ಕ್ಯಾಲಿಫೋರ್ನಿಯಾದಲ್ಲಿ ಬಂದೂಕುಧಾರಿಯಿಂದ ಗುಂಡಿನ ದಾಳಿ : ಮೂವರ ಹತ್ಯೆ
ಕ್ಯಾಲಿಫೋರ್ನಿಯಾ, ಜನವರಿ 05 : ಬಂದೂಕುಧಾರಿಯೊಬ್ಬ ಬೌಲಿಂಗ್ ಆಡುವ ತಾಣದಲ್ಲಿ ಯದ್ವಾತದ್ವಾ ಗುಂಡು ಹಾರಿಸಿದ್ದರಿಂದ ಮೂವರು ಹತರಾಗಿ ನಾಲ್ವರು ಗಾಯಗೊಂಡಿರುವ ಘಟನೆ ಶನಿವಾರ ಕ್ಯಾಲಿಫೋರ್ನಿಯಾದ ಟಾರೆನ್ಸ್ ನಲ್ಲಿ ನಡೆದಿದೆ.
ಗೇಬಲ್ ಹೌಸ್ ಬೌಲ್ ತಾಣದಲ್ಲಿ ಈ ಘಟನೆ ನಡೆದಿದ್ದು, ಇದರ ಬಳಿ ಯಾರೂ ಸುಳಿಯದಂತೆ ಟಾರೆನ್ಸ್ ಪೊಲೀಸರು ಸಾರ್ವಜನಿಕರಿಗೆ ತಾಕೀತು ಮಾಡುತ್ತಿದ್ದಾರೆ. ಪೊಲೀಸರು ಆವರಣವನ್ನು ಸಂಪೂರ್ಣವಾಗಿ ಸುತ್ತುವರಿದಿದ್ದು, ತನಿಖೆ ನಡೆಸುತ್ತಿದ್ದಾರೆ.
ಲಾಸ್ ಏಂಜಲಿಸ್ ನಿಂದ 32 ಕಿ.ಮೀ. ದೂರದಲ್ಲಿರುವ ಟಾರೆನ್ಸ್ ನಲ್ಲಿ ಶುಕ್ರವಾರ ಮಧ್ಯರಾತ್ರಿಯ ನಂತರ ಶೂಟೌಟ್ ಜರುಗಿದೆ. ಓರ್ವ ಪ್ರತ್ಯಕ್ಷದರ್ಶಿಯ ಪ್ರಕಾರ, ಹೊಡೆದಾಟದ ನಂತರ 9 ಸುತ್ತು ಗುಂಡು ಹಾರಿಸಿರುವುದು ಕೇಳಿಬಂದಿದೆ.

ಈ ಘಟನೆಯ ಪ್ರತ್ಯಕ್ಷದರ್ಶಿಯಾಗಿರುವ ಜೀಸಸ್ ಪೆರೆಜ್ ಅವರು, ಗುಂಡಿನ ಮೊರೆತ ಕೇಳಿಬರುತ್ತಿದ್ದಂತೆ ನಾವು ಬಾರ್ ನೊಳಗೆ ಓಡಿ ಅಡಗಿಕೊಂಡೆವು. ಕೇಳಿಬಂದಿರುವ ಮಾಹಿತಿಯ ಪ್ರಕಾರ ಇಬ್ಬರಿಗೆ ಗುಂಡು ಬಿದ್ದಿದೆ ಎಂದು ದಿ ಲಾಸ್ ಏಂಜಲಿಸ್ ಟೈಮ್ಸ್ ಗೆ ತಿಳಿಸಿದ್ದಾರೆ.
Reports of shots fired with multiple victims down. T P D is on scene. Investigation is ongoing. Please stay away from the area.
— Torrance Police (@TorrancePD) January 5, 2019
ಇದಕ್ಕೂ ಮೊದಲು ಹಲವರ ನಡುವೆ ಹೊಡೆದಾಟ ನಡೆಯುತ್ತಿರುವುದು ಕೇಳಿಬಂದಿತು. ಗುಂಡಿನ ಶಬ್ದವೂ ಕೇಳಿಬರುತ್ತಿದ್ದಂತೆ 15 ನಿಮಿಷಗಳ ಕಾಲ ಅಡಗಿಕುಳಿತುಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ.












Click it and Unblock the Notifications