Donald Trump: ಅಮೆರಿಕ ನೆಲದಲ್ಲಿ ಭಾರಿ ಭದ್ರತೆ, ಟ್ರಂಪ್ ಎಂಟ್ರಿಗೆ ಕ್ಷಣಗಣನೆ!
ಡೊನಾಲ್ಡ್ ಟ್ರಂಪ್... ಈ ಹೆಸರು ಕೇಳಿದ ತಕ್ಷಣ ಕೆಲವರು ಭಾವೋದ್ವೇಗಕ್ಕೆ ಒಳಗಾಗುತ್ತಾರೆ & ಇನ್ನೂ ಕೆಲವರು ಚರ್ಚೆ ಮಾಡಲು ಶುರು ಮಾಡುತ್ತಾರೆ. ಅದೆಲ್ಲಾ ಏನೇ ಇರಲಿ, ಟ್ರಂಪ್ ಅವರು ಜಗತ್ತಿನ ಅತ್ಯಂತ ಫೇಮಸ್ ರಾಜಕಾರಣಿ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ. ಯಾಕಂದ್ರೆ, ಕಮಲಾ ಹ್ಯಾರಿಸ್ ವಿರುದ್ಧ ಡೊನಾಲ್ಡ್ ಟ್ರಂಪ್ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಯುದ್ಧ ಗೆದ್ದು ಬೀಗಿದ್ದಾರೆ.
ಹೌದು, ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆದಿದ್ದು 2024ರ ನವೆಂಬರ್ ತಿಂಗಳಲ್ಲಿ. ಈ ರೀತಿ ಚುನಾವಣೆ ನಡೆದ ತಕ್ಷಣ ರಿಸಲ್ಟ್ ಬಂದಿದ್ದರೂ, ಡೊನಾಲ್ಡ್ ಟ್ರಂಪ್ ಅವರಿಗೆ ಯಾಕೆ ಇನ್ನೂ ಅಧಿಕಾರ ಸಿಕ್ಕಿಲ್ಲ? ಅನ್ನೋ ಪ್ರಶ್ನೆ ನಿಮ್ಮನ್ನು ಕಾಡ್ತಿದೆಯಾ, ನಿಮ್ಮ ಪ್ರಶ್ನೆಗೆ ಸಂಪೂರ್ಣ ಉತ್ತರ ಇಲ್ಲಿ ಹುಡುಕೋಣ. ಹಾಗೇ ಅಮೆರಿಕ ಅಧ್ಯಕ್ಷೀಯ ಚುನಾವಣೆ & ಅಧಿಕಾರ ಸ್ವೀಕಾರಕ್ಕೆ ಇರುವ ಸಂಪ್ರದಾಯದ ಬಗ್ಗೆ ಕೂಡ ಮಾಹಿತಿ ಪಡೆಯೋಣ!

ಜನವರಿ 20ರ ಸೋಮವಾರ ಟ್ರಂಪ್...
2024ರ ನವೆಂಬರ್ ತಿಂಗಳಲ್ಲಿ ನಡೆದಿದ್ದ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರು ಗೆದ್ದು ಬೀಗಿದ್ದು ಆಗಿದೆ. ಹಾಗೇ ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ಸ್ವೀಕಾರ ಮಾಡಲು ಕೌಂಟ್‌ಡೌನ್ ಶುರುವಾಗಿದೆ. ಹಾಗಾದ್ರೆ, ಯಾಕಿಷ್ಟು ಲೇಟ್? ಅನ್ನೋ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ, ಅಮೆರಿಕದ ಚುನಾವಣೆ ಸಂಪ್ರದಾಯವೇ ಈ ರೀತಿಯಾಗಿ ಇದ್ದು. ಶತಮಾನಗಳಿಂದಲೂ ಇದೇ ರೀತಿ ನಡೆದುಕೊಂಡು ಬಂದಿದೆ. ಇದಕ್ಕೆ ಪ್ರಮುಖ ಕಾರಣ ಅಂದ್ರೆ....
ಅಮೆರಿಕದಲ್ಲಿ ಫುಲ್ ಅಲರ್ಟ್!
ಅಮೆರಿಕದಲ್ಲಿ ಚುನಾವಣೆ ನಡೆದು ಹೊಸ ಅಧ್ಯಕ್ಷರು ಆಯ್ಕೆಯಾದ ನಂತರ, ಕ್ರಿಸ್‌ಮಸ್ & ಹೊಸ ವರ್ಷದ ಸುದೀರ್ಘ ರಜೆ ಮುಗಿಸಿ, ಹೊಸ ಅಧ್ಯಕ್ಷರು ಅಧಿಕಾರ ಸ್ವೀಕಾರ ಮಾಡುತ್ತಾರೆ. ಇದೀಗ ಜನವರಿ 20ರ ಸೋಮವಾರ ಟ್ರಂಪ್ ಅಧಿಕಾರ ಸ್ವೀಕಾರಕ್ಕೆ ಸಕಲ ಸಿದ್ಧತೆ ಸಾಗಿದೆ.
ಈ ಮೂಲಕ ಹೊಸ ವರ್ಷಕ್ಕೆ ಹೊಸ ಅಧ್ಯಕ್ಷರ ಆಗಮನ ಆಗುತ್ತಿದ್ದು, ಅಮೆರಿದಲ್ಲಿ ಈಗ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಇತ್ತೀಚೆಗೆ ಹೊಸ ವರ್ಷಾಚರಣೆ ಸಮಯದಲ್ಲಿ ಹಲವಾರು ದುರಂತಗಳು ನಡೆದಿದ್ದು, ಉಗ್ರರ ದಾಳಿ ಭಯ ಕಾಡುತ್ತಿದೆ ಎಂದು ಆರೋಪಿಸಲಾಗಿದೆ. ಈ ಎಲ್ಲಾ ಕಾರಣಕ್ಕೆ ಭದ್ರತೆ ಹೆಚ್ಚಿಸಲಾಗಿದೆ. ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕಾರ ಸಮಾರಂಭ ಮುಗಿಯುತ್ತಿದ್ದಂತೆ ರಷ್ಯಾ & ಉಕ್ರೇನ್ ಯುದ್ಧ ನಿಲ್ಲುವ ನಿರೀಕ್ಷೆಯು ದಟ್ಟವಾಗಿದೆ.












Click it and Unblock the Notifications