ಪ್ರಧಾನಿ ಮೋದಿ-ಇಮ್ರಾನ್ ಖಾನ್ ಎದುರೆದುರು ಬಂದರೂ ಮಾತಿಲ್ಲ ಕತೆ ಇಲ್ಲ!

ಬಿಷ್ಕೆಕ್, ಜೂನ್ 14: ಶಾಂಘೈ ಸಹಕಾರ ಸಂಘದ (ಎಸ್‌ಸಿಒ) ಶೃಂಗ ಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಮುಖಾಮುಖಿಯಾದರೂ ಉಭಯಕುಶಲೋಪರಿಯನ್ನೂ ವಿನಿಮಯ ಮಾಡಿಕೊಳ್ಳದೆ ಘಟನೆ ಗುರುವಾರ ನಡೆಯಿತು.

ಕಿರ್ಗಿಸ್ತಾನದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘದ ಸಭೆಯ ಮೊದಲ ದಇನವಾದ ಗುರುವಾರ ಗಣ್ಯರಿಗೆಂದು ಏರ್ಪಡಿಸಿದ್ದ ಔತಣ ಕೂಟಕ್ಕೆ ನರೇಂದ್ರ ಮೋದಿ ಮತ್ತು ಇಮ್ರಾನ್ ಖಾನ್ ಒಂದೇ ಸಮಯದಲ್ಲಿ ಆಗಮಿಸಿದರಾರೂ ಉಭಯ ನಾಯಕರ ನಡುವೆ ಯಾವುದೇ ಮಾತುಕತೆ ನಡೆಯಲಿಲ್ಲ.

ಅಲ್ಲಿ ನೆರೆದಿದ್ದ ಎಲ್ಲ ದೇಶದ ನಾಯಕರೊಂದಿಗೂ ಹಸ್ತಲಾಘವ ಮಾಡಿದರೂ ಮೋದಿ ಮತ್ತು ಖಾನ್ ಪರಸ್ಪರ ಹಸ್ತಲಾಘವ ಮಾಡಿಕೊಳ್ಳಲಿಲ್ಲ.

SCO summit: No pleasantries exchanged between PM Modi and Imran Khan

ಗುರುವಾರ ಚೀನಾ ಅಧ್ಯಕ್ಷ ಕ್ಸೈ ಜಿಂಪಿಂಗ್ ಅವರೊಂದಿಗೆ ನರೇಂದ್ರ ಮೋದಿ ಮಾತುಕತೆ ನಡೆಸಿದ್ದರು. ಪಾಕಿಸ್ತಾನ ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವವರೆಗೂ ಆ ದೇಶದೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂದರು.

ಫೆಬ್ರವರಿ 14 ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ನಲವತ್ತಕ್ಕೂ ಹೆಚ್ಚು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಈ ಘಟನೆಯಲ್ಲಿ ಪಾಕಿಸ್ತಾನ ಮೂಲದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡವಿದೆ ಎಂಬುದು ಸಾಬೀತಾಗಿತ್ತು. ಆ ನಂತರ ಇಡೀ ವಿಶ್ವವೂ ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಒತ್ತಾಯಿಸಿತ್ತು. ಆದರೂ ಉಗ್ರದಮನದ ವಿರುದ್ಧ ಪಾಕಿಸ್ತಾನ ತೆಗೆದುಕೊಳ್ಳುತ್ತಿರುವ ಕ್ರಮ ತೃಪ್ತಿದಾಯಕವಾಗಿಲ್ಲದ ಕಾರಣ ಭಾರತ-ಪಾಕಿಸ್ತಾನದ ನಡುವಿನ ಸಂಬಂಧ ಇಂದಿಗೂ ಬಿಗಡಾಯಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+