ಫುಟ್‌ಬಾಲ್ ನೋಡಲು ಬಂದು ಹೆಣವಾದ 12 ಅಭಿಮಾನಿಗಳು
ಸ್ಯಾನ್ ಸಾಲ್ವಡೋರ್: ಫುಟ್‌ಬಾಲ್ ಅಂದರೆ ಸಾಕು ಅದರ ಕ್ರೇಜ್ ಮುಗಿಲು ಮುಟ್ಟುತ್ತೆ. ಅದ್ರಲ್ಲೂ ಫುಟ್‌ಬಾಲ್ ಪಂದ್ಯ ನಡೆಯುವಾಗ ಅಭಿಮಾನಿಗಳು ತಮ್ಮನ್ನ ತಾವೇ ಮರೆತು ಸಂಭ್ರಮಾಚರಣೆ ಮಾಡ್ತಾರೆ. ಪರಿಸ್ಥಿತಿ ಹೀಗಿದ್ದಾಗ ಮಧ್ಯ ಅಮೆರಿಕದ ದೇಶದಲ್ಲಿ ಭೀಕರ ದುರಂತ ನಡೆದಿದ್ದು, ಫುಟ್‌ಬಾಲ್ ಪಂದ್ಯಾವಳಿ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 12 ಮಂದಿ ಮೃತಪಟ್ಟಿದ್ದಾರೆ.
ಹೌದು, ರಿಪಬ್ಲಿಕ್ ಆಫ್ ಎಲ್ ಸಾಲ್ವಡೋರ್‌ನ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಸ್ಥಳೀಯ ಫುಟ್‌ಬಾಲ್ ಪಂದ್ಯದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ. ಅಲಿಯಾಂಜಾ ಮತ್ತು ಎಫ್‌ಎಎಸ್ ತಂಡಗಳ ನಡುವೆ ಪಂದ್ಯಕ್ಕೆ ಸಿದ್ಧತೆ ನಡೆದಿತ್ತು. ಆ ವೇಳೆ ಸಾವಿರಾರು ಅಭಿಮಾನಿಗಳು ಕ್ರೀಡಾಂಗಣಕ್ಕೆ ಬಂದಿದ್ದರು. ಎಲ್ಲವೂ ಸರಿಯಾಗಿ ನಡೆದರೆ ಇನ್ನೇನು ಕೆಲವೇ ನಿಮಿಷದಲ್ಲಿ ಮ್ಯಾಚ್ ಶುರು ಮಾಡೋಣ ಅಂತಾ ಆಯೋಜಕರು ಲೆಕ್ಕಾಚಾರ ಹಾಕಿದ್ದರು. ಆದರೆ ಆಗಲೇ ನೋಡಿ ನಡೆಯಬಾರದ್ದು ನಡೆದು ಹೋಗಿದ್ದು, ಜವರಾಯ ಅಟ್ಟಹಾಸ ಮೆರೆದಿದ್ದು.

ಎಂಟ್ರಿ ಕೊಡುವಾಗಲೇ 12 ಜನರ ಸಾವು
ಅಲಿಯಾಂಜಾ ಮತ್ತು ಎಫ್‌ಎಎಸ್ ತಂಡಗಳ ನಡುವಿನ ಪಂದ್ಯ ವೀಕ್ಷಿಸಲು ಎರಡೂ ತಂಡದ ಅಭಿಮಾನಿಗಳು ರಿಪಬ್ಲಿಕ್ ಆಫ್ ಎಲ್ ಸಾಲ್ವಡೋರ್ ಕ್ರೀಡಾಂಗಣಕ್ಕೆ ಬಂದಿದ್ದರು. ಆಗ ಅಭಿಮಾನಿಗಳನ್ನ ಕ್ರೀಡಾಂಗಣದೊಳಗೆ ಬಿಡಲು ಅನುಮತಿ ನೀಡಲಾಗಿತ್ತು. ಆದರೆ ಅಲ್ಲೇ ಜವರಾಯ ಕಾಯುತ್ತಿದ್ದ ಅಂತಾ ಕಾಣುತ್ತದೆ, ಹೀಗೆ ಎಂಟ್ರಿ ಶುರುವಾದ ಕೆಲವೇ ನಿಮಿಷದಲ್ಲಿ ನೂಕಾಟ, ತಳ್ಳಾಟ ಉಂಟಾಗಿತ್ತು. ಆಗ ಉಂಟಾದ ಕಾಲ್ತುಳಿತಕ್ಕೆ ಸುಮಾರು 12 ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹಾಗೇ ನೂರಾರು ಜನರು ಆಸ್ಪತ್ರೆಯಲ್ಲಿ ನರಳುತ್ತಿದ್ದಾರೆ.
Luto en el estadio Cuscatlán de San Salvador,que terrible tragedia el humo y el cierre de uno de los portones que luego fue derribado por aficionados que querían entrar, dejó cuantiosas pérdidas humanas @radioyskl pic.twitter.com/vyw0T0832t
— Nery Mabel (@NeryMabelR) May 21, 2023
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಇನ್ನು ಸ್ಥಳೀಯ ಮಾಧ್ಯಮಗಳು ಹಾಗೂ ಸಾಲ್ವಡೋರ್‌ನ ಸ್ಥಳೀಯರು ಹಂಚಿಕೊಂಡಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಫ್ಯಾನ್ಸ್ ಕ್ರೀಡಾಂಗಣದ ಎಂಟ್ರಿಯಲ್ಲೇ ಬ್ಯಾರಿಕೇಡ್ ಎಳೆದು ಒಳಗೆ ನುಗ್ಗಲು ಯತ್ನಿಸುತ್ತಿರುವ ದೃಶ್ಯಗಳನ್ನ ಹಂಚಿಕೊಳ್ಳಲಾಗಿದೆ. ಸುದ್ದಿ ತಿಳಿದ ತಕ್ಷಣ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು, ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಿದರು. ಆದ್ರೆ ಎಷ್ಟೋ ಗಾಯಾಳುಗಳ ಪೈಕಿ ಸಾಕಷ್ಟು ಜನ ಮಾರ್ಗ ಮಧ್ಯದಲ್ಲೇ ಪ್ರಾಣಬಿಟ್ಟರು. ಇನ್ನುಳಿದವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.
ತಕ್ಷಣ ಪಂದ್ಯ ನಿಲ್ಲಿಸಿದ ಆಯೋಜಕರು
ಕಾಲ್ತುಳಿತದಲ್ಲಿ 12ಕ್ಕೂ ಹೆಚ್ಚು ಜನರು ಮೃತಪಟ್ಟ ನಂತರ ಸ್ಥಳದಲ್ಲಿ ಭೀಕರ ಪರಿಸ್ಥಿತಿ ಎದುರಾಯ್ತು. ಒಳಗೆ ಬಂದಿದ್ದ ಅಭಿಮಾನಿಗಳು ಕೂಡ ವಿಷಯ ತಿಳಿದು ರೊಚ್ಚಿಗೆದ್ರು. ತಕ್ಷಣವೇ ಪಂದ್ಯ ನಿಲ್ಲಿಸಿದ ಆಯೋಜಕರು, ಗಾಯಾಳುಗಳನ್ನ ಆಸ್ಪತ್ರೆಗೆ ಸೇರಿಸಲು ಆರೋಗ್ಯ ಸಿಬ್ಬಂದಿಗೆ ಸಹಾಯ ಮಾಡಿದರು. ಈ ಸುದ್ದಿ ಸಾಲ್ವಡೋರ್ ಜನರ ನಿದ್ದೆಗೆಡಿಸಿ, ಆಸ್ಪತ್ರೆಯಲ್ಲಿ ನರಳುತ್ತಿರುವ ಹಲವರು ಬದುಕಿ ಉಳಿಯುವುದು ಕಷ್ಟ ಎನ್ನಲಾಗಿದೆ. ಈ ನಡುವೆ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ವಹಿಸಿಕೊಂಡಿದೆ.
NOCHE TRÁGICA PARA EL FÚTBOL SALVADOREÑO; MUEREN 9 AFICIONADOS POR ASFIXIA
— Alerta Noticias (@alertanoti) May 21, 2023
Se confirman 9 fallecidos, personas que habrían sido afectadas por estampida en la aglomeración producída en uno de los portones de estadio Cuscatlán, en San Salvador.
Los primeros indicios señalan que… pic.twitter.com/v8h92f6JbU
ವೀಕೆಂಡ್ ಮೋಜು, ಪ್ರಾಣವೇ ಹೋಯ್ತು!
ಮೃತಪಟ್ಟವರಲ್ಲಿ ಬಹುತೇಕರು 18 ವರ್ಷ ಮೇಲ್ಪಟ್ಟ ಪುರುಷರು ಎನ್ನಲಾಗಿದೆ. ಹಾಗೇ ಮಹಿಳೆಯರು ಕೂಡ ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ವೀಕೆಂಡ್ ಇದ್ದ ಕಾರಣ ಆರಾಮಾಗಿ ಅಲಿಯಾಂಜಾ & ಎಫ್‌ಎಎಸ್ ಮ್ಯಾಚ್‌ನ ನೋಡೋದಕ್ಕೆ ಅಭಿಮಾನಿಗಳು ಬಂದಿದ್ದರು. ಆದರೆ ವೀಕೆಂಡ್ ಕ್ರೇಜ್ ಅವರ ಜೀವದ ಜೊತೆ ಆಟವಾಡಿದ್ದು ಮಾತ್ರ ದುರಂತದ ಸಂಗತಿ. ಇನ್ನು ಘಟನೆ ಬಗ್ಗೆ ಸ್ಯಾನ್ ಸಾಲ್ವಡೋರ್ ಆಡಳಿತ ತನಿಖೆ ಆದೇಶ ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
#EnDesarrollo | Ante la emergencia acontecida en un encuentro deportivo suscitado en el Estadio Cuscatlán, personal de Protección Civil Municipal de San Salvador colabora en las labores de rescate de víctimas de la estampida humana. pic.twitter.com/xUaUapzjbX
— Prensa Alcaldía San Salvador (@PrensaAMSS) May 21, 2023
ಒಟ್ನಲ್ಲಿ ಯಾರದ್ದೋ ತಪ್ಪಿಗೆ ಇನ್ಯಾರದ್ದೋ ಜೀವ ಹೋಗಿದೆ. ಆಯೋಜಕರು ಸೂಕ್ತ ವ್ಯವಸ್ಥೆ ಮಾಡಿಕೊಳ್ಳದ ಕಾರಣ ಇಂತಹ ಪರಿಸ್ಥಿತಿ ಎದುರಾಯ್ತು ಎಂಬ ಆರೋಪವೂ ಇದೆ. ಹೀಗಾಗಿ ಸ್ಯಾನ್ ಸಾಲ್ವಡೋರ್ ಸರ್ಕಾರ ತನಿಖೆಗೆ ಆದೇಶ ನೀಡಿದೆ. ತನಿಖೆಯ ಸಂಪೂರ್ಣ ವರದಿ ಹೊರಬಿದ್ದ ನಂತರ ಯಾರದ್ದು ತಪ್ಪು? ಯಾರದ್ದು ತಪ್ಪಿಲ್ಲ? ಅನ್ನೋದು ಗೊತ್ತಾಗಲಿದೆ. ಆದರೆ ಅಲ್ಲಿಯವರೆಗೂ ಮತ್ತಷ್ಟು ಜನ ಉಸಿರು ಚೆಲ್ಲುವ ಭಯವಂತೂ ಸ್ಯಾನ್ ಸಾಲ್ವಡೋರ್ ಸರ್ಕಾರಕ್ಕೆ ಕಾಡುತ್ತಿದೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications