ಆಫ್ಘಾನಿಸ್ತಾನದಲ್ಲಿ 6 ಮಂದಿ ಭಾರತೀಯರ ಅಪಹರಣ
ಕಾಬೂಲ್, ಮೇ 6: ಅಪರಿಚಿತ ಸಶಸ್ತ್ರಧಾರಿ ವ್ಯಕ್ತಿಗಳು ಆಪ್ಘಾನಿಸ್ತಾನದ ಬಘ್ಲಾನ್ ಪ್ರಾಂತ್ಯದಲ್ಲಿ ಆರು ಮಂದಿ ಭಾರತೀಯರನ್ನು ಅಪಹರಿಸಿದ್ದಾರೆ.
ಪ್ರಾಂತ್ಯದ ರಾಜಧಾನಿ ಪುಲ್-ಎ- ಖೊಮ್ರೆಯಲ್ಲಿನ ಬಾಘ್-ಎ-ಶಾಮಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಪಹೃತರಲ್ಲಿ ಆಘ್ಫಾನಿಸ್ತಾನದ ಪ್ರಜೆಯೊಬ್ಬರು ಕೂಡ ಸೇರಿದ್ದಾರೆ.
ಭಾರತ ಮೂಲದ ಮೂಲಸೌಕರ್ಯ ನಿರ್ಮಾಣ ಕಂಪೆನಿ ಕೆಇಸಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಪಹೃತರು ಅಲ್ಲಿ ಉದ್ಯೋಗಿಗಳಾಗಿದ್ದರು. ಕಂಪೆನಿಯು ವಿದ್ಯುತ್ ಉಪ ಘಟಕದ ಗುತ್ತಿಗೆ ಕಾರ್ಯ ನಡೆಸುತ್ತಿದ್ದು, ಆ ಸ್ಥಳಕ್ಕೆ ತೆರಳುವಾಗ ಅವರನ್ನು ಅಪಹರಿಸಲಾಗಿದೆ.

ಇದು ತಾಲಿಬಾನ್ ಉಗ್ರರ ಕೃತ್ಯ ಎಂದು ಬಘ್ಲಾನ್ ಪ್ರಾಂತ್ಯದ ಆಡಳಿತ ಆರೋಪಿಸಿದೆ. ಇದುವರೆಗೂ ಯಾವುದೇ ಸಂಘಟನೆ ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ.











Click it and Unblock the Notifications