• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಜೀವಿಗೆ ಸಾವು ಬರೋದೆ ಇಲ್ವಂತೆ..! ರಷ್ಯಾದಲ್ಲಿ 24 ಸಾವಿರ ವರ್ಷ ಬದುಕಿದ್ದ ಜೀವಿ ಪತ್ತೆ..!

|
Google Oneindia Kannada News

ಆಮೆಗಳು ನೂರಾರು ವರ್ಷ ಬದುಕಬಲ್ಲವು, ಆನೆಗಳಿಗೂ ಶತಮಾನ ಮೀರಿಸುವ ಆಯಸ್ಸು ಇದೆ. ಹೀಗೆ ಲೆಕ್ಕ ಹಾಕುತ್ತಾ ಹೋದ್ರೆ ಭೂಮಿ ಮೇಲೆ ಹೆಚ್ಚೆಂದರೆ ಸಾವಿರ ವರ್ಷ ಬದುಕಿದ್ದ, ಬದುಕಬಹುದಾದ ಜೀವಿಗಳ ಪಟ್ಟಿ ಸಿಗುತ್ತದೆ.

ಆದರೆ ಎಂದಾದರೂ 24 ಸಾವಿರ ವರ್ಷ ಬದುಕಿದ್ದ ಗಟ್ಟಿಪಿಂಡದ ಬಗ್ಗೆ ಕೇಳಿದ್ದೀರಾ? ಇಲ್ಲ ಅಲ್ವಾ? ಹಾಗಾದ್ರೆ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್. ಉತ್ತರ ಧ್ರುವದ ಬುಡದಲ್ಲಿರುವ ರಷ್ಯಾ ಉತ್ತರ ಭಾಗದಲ್ಲಿ 24 ಸಾವಿರ ವರ್ಷಗಳಿಂದಲೂ ಜೀವಂತವಾಗಿದ್ದ ಸೂಕ್ಷ್ಮಜೀವಿ ಪತ್ತೆ ಮಾಡಿದ್ದಾರೆ ವಿಜ್ಞಾನಿಗಳು. 'ಡೆಲಾಯ್ಡ್ ರೋಟಿಫರ್' ಎಂದು ಕರೆಯಲಾಗುವ ಪ್ರಾಚೀನ ಕಾಲದ ಸೂಕ್ಷ್ಮ ಜೀವಿ ನಮ್ಮ ನಡುವೆ ಬದುಕಿದೆ.

ಈಗಲೂ ಜಗತ್ತಿನ ವಿವಿಧೆಡೆ ಸಿಹಿನೀರಿನ ಆಸುಪಾಸು ಕಂಡುಬರುವ ಬಹುಕೋಶೀಯ ಜೀವಿ ಡೆಲಾಯ್ಡ್ ರೋಟಿಫರ್. ಸೂಕ್ಷ್ಮ ಜೀವಿಗಳಲ್ಲೇ ಡೆಲಾಯ್ಡ್ ರೋಟಿಫರ್ ತುಂಬಾ ಡಿಫರೆಂಟ್, ಇದು -20 ಡಿಗ್ರಿ ಸೆಲ್ಸಿಯಸ್‌ನಲ್ಲಿಯೂ 10 ವರ್ಷ ಬದುಕಬಹುದು ಎಂದು ಈ ಮೊದಲು ತಿಳಿಯಲಾಗಿತ್ತು.

ಆದರೆ ವಿಜ್ಞಾನಿಗಳಿಗೆ ಶಾಕ್ ಆಗುವಂತೆ ರಷ್ಯಾದ ಉತ್ತರ ಭಾಗದಲ್ಲಿ ಹೆಪ್ಪುಗಟ್ಟಿದ ನದಿ ದಡದಲ್ಲಿ ಸುಮಾರು 24 ಸಾವಿರ ವರ್ಷಗಳಿಂದಲೂ ಬದುಕಿದ್ದ ಸೂಕ್ಷ್ಮಜೀವಿ ಡೆಲಾಯ್ಡ್ ರೋಟಿಫರ್ ಪತ್ತೆಯಾಗಿದೆ.

ಸೂಕ್ಷ್ಮಜೀವಿ ಡೆಲಾಯ್ಡ್

ಸೂಕ್ಷ್ಮಜೀವಿ ಡೆಲಾಯ್ಡ್

ರಷ್ಯಾದ ಯಕುಟಿಯಾ ಪ್ರಾಂತ್ಯದ ನದಿ ದಡದಲ್ಲಿ 3.5 ಮೀಟರ್ ಆಳದಲ್ಲಿ ಮಣ್ಣುತೆಗೆದು ಸಂಶೋಧಿಸುವಾಗ ಸೂಕ್ಷ್ಮಜೀವಿ ಡೆಲಾಯ್ಡ್ ರೋಟಿಫರ್ ಪತ್ತೆಯಾಗಿತ್ತು. ಕೂಡಲೇ ಮಣ್ಣನ್ನ ಲ್ಯಾಬ್‌ಗೆ ತಂದು ಪರಿಶೀಲಿಸಿದಾಗ ವಿಜ್ಞಾನಿಗಳಿಗೆ ಶಾಕ್ ಆಗಿತ್ತು. ಸುಮಾರು 23,960 ರಿಂದ 24,485 ವರ್ಷಗಳಷ್ಟು ವಯಸ್ಸಾಗಿದ್ದ ಡೆಲಾಯ್ಡ್ ರೋಟಿಫರ್ ಅದೇ ಮಣ್ಣಿನಲ್ಲಿ ಪತ್ತೆಯಾಗಿದೆ. ಬಹುಕೋಶೀಯ ಸೂಕ್ಷ್ಮಜೀವಿ ಜೀವಕೋಶಗಳ ಅಧ್ಯಯನದ ಬಳಿಕ ಇದರ ಆಯಸ್ಸು 24 ಸಾವಿರ ವರ್ಷಕ್ಕಿಂತ ಹೆಚ್ಚು ಎಂಬುದು ತಿಳಿದುಬಂದಿದೆ. ತಕ್ಷಣ ಮತ್ತಷ್ಟು ವಿವರ ಪಡೆಯಲು ಸುತ್ತಮುತ್ತಲ ನದಿ ದಡಗಳಲ್ಲಿ ಅಧ್ಯಯನಕ್ಕೆ ಮುಂದಾಗಿದ್ದಾರೆ ವಿಜ್ಞಾನಿಗಳು.

ಅರಣ್ಯಪ್ರದೇಶ ಭಸ್ಮವಾಗುತ್ತಿದೆ

ಅರಣ್ಯಪ್ರದೇಶ ಭಸ್ಮವಾಗುತ್ತಿದೆ

ಧ್ರುವ ಪ್ರದೇಶದ ತಪ್ಪಲು ಹಾಗೂ ಜಗತ್ತಿನಲ್ಲೇ ಅತ್ಯಂತ ತಂಪಾದ ಪ್ರದೇಶದಲ್ಲಿ ಕಾಡ್ಗಿಚ್ಚು ಹಬ್ಬುತ್ತಿದೆ. ರಷ್ಯಾದ ಸೈಬೀರಿಯಾ ಪ್ರಾಂತ್ಯದಲ್ಲಿ ಅರಣ್ಯಪ್ರದೇಶ ಭಸ್ಮವಾಗುತ್ತಿದೆ. ಜಗತ್ತಿಗೆ ಶೇ. 10ರಷ್ಟು ಆಕ್ಸಿಜೆನ್ ಪೂರೈಸುತ್ತಿರುವ ರಷ್ಯಾದ ಕಾಡುಗಳು ಹೊತ್ತಿ ಉರಿಯುತ್ತಿವೆ. ಗ್ಲೋಬಲ್ ವಾರ್ಮಿಂಗ್‌ ವ್ಯತಿರಿಕ್ತ ಪರಿಣಾಮ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಭೂಮಿಯ ಮೇಲೆ ವಾತಾವರಣ ಬದಲಾವಣೆ ಸಾಕಷ್ಟು ಸಮಸ್ಯೆ ಉಂಟುಮಾಡುತ್ತಿದ್ದು, ಇದರ ಭಾಗವಾಗಿ ತಂಪಾದ ಪ್ರದೇಶದಲ್ಲೂ ಬೆಂಕಿ ಧಗಧಗಿಸುತ್ತಿದೆ. ಇದೇ ಕಾರಣಕ್ಕೆ ತಾಪಮಾನ ಹೆಚ್ಚಾಗಿ, ರಷ್ಯಾದಲ್ಲಿ ಹಿಮ ಕರಗುತ್ತಿದೆ. ಇದೇ ಕಾರಣಕ್ಕೆ ಇಷ್ಟು ದಿನ ಹಿಮದಲ್ಲಿ ಮುಚ್ಚಿ ಹೋಗಿದ್ದ ಜೀವಿಗಳು ಕೂಡ ಮರು ಜೀವ ಪಡೆಯುತ್ತಿವೆ. ಡೆಲಾಯ್ಡ್ ರೋಟಿಫರ್ ಕೂಡ ಅದೇ ರೀತಿ ಮರುಜೀವ ಪಡೆದಿದೆ ಎನ್ನಲಾಗಿದೆ.

ಸೈಬೀರಿಯಾ ರಷ್ಯಾದ ಪ್ರಮುಖ ಪ್ರಾಂತ್ಯ

ಸೈಬೀರಿಯಾ ರಷ್ಯಾದ ಪ್ರಮುಖ ಪ್ರಾಂತ್ಯ

ಸೈಬೀರಿಯಾ ರಷ್ಯಾದ ಪ್ರಮುಖ ಪ್ರಾಂತ್ಯಗಳಲ್ಲಿ ಒಂದು. ಸೈಬೀರಿಯಾ ಉತ್ತರ ಧ್ರುವ ಪ್ರದೇಶದಿಂದ ಕೇವಲ 6 ಸಾವಿರ ಕಿಲೋಮೀಟರ್ ದೂರದಲ್ಲಿದೆ. ಈಗ ನೀವೆ ಊಹಿಸಿ, ಇಲ್ಲಿ ಚಳಿಯ ಪ್ರಮಾಣ ಹೇಗಿರಬಹುದು ಎಂಬುದನ್ನ. ಇಲ್ಲಿ ವರ್ಷವೆಲ್ಲಾ ಚಳಿಯೇ ಆವರಿಸಿರುತ್ತದೆ. ಅದೆಷ್ಟರಮಟ್ಟಿಗೆ ಎಂದರೆ ಬೇಸಿಗೆ ಬಂದರು ಕೂಡ ಉಷ್ಣಾಂಶ 15 ಡಿಗ್ರಿ ಮೀರುವುದಿಲ್ಲ. ಹಾಗಾದರೆ ಚಳಿಗಾಲವನ್ನು ನೀವೇ ಊಹೆ ಮಾಡಿಕೊಳ್ಳಿ. ಉದಾಹರಣೆಗೆ 1884ರಲ್ಲಿ ದಾಖಲಾಗಿದ್ದ 7.8 ಡಿಗ್ರಿ ಉಷ್ಣಾಂಶ ರಾಜ್ಯ ರಾಜಧಾನಿಯ ಇತಿಹಾಸದಲ್ಲಿ ಅಂತ್ಯಂತ ಕನಿಷ್ಠವಾಗಿದೆ. ಇಷ್ಟು ಚಳಿಗೆ ಇಡೀ ಬೆಂಗಳೂರು ನಡುಗಿ ಹೋಗಿತ್ತು. ಹಾಗೆ ನೋಡಿದರೆ ಸೈಬೀರಿಯಾ ಪ್ರಾಂತ್ಯದಲ್ಲಿ ಇದು ಮಾಮೂಲಿ ತಾಪಮಾನ, ಅಲ್ಲಿ ಬೇಸಿಗೆಯಲ್ಲೂ ಕನಿಷ್ಠವೇ ತಾಪಮಾನ ಇರುತ್ತದೆ. ಹೀಗಾಗಿ ಅಲ್ಲಿನ ಭೂಮಿ ಸದಾ ತೇವದಿಂದ ಕೂಡಿರುತ್ತದೆ.

ಆಕ್ಸಿಜೆನ್ ಪೂರೈಕೆ

ಆಕ್ಸಿಜೆನ್ ಪೂರೈಕೆ

ಜಗತ್ತಿಗೆ ಶೇಕಡ 10ರಷ್ಟು ಆಕ್ಸಿಜೆನ್ ಪೂರೈಕೆ ಆಗುತ್ತಿರುವುದು ರಷ್ಯಾದ ಕಾಡುಗಳಿಂದ. ಅದರಲ್ಲೂ ರಷ್ಯಾದ ಅರಣ್ಯ ಸಂಪತ್ತು ಬಹುಪಾಲು ಅವಲಂಬಿಸಿರುವುದು ಸೈಬೀರಿಯಾ ಮೇಲೆ. ಆದರೆ ಗ್ಲೋಬಲ್ ವಾರ್ಮಿಂಗ್‌ನ ವ್ಯತಿರಿಕ್ತ ಪರಿಣಾಮ ಹೆಚ್ಚಾಗುತ್ತಿದೆ. ಸೈಬೀರಿಯಾದಲ್ಲಿ ಪದೇ ಪದೆ ಕಾಡ್ಗಿಚ್ಚು ಹೊತ್ತಿಕೊಳ್ಳುತ್ತಿದ್ದು, ಮೈನಸ್ 20 ಡಿಗ್ರಿ ವಾತಾವರಣದಲ್ಲೂ ಕಾಡುಗಳು ಹೊತ್ತಿ ಉರಿಯುತ್ತಿವೆ. ಕಾಡ್ಗಿಚ್ಚಿನ ಪರಿಣಾಮ ಊಹೆಗೂ ನಿಲುಕದಷ್ಟು ಕಾರ್ಬನ್ ಡೈಆಕ್ಸೈಡ್ ಹಾಗೂ ಕಾರ್ಬನ್ ಮೊನಾಕ್ಸೈಡ್ ವಾತಾವರಣ ಸೇರುತ್ತಿದೆ. ನೂರಾರು ಮೆಗಾಟನ್ ಕಾರ್ಬನ್ ಸೈಬೀರಿಯಾ ಕಾಡ್ಗಿಚ್ಚಿನಿಂದ ವಾತಾವರಣ ಸೇರುತ್ತಿದೆ.

  Rohini Sindhuri ಪರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಕೂಗು | Oneindia Kannada
  ರಷ್ಯಾದ ಸೈಬೀರಿಯಾ ಭಾಗ

  ರಷ್ಯಾದ ಸೈಬೀರಿಯಾ ಭಾಗ

  ಹೌದು ಇದು ಕಷ್ಟವೆನಿಸಿದರೂ ಸತ್ಯ. ರಷ್ಯಾದ ಸೈಬೀರಿಯಾ ಭಾಗ ಉತ್ತರ ಧ್ರುವ ಪ್ರದೇಶಕ್ಕೆ ಸಮೀಪದಲ್ಲೇ ಇದ್ದು, ತುಂಬಾ ದೊಡ್ಡದಾದ ಪ್ರಾಂತ್ಯವಾಗಿದೆ. ಇಲ್ಲಿನ ಜನರು ಚಳಿಯ ಅಬ್ಬರಕ್ಕೆ ರೋಸಿ ಹೋಗಿದ್ದಾರೆ. ಈ ನಡುವೆ ಕೆಲವು ದಶಕಗಳಿಂದ ಸೈಬೀರಿಯಾ ಭಾಗದಲ್ಲಿ ಬಿಸಿ ಹೆಚ್ಚಾಗುತ್ತಾ ಹೋಗುತ್ತಿದ್ದು, ಹಿಮದ ಪ್ರಮಾಣ ಕಡಿಮೆಯಾಗುತ್ತಿದೆ. ಅಷ್ಟೇ ಏಕೆ ಸೈಬೀರಿಯಾ ತಾಪಮಾನದಲ್ಲೂ ಏರಿಕೆ ಕಂಡುಬರುತ್ತಿದೆ. ಇದು ಇನ್ನಷ್ಟು ಹೆಚ್ಚಾದರೆ ನಾವು ಎಲ್ಲರಂತೆ ಜೀವನ ನಡೆಸಬಹುದು, ಹಿಮದಿಂದ ಮುಕ್ತಿ ಪಡೆಯಬಹುದು ಎಂಬ ಮಹದಾಸೆ ರಷ್ಯ ದೇಶದ ಸೈಬೀರಿಯನ್ನರಿಗೆ ಇದೆ. ಆದರೆ ತಾಪಮಾನ ಏರಿಕೆ ಇತರ ಜೀವಿಗಳಿಗೆ ಕಂಟಕವಾಗುತ್ತಿದೆ.

  English summary
  Scientists found a Tiny Creature comes back to life after 24,000 years.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X