ಬ್ರುಸೆಲ್ಸ್ ಅವಳಿ ಸ್ಫೋಟ, ಸಹಾಯವಾಣಿ ಸಂಖ್ಯೆಗಳು ಇಲ್ಲಿವೆ

Posted By:
Subscribe to Oneindia Kannada

ಬ್ರುಸೆಲ್ಸ್, ಮಾರ್ಚ್ 22: ಬೆಲ್ಜಿಯಂನ ರಾಜಧಾನಿ ಬ್ರುಸೆಲ್ಸ್ ನ ವಿಮಾನ ನಿಲ್ದಾಣದಲ್ಲಿ ಮಂಗಳವಾರ (ಮಾರ್ಚ್ 22) ಅವಳಿ ಸ್ಫೋಟ ಸಂಭವಿಸಿದೆ. ಈ ದುರಂತದಲ್ಲಿ ಸುಮಾರು 26ಕ್ಕೂ ಅಧಿಕ ಜನ ಮೃತಪಟ್ಟಿಮೃತಪಟ್ಟಿದ್ದು, 136ಜನ ಗಾಯಗೊಂಡಿದ್ದಾರೆ. ಎಲ್ಲಾ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, ನಿಲ್ದಾಣ ಸಂಪೂರ್ಣ ಬಂದ್ ಆಗಿದೆ.

ಬ್ರುಸೆಲ್ಸ್ ನ ವಿಮಾನ ನಿಲ್ದಾಣ ಝವೆಟೆಂನ ಎರಡು ಕಡೆಗಳಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೂ ಕೆಲ ನಿಮಿಷಗಳ ಮುನ್ನ ಅರೇಬಿಕ್ ಭಾಷೆಯಲ್ಲಿ ಘೋಷಣೆಗಳು ಕೇಳಿ ಬಂದಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಬೆಲ್ಜಿಯಂ ಪ್ರಧಾನಿ ಚಾರ್ಲ್ಸ್ ಅವರ ಹೇಳಿಕೆ:

* ಮುಂಬೈನಿಂದ ಬ್ರುಸೆಲ್ಸ್ ಗೆ ತೆರಳುವ ಎಲ್ಲಾ ವಿಮಾನಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.
* ಬ್ರುಸೆಲ್ಸ್ ವಿಮಾನ ನಿಲ್ದಾಣದಲ್ಲಿ ಎಲ್ಲಾ ಚಟುವಟಿಕೆಗಳು ಮಾರ್ಚ್ 23 ರ ಬೆಳಗ್ಗೆ 6 ಗಂಟೆ ತನಕ ಸ್ಥಗಿತಗೊಂಡಿದೆ.

Several killed as twin blasts rock Brussels airport

* ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ ಅವರು ಆತ್ಮಾಹುತಿ ದಾಳಿಯನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ.

* ಬ್ರುಸೆಲ್ಸ್ ನ ಮೆಟ್ರೋ ಸ್ಟೇಷನ್ಸ್ ಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಸ್ಥಳೀಯ ಸುದ್ದಿ ಸಂಸ್ಥೆ ಪ್ರಕಾರ ಮೊದಲೆರಡು ಸ್ಫೋಟದಿಂದ 13 ಜನ ಸಾವನ್ನಪ್ಪಿದ್ದು, 35ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಗಾಯಗೊಂಡವರಲ್ಲಿ ಓರ್ವ ಭಾರತೀಯ ಸೇರಿದ್ದಾನೆ.

ಬೆಲ್ಜಿಯಂನಲ್ಲಿರುವ ಭಾರತೀಯರು ಈ ಸಂಖ್ಯೆಯನ್ನು ಸಂಪರ್ಕಿಸಬಹುದು:
+32-26451850 (PABX) & +32-476748575 (mobile) ಎಂದು ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ.

Several killed as twin blasts rock Brussels airport

ಜೆಟ್ ಏರ್ ವೇಸ್ ಸಿಬ್ಬಂದಿ ಒಬ್ಬರಿಗೆ ಈ ಘಟನೆಯಲ್ಲಿ ತೀವ್ರಗಾಯಗಳಾಗಿವೆ: ಏರ್ ವೇಸ್ ನೀಡಿರುವ ಸಹಾಯವಾಣಿ
ಭಾರತಕ್ಕೆ 1800225522;
ಯುಎಸ್ಎ: 1-877-8359538;
ಯುಕೆ : 08081011199

ಬ್ರುಸೆಲ್ಸ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಸಂಖ್ಯೆಗಳು:


ಸುಮಾರು 25ಕ್ಕೂ ಅಧಿಕ ಜನರಿಗೆ ಗಾಯಗಳಾಗಿದ್ದು, ವಿಮಾನ ನಿಲ್ದಾಣದಿಂದ ಸಾಗಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಮಾರು 130ಕ್ಕೂ ಅಧಿಕ ಜನರ ಸಾವಿಗೆ ಕಾರಣವಾದ ಪ್ಯಾರೀಸ್ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬ್ರುಸೆಲ್ಸ್ ನಲ್ಲಿ ಶಂಕಿತನೊಬ್ಬನನ್ನು ಬಂಧಿಸಲಾಗಿತ್ತು.

ಇದಾದ ನಾಲ್ಕು ದಿನಗಳ ಬಳಿಕ್ ಈ ಸ್ಫೋಟವಾಗಿರುವುದು ಹಲವಾರು ಅನುಮಾನಕ್ಕೆ ಕಾರಣವಾಗಿದೆ.

ಸುದ್ದಿ ಬಗ್ಗೆ ವಿಡಿಯೋ:

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Several killed as twin blasts rock Brussels airport. The blasts occurred four days after the arrest in Brussels of a suspected participant in November militant attacks in Paris that killed 130 people
Please Wait while comments are loading...