ಶಾಂಘೈ ಸಹಕಾರ ಒಕ್ಕೂಟದಲ್ಲಿ ಭಾರತ-ಪಾಕ್ ಗಡಿ ವಿವಾದ ಸೊಲ್ಲಿಲ್ಲ
ಭಾರತ ಮತ್ತು ಪಾಕಿಸ್ತಾನಗಳು, ಶಾಂಘೈ ಸಹಕಾರ ಒಕ್ಕೂಟದಲ್ಲಿ (ಎಸ್ ಸಿಒ) ತಮ್ಮ ನಡುವಿನ ಗಡಿ ಸಮಸ್ಯೆಗಳ ಬಗ್ಗೆ ಚಕಾರ ಎತ್ತಕೂಡದೆಂದು ಚೀನಾ, ಎರಡೂ ದೇಶಗಳಿಗೆ ತಾಕೀತು ಮಾಡಿದೆ.
ಬೀಜಿಂಗ್, ಜೂನ್ 15: ಇತ್ತೀಚೆಗಷ್ಟೇ ಶಾಂಘೈ ಸಹಕಾರ ಒಕ್ಕೂಟದಲ್ಲಿ (ಎಸ್ ಸಿಒ) ಭಾರತ ಅಥವಾ ಪಾಕಿಸ್ತಾನಗಳು ತಮ್ಮ ನಡುವಿನ ಗಡಿ ವಿವಾದದ ಬಗ್ಗ ಚಕಾರ ಎತ್ತುವಂತಿಲ್ಲ ಎಂದು ಚೀನಾ, ಭಾರತ ಹಾಗೂ ಪಾಕಿಸ್ತಾನಕ್ಕೆ ಸೂಚನೆ ನೀಡಿದೆ.
ಶಾಂಘೈ ಸಹಕಾರ ಒಕ್ಕೂಟದಲ್ಲಿ ಭಾರತ ಹಾಗೂ ಪಾಕಿಸ್ತಾನ ಈವರೆಗೆ ಪರಿವೀಕ್ಷಕರಾಗಿ ಕಾರ್ಯ ನಿರ್ವಹಿಸಿದ್ದವು. ಚೀನಾ, ಸ್ಥಾಪಕ ಸದಸ್ಯ ರಾಷ್ಟ್ರವಾಗಿತ್ತು. ಇತ್ತೀಚೆಗೆ ನಡೆದ ಎಸ್ ಸಿಒ ಮಹಾ ಸಭೆಯಲ್ಲಿ ಭಾರತ ಮತ್ತು ಪಾಕಿಸ್ತಾನಗಳಿಗೆ ಈ ಒಕ್ಕೂಟದಲ್ಲಿ ಶಾಶ್ವತ ಸದಸ್ಯಸ್ವ ಸಿಕ್ಕಿದೆ.

ಇದಕ್ಕೆ ಕಾರಣ ಚೀನಾ. ಆ ದೇಶದ ಸಹಕಾರದಿಂದಲೇ ಈ ಎರಡೂ ದೇಶಗಳಿಗೆ ಸದಸ್ಯತ್ವ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ, ಚೀನಾ ಈಗ ಭಾರತ, ಪಾಕಿಸ್ತಾನಗಳ ಮೇಲೆ ತನ್ನ ಆಲೋಚನೆಗಳನ್ನು ಹೇರಲು ಹೊರಟಿದೆ ಎಂದರೆ ತಪ್ಪಾಗಲಾರದು.












Click it and Unblock the Notifications