ನೇಪಾಳದಲ್ಲಿ ಹೆಲಿಕಾಪ್ಟರ್ ಪತನ, ನವಜಾತ ಶಿಶು ಸೇರಿ 7 ಜನ ದುರ್ಮರಣ

Posted By:
Subscribe to Oneindia Kannada

ಕಠ್ಮಂಡು, ಆಗಸ್ಟ್ 08: ನುವಾಕೋಟ್ ಜಿಲ್ಲೆಯಿಂದ ಕಠ್ಮಂಡುವಿಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಸೋಮವಾರ ಮಾರ್ಗಮಧ್ಯದಲ್ಲಿ ಪತನಗೊಂಡಿದೆ. ನವಜಾತ ಶಿಶು ಸೇರಿದಂತೆ ಏಳು ಮಂದಿ ದುರ್ಮರಣಕ್ಕೀಡಾಗಿದ್ದಾರೆ.

ನೇಪಾಳದ ಕೇಂದ್ರ ಭಾಗದಲ್ಲಿ ಸಂಭವಿಸಿದ ಈ ದುರಂತದ ಅವಶೇಷಗಳಿಗಾಗಿ ಹುಡುಕಾಟ ಜಾರಿಯಲ್ಲಿದ್ದು, ವಿಮಾನ ಸಿಬ್ಬಂದಿ ಸೇರಿದಂತೆ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

ನವಜಾತ ಶಿಶುವಿನ ಚಿಕಿತ್ಸೆಗಾಗಿ ಕಠ್ಮಂಡುವಿಗೆ ತೆರಳುತ್ತಿದ್ದ ದಂಪತಿ ಸಾವಿಗೀಡಾಗಿದ್ದಾರೆ ಎಂದು ಹೆಲಿಕಾಪ್ಟರ್​ನ ಮಾಲೀಕತ್ವ ಹೊಂದಿರುವ ಫಿಶ್ ಟೈಲ್ ಏರ್ ಪ್ರಕಟಿಸಿದೆ. ಆದರೆ, ಇದಕ್ಕೂ ಮೊದಲು ಪ್ರಯಾಣಿಕರ ಪೈಕಿ ಗರ್ಭಿಣಿಯೊಬ್ಬರು ಇದ್ದಾರೆ, ನವಜಾತ ಶಿಶು ಇಲ್ಲ ಎನ್ನಲಾಗಿತ್ತು.

Seven killed in helicopter crash in Central Nepal

ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರದ ವಕ್ತಾರ ದೇವೇಂದ್ರ ಕೆ.ಸಿ ಪ್ರಕಾರ ಸೋಮವಾರ ಮಧ್ಯಾಹ್ನ 1 ಗಂಟೆಗೆ ಹೆಲಿಕಾಪ್ಟರ್​ನ ಸಂಪರ್ಕ ಕಡಿತಗೊಂಡಿತ್ತು. ಮಾರ್ಗಮಧ್ಯದಲ್ಲಿ ಕಾಡಿನಲ್ಲಿ ಹೊಗೆ ಕಾಣಿಸಿಕೊಂಡಿದ್ದನ್ನು ಗ್ರಾಮಸ್ಥರು ಕಂಡು ವಿಷಯ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಸಾಗಿದೆ.
ಇತ್ತೀಚೆಗೆ ಕಾರ್ಗೋ ವಿಮಾನವೊಂದು ಪರ್ವತಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿತ್ತು. ಹಿಮಾಲಯದ ನಾಡು ನೇಪಾಳದಲ್ಲಿ ಪ್ರತಿಕೂಲ ಹವಾಮಾನದ ಕಾರಣ ಹೆಲಿಕಾಪ್ಟರ್ ಗಳು ಅಪಘಾತಕ್ಕೀಡಾಗುವುದು ಸಾಮಾನ್ಯ ಸಂಗತಿಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A helicopter has crashed in central Nepal, killing all seven people on board, including a mother and her newborn baby.
Please Wait while comments are loading...