ್ಯವಿದೆ.

ಗ್ರಹಣ ಅವಧಿ

ಗ್ರಹಣ ಅವಧಿ

ಗ್ರಹಣದ ಅವಧಿ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ. ಖಗ್ರಾಸ ವಿರಲಿ ಸಂಪೂರ್ಣ ಸೂರ್ಯಗ್ರಹಣವಿರಲಿ ಬರಿಗಣ್ಣಿನಿಂದ ನೋಡುವುದು ಅಪಾಯಕಾರಿ. ಸರಿಯಾದ ವ್ಯವಸ್ಥೆ(ಫಿಲ್ಟರ್ ಹಾಳೆ) ಮೂಲಕ ಸಂಪೂರ್ಣ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು.

ಎಲ್ಲೆಲ್ಲಿ ನೋಡಬಹುದು

ಎಲ್ಲೆಲ್ಲಿ ನೋಡಬಹುದು

ಉತ್ತರ ಅಮೆರಿಕ ಹಾಗೂ ದಕ್ಷಿಣ ಅಮೆರಿಕ, ಆಫ್ರಿಕಾ ಮತ್ತು ಯುರೋಪ್ ನಲ್ಲಿ ಪಾರ್ಶ್ವ ನೋಟ ಲಭ್ಯವಿದೆ. ಯುಎಸ್ ನ 14 ರಾಜ್ಯಗಳಲ್ಲಿ ಲಭ್ಯವಿದ್ದು, ಸಂಪೂರ್ಣ ಖಗ್ರಾಸ ಸೂರ್ಯಗ್ರಹಣವನ್ನು ಎಲ್ಲೆಲ್ಲಿ ನೋಡಬಹುದು ಎಂಬುದರ ಬಗ್ಗೆ ನಕ್ಷೆಯನ್ನು ನಾಸಾ ತನ್ನ ವೆಬ್ ಸೈಟ್ ನಲ್ಲಿ ನೀಡಿದೆ. ಮ್ಯಾಪ್ ಇಲ್ಲಿದೆ ನೋಡಿ

2017ರ ವರ್ಷದಲ್ಲಿ ನಾಲ್ಕು ಗ್ರಹಣ

2017ರ ವರ್ಷದಲ್ಲಿ ನಾಲ್ಕು ಗ್ರಹಣ

2017ರ ವರ್ಷದಲ್ಲಿ ನಾಲ್ಕು ಗ್ರಹಣಗಳಿಗೆ ವಿಶ್ವ ಸಾಕ್ಷಿಯಾಗಲಿದೆ. ಇದರಲ್ಲಿ ಎರಡು ಗ್ರಹಣಗಳು ಮಾತ್ರ ಭಾಗಶಃ ಭಾರತದಲ್ಲಿ ಗೋಚರಿಸಲಿವೆ. ಕಳೆದ ವರ್ಷ ಬರೋಬ್ಬರಿ ಐದು ಗ್ರಹಣಗಳು ಸಂಭವಿಸಿದ್ದುವು, ಅದರಲ್ಲಿ ಭಾರತದಲ್ಲಿ ಗೋಚರಿಸಿದ್ದದ್ದು ಎರಡೇ ಗ್ರಹಣಗಳು. ಗ್ರಹಣ ಎನ್ನುವುದು ಸೌರಮಂಡಲದಲ್ಲಿ ಭೂಮಿ, ಸೂರ್ಯ ಮತ್ತು ಚಂದ್ರರನ್ನೊಳಗೊಂಡ ಖಗೋಳ ಪ್ರಕ್ರಿಯೆವಾಗಿದ್ದು, ಅಮಾವಾಸ್ಯೆಯ ದಿನ ಸೂರ್ಯ ಗ್ರಹಣ, ಹುಣ್ಣಿಮೆಯ ದಿನದಂದು ಚಂದ್ರಗ್ರಹಣ ಸಂಭವಿಸುತ್ತದೆ

ಪಾರ್ಶ್ವ ಗ್ರಹಣ

ಪಾರ್ಶ್ವ ಗ್ರಹಣ

ಪಾರ್ಶ್ವಗ್ರಹಣದ ವೇಳೆ ಸೂರ್ಯನ ಮೇಲೆ ಚಂದ್ರನ ನೆರಳು ಸಂಪೂರ್ಣವಾಗಿ ಆವರಿಸುವುದಿಲ್ಲ. ಗ್ರಹಣದ ಆರಂಭ ಕಾಲವನ್ನು ಲಿಂಕನ್ ಬೀಚ್ ಓರೆಗಾನ್9:05 a.m. PDT ನಲ್ಲಿ ಕಾಣಬಹುದು.10:16 a.m. PDTರ ವೇಳೆಗೆ ಸಂಪೂರ್ಣ ಗ್ರಹಣದ ದೃಶ್ಯವನ್ನು ಕಾಣಬಹುದಾಗಿದೆ. ನಂತರ ಓರೆಗಾನ್, ಇದಾಹೊ, ವ್ಯೋಮಿಂಗ್, ಮೊಂಟಾನಾ, ನೆಬ್ರಾಸ್ಕಾ, ಐಯೋವಾ, ಕಾನ್ಸಸ್, ಮಿಸ್ಸೋರಿ, ಇಲಿಯಾನ್, ಕೆಂಟುಕಿ, ಜಾರ್ಜಿಯಾ ಹಾಗೂ ಉತ್ತರ-ದಕ್ಷಿಣ ಕರೋಲಿನಾದಲ್ಲಿ ಗೋಚರಿಸಲಿದೆ.
ಗ್ರಹಣದ ಮೋಕ್ಷವನ್ನು 2:48 p.m. EDT ಇಂದ4:09 EDT ಅವಧಿಯಲ್ಲಿ ದಕ್ಷಿಣ ಕರೋಲಿನಾ ಭಾಗದಲ್ಲಿ ನೋಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+