ಅಟ್ಲಾಂಟಾ: ಮಸಾಜ್ ಪಾರ್ಲರ್ ಬಳಿ ಗುಂಡಿನ ದಾಳಿಗೆ 8 ಮಂದಿ ಸಾವು
ಜಾರ್ಜಿಯಾ, ಮಾರ್ಚ್ 17: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಅಟ್ಲಾಂಟಾ ನಗರದ ಎರಡು ಪ್ರದೇಶಗಳಲ್ಲಿ ಇರುವ ಮಸಾಜ್ ಪಾರ್ಲರ್ ಗಳ ಬಳಿ ನಡೆದ ಗುಂಡಿನ ದಾಳಿಯಲ್ಲಿ ಎಂಟು ಮಂದಿ ಮೃತಪಟ್ಟಿದ್ದು, ಐವರು ಗಾಯಗೊಂಡಿರುವ ಘಟನೆ ನಡೆದಿದೆ.
ಮಂಗಳವಾರ ಸಂಜೆ ವೇಳೆಯಲ್ಲಿ ವಾಯುವ್ಯದ ಚೆರೋಕಿ ಕೌಂಟಿ ಬಳಿಯ ಮಸಾಜ್ ಪಾರ್ಲರ್ ಬಳಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಈಶಾನ್ಯ ಅಟ್ಲಾಂಟಾ ಸಮೀಪದಲ್ಲಿ ದುಷ್ಕರ್ಮಿಗಳು ನಡೆಸಿದ ಫೈರಿಂಗ್ ನಲ್ಲಿ ನಾಲ್ವರು ಪ್ರಾಣ ಬಿಟ್ಟಿದ್ದಾರೆ. 50 ಕಿಲೋ ಮೀಟರ್ ಅಂತರದ ಎರಡು ಪ್ರದೇಶಗಳಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ದಾಳಿ ನಡೆಸಲಾಗಿದೆ. ಇದರ ಹಿಂದೆ ಒಂದು ತಂಡದ ಕೈವಾಡವಿರುವ ಬಗ್ಗೆ ಅಧಿಕಾರಿಗಳು ಶಂಕಿಸಿದ್ದಾರೆ.

ದುಷ್ಕರ್ಮಿಗಳ ಪತ್ತೆಗೆ ಶೋಧಕಾರ್ಯ:
ಈಶಾನ್ಯ ಅಟ್ಲಾಂಟಾ ಮತ್ತು ವಾಯುವ್ಯ ಚರೋಕಿ ಕೌಂಟಿ ಬಳಿ ನಡೆದ ದಾಳಿ ಹಿಂದಿನ ರೂವಾರಿಗಳ ಪತ್ತೆಗೆ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದಾರೆ. ಡಾರ್ಕ್ ಕಲರ್ ಎಸ್ ಯುವಿ ಕಾರಿನಲ್ಲಿ ಬಂದು ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.












Click it and Unblock the Notifications