ಪ್ರತಿಭಟನೆ ಹೆಸರಿನಲ್ಲಿ ವಿನಾಶ; ಬಾಂಗ್ಲಾದೇಶ ಗಲಭೆ ಬಗ್ಗೆ ಮೌನ ಮುರಿದ ಶೇಖ್ ಹಸೀನಾ
ಬಾಂಗ್ಲಾದೇಶ ಗಲಭೆ ತೀವ್ರಗೊಂಡ ಬೆನ್ನಲ್ಲೇ ದೇಶ ತೊರೆದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಇದೇ ಮೊದಲ ಬಾರಿಗೆ ಗಲಭೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ದೇಶದಲ್ಲಿ ಅಶಾಂತಿ ಸೃಷ್ಟಿಸಿದ ಗಲಭೆಕೋರರಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಬಾಂಗ್ಲಾದೇಶದ ಸ್ಥಾಪಕ ಪಿತಾಮಹರೂ ಆಗಿದ್ದ ತನ್ನ ತಂದೆ ಶೇಖ್ ಮುಜಿಬುರ್ ರೆಹಮಾನ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕೇಳಿದ್ದಾರೆ.
ಶೇಖ್ ಹಸೀನಾ ಅವರ ಮೂರು ಪುಟಗಳ ಹೇಳಿಕೆಯನ್ನು ಅವರ ಮಗನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ತಮ್ಮ ಹೇಳಿಕೆಯಲ್ಲಿ ಶೇಖ್ ಹಸೀನಾ ತನ್ನ ತಂದೆಯನ್ನು ಆಗಸ್ಟ್ 15, 1975 ರಂದು ಹತ್ಯೆ ಮಾಡಿದಾಗ ಕಳೆದುಕೊಂಡ ಕುಟುಂಬ ಸದಸ್ಯರ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ. ಮುಜಿಬುರ್ ರೆಹಮಾನ್ ಅವರ ಪುತ್ರರು ಮತ್ತು ಅವರ ಪತ್ನಿಯರು, ಅವರ ಸಹೋದರನ ಕುಟುಂಬ, ನಿಕಟ ಸಹೋದ್ಯೋಗಿಗಳು ಮತ್ತು ಸಹಚರರು, ದಂಗೆಯ ಭಾಗವಾಗಿ ಅದೇ ರಾತ್ರಿ ಸೈನ್ಯದಿಂದ ಹತ್ಯೆಯಾಗಿದ್ದರು.

ಪ್ರತಿಭಟನೆಯ ಹೆಸರಿನಲ್ಲಿ ದೇಶಾದ್ಯಂತ ವಿನಾಶದ ವಿನಾಶವನ್ನು ಸೃಷ್ಟಿಸಲಾಗಿದೆ. ಹಲವು ಜನ ಪ್ರಾಣ ಕಳೆದುಕೊಂಡಿದ್ದಾರೆ. ವಿದ್ಯಾರ್ಥಿಗಳು, ಪೊಲೀಸರು, ಪತ್ರಕರ್ತರು, ಸಮಾಜ ಸೇವಕರು, ಸಾಮಾನ್ಯ ಜನರು, ಅವಾಮಿ ಲೀಗ್‌ನ ನಾಯಕರು, ಕೆಲಸಗಾರರು, ಪಾದಚಾರಿಗಳು ಮತ್ತು ಕಚೇರಿ ಕೆಲಸಗಾರರು ತಮ್ಮ ಜೀವ ತೆತ್ತಿದ್ದಾರೆ ಎಂದಿದ್ದಾರೆ.
ಪ್ರೀತಿ ಪಾತ್ರರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ನಾನು ಸಂತಾಪ ಸೂಚಿಸುತ್ತೇನೆ. ಈ ಹತ್ಯಾಕಾಂಡದಲ್ಲಿ ಭಾಗಿಯಾದವರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.
ತನ್ನ ಮನೆಗೆ ಪ್ರತಿಭಟನಾಕಾರರು ನುಗ್ಗಿದ್ದರ ಬಗ್ಗೆಯೂ ಮಾತನಾಡಿದ್ದು, ನಮ್ಮಲ್ಲಿದ್ದ ನೆನಪುಗಳು ಅದು ಈಗ ಬೂದಿಯಾಗಿದೆ. ಮುಜಿಬುರ್ ರೆಹಮಾನ್‌ಗೆ ತೋರಿದ ಅಗೌರವದಿಂದ, ಅವರ ನಾಯಕತ್ವದಲ್ಲಿ ನಮಗೆ ನಮ್ಮ ಸ್ವಾತಂತ್ರ್ಯ, ಮನ್ನಣೆ, ಸ್ವಾಭಿಮಾನ, ಸುರಿಸಿದ ರಕ್ತ, ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಲಾಗಿದೆ. ಇದಕ್ಕೆ ನ್ಯಾಯ ಬೇಕೆಂದು ನನ್ನ ದೇಶದ ಪ್ರಜೆಗಳನ್ನು ಕೇಳುತ್ತೇನೆ ಎಂದರು.
ಆಗಸ್ಟ್ 15 ಅನ್ನು ಶೋಕಾಚರಣೆಯ ದಿನವೆಂದು ಗುರುತಿಸಲಾಗಿದೆ, "ಬಾಂಗ್ಲಾಬಂಧು ಭವನ" ದಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸಲು ಮತ್ತು ಪ್ರಾರ್ಥಿಸಲಾಗುತ್ತದೆ ಎಂದು ಹೇಳಿದ್ದಾರೆ. ಶೇಖ್ ಹಸಿನಾ ಪ್ರಸ್ತುತ ಭಾರತದಲ್ಲಿದ್ದಾರೆ, ಅವರು ಮುಂದೆ ಯಾವ ದೇಶಕ್ಕೆ ತೆರಳುತ್ತಾರೆ ಎನ್ನುವುದು ಇನ್ನು ಖಾತರಿಯಾಗಿಲ್ಲ.












Click it and Unblock the Notifications