ಭಾರತ ವಿರೋಧಿ ಮಾಲ್ಡೀವ್ಸ್ ಮಾನ ಹರಾಜು: ಪ್ರವಾಸಿಗರು ಇಲ್ಲದೆ ನಾಯಿಪಾಡು!

ಭಾರತ ಅದೆಷ್ಟು ಬಲಿಷ್ಠವಾಗಿ ಬೆಳೆಯುತ್ತಿದೆ ಅಂದ್ರೆ, ಭಾರತವನ್ನು ವಿರೋಧಿಸುವ ಯಾವುದೇ ದೇಶವಾದರೂ ಸಂಕಷ್ಟದ ಸುಳಿಗೆ ಸಿಲುಕಿ ವಿಲವಿಲ ಒದ್ದಾಡಿ ಹೋಗುತ್ತೆ. ಈಗ ಮಾಲ್ಡೀವ್ಸ್ ಮ್ಯಾಟರ್ ಕೂಡ ಹಿಂಗೆ ಆಗಿದೆ. ಭಾರತದ ವಿರೋಧ ಕಟ್ಟಿಕೊಂಡು ನರಳಾಡಿ ಹೋಗಿರುವ ಮಾಲ್ಡೀವ್ಸ್ ಮುಂದಿನ ದಿನಗಳಲ್ಲಿ, ತಿನ್ನಲು ಅನ್ನವಿಲ್ಲದೆ ಒದ್ದಾಡಿದರೂ ಆಶ್ಚರ್ಯ ಇಲ್ಲ. ಪರಿಸ್ಥಿತಿ ಹೀಗಿದ್ದಾಗಲೇ ಪ್ರವಾಸಿಗರ ಸ್ವರ್ಗ ಎಂದು ಕರೆಸಿಕೊಳ್ಳುವ ಮಾಲ್ಡೀವ್ಸ್, ಟೂರಿಸ್ಟ್ ಕ್ರೌಡ್ ಇಲ್ಲದೆಯೇ ನರಳಾಡಿ ಹೋಗಿದೆ.

ಭಾರತದ ಜೊತೆಗೆ ಮಾಲ್ಡೀವ್ಸ್ ಅಧ್ಯಕ್ಷನ ಕಿರಿಕ್ ಸರದಿ ಮುಂದುವರಿದಿದ್ದು. ಮಾಲ್ದೀವ್ಸ್ ದೇಶದ ಹೊಸ ಅಧ್ಯಕ್ಷನಾಗಿ ಮೊಹಮ್ಮದ್‌ ಮುಯಿಝ ಅಧಿಕಾರಕ್ಕೆ ಬಂದ ನಂತರ ಭಾರಿ ಕಿರಿಕ್ ಆರಂಭ ಆಗಿದೆ. ಇತ್ತೀಚೆಗೆ ದಾರಿಗೆ ಬಂದಂತೆ ನಟಿಸಿದ್ದ ಮೊಯಿಝ ಮತ್ತೆ ಹೊಸದಾಗಿ ಕಿರಿ, ಕಿರಿ ಕಿರಿಕ್ ಶುರು ಮಾಡಿದ್ದಾನೆ. ಇದಕ್ಕೆ ತಕ್ಕನಾಗಿ ಭಾರತೀಯರು ಕೂಡ ತಿರುಗೇಟು ನೀಡುತ್ತಿದ್ದಾರೆ. ಆ ಮೂಲಕ ಮಾಲ್ಡೀವ್ಸ್ ಈಗ ಪ್ರವಾಸಿಗರೇ ಇಲ್ಲದೆ ನರಳಾಡಿ ಹೋಗಿದೆ. ಪ್ರವಾಸಿಗರ ಹಣವನ್ನೇ ನಂಬಿ ಬದುಕುವ ಈ ದೇಶದಲ್ಲಿ ಮುಂದಿನ ದಿನಗಳಲ್ಲಿ ಆರ್ಥಿಕ ದಿವಾಳಿತನ ಎದುರಾದ್ರೂ ಅಚ್ಚರಿ ಏನಿಲ್ಲ ಎಂಬಂತಾಗಿದೆ.

Sharp Decline in Indian Tourists to Maldives Amidst Bilateral Issues Locals Are Suffering More

ಪ್ರವಾಸಿಗರೇ ಇಲ್ಲದೆ ಮಾಲ್ಡೀವ್ಸ್ ಖಾಲಿ!

ಕೆಲವು ತಿಂಗಳ ಹಿಂದೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಮುಯಿಝು ಚೀನಾ ಪರ ನಿಲುವನ್ನ ಹೊಂದಿದ್ದರು. ಭಾರತ ವಿರುದ್ಧ ಹಲವು ನಿರ್ಣಯ ಕೈಗೊಂಡು ಕೆಂಗಣ್ಣಿಗು ಗುರಿಯಾಗಿದ್ದರು. ಭಾರತೀಯ ಸೇನೆ ವಾಪಸ್ ಕರೆಸಿಕೊಳ್ಳಲು ಡೆಡ್‌ಲೈನ್ ಕೊಟ್ಟಿದ್ದರು ಮಾಲ್ಡೀವ್ಸ್‌ನ ಈ ಅಧ್ಯಕ್ಷ. ಇದು ಭಾರತವನ್ನು ಕೂಡ ಸಿಕ್ಕಾಪಟ್ಟೆ ಕೆರಳಿಸಿತ್ತು, ಹೀಗಾಗಿ ಎರಡೂ ದೇಶಗಳ ನಡುವಿನ ತಿಕ್ಕಾಟ ಜೋರಾಗುವ ವಾತಾವರಣ ನಿರ್ಮಾಣವಾಗಿತ್ತು.

ಹೀಗಿದ್ದಾಗಲೇ ಮಾಲ್ಡೀವ್ಸ್ ಬಾಲ ಮುದುಡಿದಂತೆ ಈಗ ಕಾಣುತ್ತಿದೆ. ಯಾಕಂದ್ರೆ ಮಾಲ್ಡೀವ್ಸ್‌ಗೆ ಹೋಗುತ್ತಿದ್ದ ಭಾರತೀಯರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕಡಿಮೆ ಆಗಿದ್ದು, ಹೀಗಾಗಿ ದ್ವೀಪ ರಾಷ್ಟ್ರ ಮಾಲ್ಡೀವ್ಸ್ ಕಳೆದ ಕೆಲವು ತಿಂಗಳಿಂದ ಸುಮಾರು ಶೇ. 30ಕ್ಕೂ ಹೆಚ್ಚು ಪ್ರಮಾಣದ ಪ್ರವಾಸಿಗರ ಕೊರತೆ ಕಾಣುತ್ತಿದೆ. 2020ರಲ್ಲಿ ಕೊರೊನಾ ಬಂದಾಗ ಕೂಡ ಇಂತಹ ಪರಿಸ್ಥಿತಿ ಎದುರಿಸಿರಲಿಲ್ಲ ಮಾಲ್ಡೀವ್ಸ್.

ಚೀನಾ ಕಾಲು ಹಿಡಿದ ಮಾಲ್ಡೀವ್ಸ್

ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ತಮ್ಮ ಜೀವನ ನಡೆಸಲು ಕೂಡ ಮಾಲ್ಡೀವ್ಸ್ ಜನರಿಗೆ ಈಗ ಕಷ್ಟವಾಗುತ್ತಿದೆ. ಹೀಗಾಗಿ ಭಾರತದ ಪ್ರವಾಸಿಗರು ಕಡಿಮೆ ಆಗುತ್ತಿರುವ ಕಾರಣಕ್ಕೆ, ಚೀನಾಗೆ ಮನವಿ ಮಾಡುತ್ತಿದೆ ಮಾಲ್ಡೀವ್ಸ್. ನಿಮ್ಮ ದೇಶದಿಂದ ಪ್ರವಾಸಿಗರನ್ನ ಕಳುಹಿಸಿಕೊಡಿ ಅಂತಾ ಈಗ ಚೀನಾ ಕಾಲು ಹಿಡಿಯುತ್ತಿದೆ ಮಾಲ್ಡೀವ್ಸ್. ಪರಿಸ್ಥಿತಿ ಹೀಗಿದ್ದರೂ ಭಾರತದ ಜೊತೆಯಲ್ಲಿ ಮಾತುಕತೆ ನಡೆಸಿ ಪರಿಸ್ಥಿತಿ ಸರಿ ಮಾಡಿಕೊಳ್ಳಲು ಮಾಲ್ಡೀವ್ಸ್ ಮುಂದಾಗುತ್ತಿಲ್ಲ. ಹೀಗಾಗಿ, ಸ್ವತಃ ಮಾಲ್ಡೀವ್ಸ್ ಪ್ರಜೆಗಳು ಕೂಡ ತಮ್ಮ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ.

Sharp Decline in Indian Tourists to Maldives Amidst Bilateral Issues Locals Are Suffering More

ಬುದ್ಧಿ ಬರುತ್ತಾ? ಬುದ್ಧಿ ಬರಲ್ವಾ?

ಒಟ್ನಲ್ಲಿ ಭಾರತ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಮಾಲ್ಡೀವ್ಸ್ ಎಂಬ ಬುದ್ಧಿ ಇಲ್ಲದೆ ದೇಶಕ್ಕೆ, ಸಾಲು ಸಾಲು ಸಂಕಷ್ಟಗಳು ಎದುರಾಗುತ್ತಿವೆ. ಇಷ್ಟಾದರೂ ಅಲ್ಲಿನ ಹೊಸ ಅಧ್ಯಕ್ಷನಿಗೆ ತಲೆಯಲ್ಲಿ ಮಣ್ಣು ತುಂಬಿದೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಜನಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ತಿಕ್ಕಾಟ ಹಿಂಗೆ ಮುಂದುವರಿದರೆ ಪರಿಸ್ಥಿತಿ ಕೈಮೀರಿ & ಎರಡೂ ದೇಶಗಳ ನಡುವಿನ ಸ್ನೇಹ ಸಂಬಂಧ ಮತ್ತಷ್ಟು ಹಾಳಾಗುವ ಆತಂಕ ಇದೆ. ಹೀಗೆ ಸ್ವತಃ ಮಾಲ್ಡೀವ್ಸ್ ಜನರಿಗೂ ತಮ್ಮ ಸರ್ಕಾರದ ಈ ವರ್ತನೆ ಬಗ್ಗೆ ಸಾಕಷ್ಟು ಸಿಟ್ಟು ಬಂದಿದೆ. ಇಷ್ಟೆಲ್ಲಾ ನಡೆದರೂ ಮಾಲ್ಡೀವ್ಸ್ ಅಧ್ಯಕ್ಷ ಮಾತ್ರ ತನ್ನ ಚೀನಾ ಪರ ನಿಲುವನ್ನು ಮುಂದುವರಿಸಿ ಭಾರತದ ಜೊತೆಗೆ ಸಂಬಂಧವನ್ನು ಮತ್ತಷ್ಟು ಹಾಳು ಮಾಡಿಕೊಳ್ಳುತ್ತಿದ್ದಾನೆ.

ಭಾರತೀಯರಿಂದ ಭರ್ಜರಿ ಶಾಕ್!

2024ರ ಜನವರಿ 1ರಿಂದ 28ರವರೆಗೆ, ಒಟ್ಟಾರೆ 1.74 ಲಕ್ಷ ಪ್ರವಾಸಿಗರು ಮಾಲ್ದೀವ್ಸ್‌ಗೆ ಪ್ರವಾಸಕ್ಕೆ ಬಂದಿದ್ದರು. ಈ ಪೈಕಿ ಭಾರತೀಯರ ಸಂಖ್ಯೆ 13,989 ಎನ್ನಲಾಗಿದೆ. ಈ ಮೂಲಕ ಮಾಲ್ಡೀವ್ಸ್‌ಗೆ ಆಘಾತ ಎದುರಾಗಿದೆ. ಮಾಲ್ದೀವ್ಸ್‌ಗೆ ಭೇಟಿ ನೀಡಿದ ಪ್ರವಾಸಿಗರಲ್ಲಿ, ರಷ್ಯಾ ಮೂಲದ ಪ್ರಜೆಗಳು 18,561 ಆಗಿದ್ದು ಮೊದಲ ಸ್ಥಾನದಲ್ಲಿದ್ದಾರೆ. ಇಟಲಿ ಮೂಲದ 18,111 ಪ್ರವಾಸಿಗರು ಮತ್ತು ಚೀನಾ ಮೂಲದವರು 16,529, ಬ್ರಿಟನ್‌ ಮೂಲದ ಒಟ್ಟು 14,588 ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಈ ನಡುವೆ ಭಾರತ ಮೂಲದ ಪ್ರವಾಸಿಗರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿತ ಕಾಣುತ್ತಿದ್ದು, ಮಾಲ್ಡೀವ್ಸ್ ಪ್ರವಾಸೋದ್ಯಮ ಈ ಕಾರಣಕ್ಕೆ ನಲುಗಿ ಹೋಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+