Russia & Ukraine: ಗ್ಯಾಸ್ ಪೈಪ್ ಒಳಗೆ ನುಗ್ಗಿ ಬಂದು ಉಕ್ರೇನ್ ವಿರುದ್ಧ ದಾಳಿ ಮಾಡಿದ ರಷ್ಯಾ ಮಿಲಿಟರಿ!

ರಷ್ಯಾ & ಉಕ್ರೇನ್ ಬಡಿದಾಟ ಬಲು ಜೋರಾಗಿದ್ದು, ಉಕ್ರೇನ್ ವಿರುದ್ಧ ತೀವ್ರ ದಾಳಿಯನ್ನ ನಡೆಸುತ್ತಿರುವ ರಷ್ಯಾ ಪಡೆಗಳು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿವೆ. ಈ ಮೂಲಕ ಇಡೀ ಉಕ್ರೇನ್ ನೆಲವನ್ನು ವಶಕ್ಕೆ ಪಡೆಯಲು ರಷ್ಯಾ ಸೇನೆ ಮುನ್ನುಗ್ಗುತ್ತಿದೆ. ಅದರಲ್ಲೂ, ಉಕ್ರೇನ್‌ನ ಪ್ರಮುಖ ಪ್ರದೇಶಗಳು ಈಗಾಗಲೇ ರಷ್ಯಾ ವಶಕ್ಕೆ ಸಿಕ್ಕಿವೆ. ಹೀಗಿದ್ದಾಗ ಕುರ್ಸ್ಕ್ ಎಂಬ ಪ್ರದೇಶದ ಮೇಲೆ ದಾಳಿ ಮಾಡಲು ರಷ್ಯಾ ಸೈನಿಕರು ಮಾಡಿದ್ದೇನು ಗೊತ್ತೆ?

ರಷ್ಯಾ ತನ್ನ ಬಳಿ ಇರುವ ಎಲ್ಲಾ ಮಿಲಿಟರಿ ಸಂಪತ್ತು & ಅಸ್ತ್ರಗಳನ್ನು ಉಕ್ರೇನ್ ವಿರುದ್ಧದ ಯುದ್ಧಕ್ಕೆ ಬಳಕೆ ಮಾಡುತ್ತಿದೆ. ಇದರ ಪರಿಣಾಮ ನಲುಗಿ ಹೋಗಿರುವ ಉಕ್ರೇನ್ ಪ್ರಜೆಗಳು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಅದ್ರಲ್ಲೂ ಲಕ್ಷ ಲಕ್ಷ ಸೈನಿಕರ ಸಾವು ಉಕ್ರೇನ್‌ನಲ್ಲಿ ದೊಡ್ಡ ಆಘಾತ ಸೃಷ್ಟಿ ಮಾಡಿದೆ. ಇಂತಹ ಸಮಯದಲ್ಲೇ, ಗ್ಯಾಸ್ ಪೈಪ್ ಒಳಗಡೆ ನುಗ್ಗಿ ಬಂದು ಉಕ್ರೇನ್ ಮೇಲೆ ದಾಳಿ ಮಾಡಿದ ರಷ್ಯಾ ಮಿಲಿಟರಿ ದೊಡ್ಡ ಆಘಾತ ನೀಡಿದೆ. ಈ ಮೂಲಕ ನಾವು ಎಲ್ಲದಕ್ಕೂ ರೆಡಿ ಅನ್ನೋ ಸಂದೇಶವನ್ನೂ ರವಾನಿಸಿದೆ ರಷ್ಯಾ.

Russian Special Forces Strike Ukrainian Units via Gas Pipeline in Kursk

ಉಕ್ರೇನ್ ಎದೆಯಲ್ಲಿ ಹೊಸ ನಡುಕ?

ರಷ್ಯಾ ಸೈನಿಕರು ಉಕ್ರೇನ್ ಒಳಗಡೆ ಬರಬಾರದು ಅಂತಾ ಅದೆಷ್ಟೇ ಬಡಿದಾಡಿದರೂ ಸಕ್ಸಸ್ ಕಾಣುತ್ತಿಲ್ಲ ಉಕ್ರೇನ್ ಮಿಲಿಟರಿ. ಹೀಗಿದ್ದಾಗ ರಷ್ಯಾ ಸೈನಿಕರು ಕೂಡ ಹೊಸ ಹೊಸ ಜಾಗ ಹುಡುಕಿಕೊಂಡು ಈಗಾಗಲೇ ಬಹುತೇಕ ಉಕ್ರೇನ್ ದೇಶದ ನೆಲವನ್ನು ಆಕ್ರಮಣ ಮಾಡಿದ್ದು ಇತಿಹಾಸ. ಇಷ್ಟೆಲ್ಲದರ ನಡುವೆ ದಿಢೀರ್ ಕುರ್ಸ್ಕ್ ಪ್ರದೇಶವನ್ನು ವಶಕ್ಕೆ ಪಡೆಯಲು ಗ್ಯಾಸ್ ಪೈಪ್‌ಲೈನ್ ಸಹಾಯ ಪಡೆದಿದ್ದಾರೆ. ಗ್ಯಾಸ್ ಪೈಪ್ ಒಳಗಡೆಯಿಂದ ನುಗ್ಗಿ ಬಂದ ರಷ್ಯಾದ ಸೈನಿಕರು ಕುರ್ಸ್ಕ್ ಪ್ರದೇಶವನ್ನು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಮತ್ತೊಂದು ಜಾಗವೂ ಉಕ್ರೇನ್ ಕೈಬಿಟ್ಟು ಹೋಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+