• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಗಸ್ಟ್‌ 15ಕ್ಕೆ ಭಾರತಕ್ಕೆ ದೊರೆಯಲಿದೆ ರಷ್ಯಾದ ಕೊರೊನಾ ಲಸಿಕೆ

|

ನವದೆಹಲಿ, ಜುಲೈ 14: ಆಗಸ್ಟ್ 15ರ ವೇಳೆಗೆ ರಷ್ಯಾದ ಕೊರೊನಾ ಲಸಿಕೆ ಭಾರತಕ್ಕೆ ದೊರೆಯಲಿದೆ.ದೇಶಿಯ ಕೊರೊನಾ ಲಸಿಕೆ ಕೊವಾಕ್ಸಿನ್​ ಕೂಡ ಆಗಸ್ಟ್​ 15ಕ್ಕೆ ಸಿದ್ಧವಾಗಲಿದೆ ಎಂದೇ ಬಿಂಬಿಸಲಾಗಿತ್ತು.

ಆದರೆ, ಮೊದಲ ಹಂತದ ಕ್ಲಿನಿಕಲ್​ ಟ್ರಯಲ್​ ಈಗ ಆರಂಭವಾಗಿದೆ. ಹೀಗಾಗಿ ಸಿದ್ಧಗೊಳ್ಳಲು ಇನ್ನೂ ಕನಿಷ್ಠ ಮೂರು ತಿಂಗಳಾದರೂ ಬೇಕು. ನಂತರ ಎರಡನೇ ಹಂತ ಶುರುವಾಗಬೇಕಿದೆ.

ನಿರೀಕ್ಷೆಗೂ ಮುನ್ನವೇ ಲಸಿಕೆ ಸಜ್ಜಾಗುತ್ತಿದೆ. ಸೆಪ್ಟೆಂಬರ್​ ಅಥವಾ ವರ್ಷಾಂತ್ಯಕ್ಕೆ ಲಭ್ಯವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆ ತಜ್ಞರಂತೂ ಮುಂದಿನ ವರ್ಷದ ಆರಂಭಕ್ಕೆ ಸಿದ್ಧವಾಗಬಹುದೆಂದು ಅಂದಾಜಿಸಿದ್ದರು.

ಬೆಂಗಳೂರಲ್ಲಿ ಕೋವಿಡ್ ಭೀತಿ; ಸಹಾಯವಾಣಿ ಸಂಖ್ಯೆಗಳು

ಅಮೆರಿಕದ ಮಾಡೆರ್ನಾ ಹಾಗೂ ಬ್ರಿಟನ್ನಿನ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯಗಳ ಲಸಿಕೆಗಳು ಎರಡನೇ ಹಾಗೂ ಮೂರನೇ ಹಂತದ ಕ್ಲಿನಿಕಲ್​ ಟ್ರಯಲ್​ ನಡೆಸುತ್ತಿವೆ. ಈ ಪ್ರಕ್ರಿಯೆಗಳು ಮುಗಿಯಲು ಕೆಲ ತಿಂಗಳುಗಳು ಬೇಕು ಎನ್ನುವುದು ಕಂಪನಿಗಳ ವಾದವಾಗಿದೆ.

ಆದರೆ, ಇದೆಲ್ಲದರ ನಡುವೆ ರಷ್ಯಾದ ಲಸಿಕೆ ಸದ್ದಿಲ್ಲದೆ ಸಂಶೋಧನೆಯನ್ನು ಮುಗಿಸಿ ಮಾರುಕಟ್ಟೆಗೆ ಬರಲು ಸಜ್ಜಾಗಿದೆ. ಇದನ್ನು ಅಲ್ಲಿನ ಸರ್ಕಾರವೇ ಅಭಿವೃದ್ಧಿಪಡಿಸಿರುವುದು ವಿಶೇಷವಾಗಿದೆ.

ಮಾಸ್ಕೋದ ಸೆಚೆನೋವ್​ ವಿಶ್ವವಿದ್ಯಾಲಯ ಸರ್ಕಾರಿ ಅಧೀನದ ಗಮಾಲಿ ಸಾಂಕ್ರಾಮಿಕ ರೋಗ ಹಾಗೂ ಸೂಕ್ಷ್ಮ ಜೀವಶಾಸ್ತ್ರ ಸಂಸ್ಥೆಯೊಂದಿಗೆ ಸೇರಿ ಲಸಿಕೆ ಅಭಿವೃದ್ಧಿ ಪಡಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕ್ಲಿನಿಕಲ್ ಟ್ರಯಲ್

ಕ್ಲಿನಿಕಲ್ ಟ್ರಯಲ್

ಕ್ಲಿನಿಕಲ್​ ಟ್ರಯಲ್​ ಮುಕ್ತಾಯವಾಗಿದ್ದು, ಲಸಿಕೆ ಪರಿಣಾಮಕಾರಿ ಹಾಗೂ ಮಾನವರ ಬಳಕೆಗೆ ಸುರಕ್ಷಿತವಾಗಿದೆ ಎಂದು ಸಂಸ್ಥೆಯ ತಜ್ಞರು ಮಾಹಿತಿ ನೀಡಿದ್ದಾರೆ. ರಕ್ಷಣಾ ಇಲಾಖೆಯ ಯೋಧರ ಮೇಲೆ ಲಸಿಕೆ ಪ್ರಯೋಗ ಮಾಡಲಾಗಿದೆ. ಲಸಿಕೆ ಪರಿಣಾಮಕಾರಿಯಾಗಿದೆ ಎನ್ನುವ ಫಲಿತಾಂಶ ದೊರೆತಿದೆ ಎಂದು ಸಂಶೋಧಕಿ ಎಲೆನಾ ಸ್ಮೊಲ್ಯಾರ್​ಚುಕ್​ ರಷ್ಯನ್​ ಸುದ್ದಿ ಸಂಸ್ಥೆ ತಾಸ್​ಗೆ ತಿಳಿಸಿದ್ದಾರೆ.

ಆಗಸ್ಟ್ ಮಧ್ಯಭಾಗದಲ್ಲಿ ಲಸಿಕೆ

ಆಗಸ್ಟ್ ಮಧ್ಯಭಾಗದಲ್ಲಿ ಲಸಿಕೆ

ಲಸಿಕೆ ಆಗಸ್ಟ್​ ಮಧ್ಯದ ವೇಳೆಗೆ ಜನರ ಬಳಕೆಗೆ ಲಭ್ಯವಾಗಲಿದೆ ಎಂದು ಗಮಾಲಿ ಸಂಸ್ಥೆ ನಿರ್ದೇಶಕ ಅಲೆಕ್ಸಾಂಡರ್​ ಗಿಂಟ್ಸ್​ಬರ್ಗ್​ ಮಾಹಿತಿ ನೀಡಿದ್ದಾರೆ. ಸಪ್ಟೆಂಬರ್​ ವೇಳಗೆ ಖಾಸಗಿ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಇದರ ಉತ್ಪಾದನೆ ಆರಂಭಿಸಲಿವೆ ಎಂದು ತಿಳಿಸಿದ್ದಾರೆ.

ಎರಡನೇ ಹಂತದ ಕ್ಲಿನಿಕಲ್ ಪ್ರಯೋಗ

ಎರಡನೇ ಹಂತದ ಕ್ಲಿನಿಕಲ್ ಪ್ರಯೋಗ

ರಷ್ಯಾ ಲಸಿಕೆ ಎರಡು ಹಂತದ ಕ್ಲಿನಿಕಲ್​ ಪ್ರಯೋಗವನ್ನು ಮಾತ್ರ ಮಾಡಿದ್ದು, ವಿಶ್ವಸಂಸ್ಥೆ ಮಾನದಂಡದ ಪ್ರಕಾರ ಮೂರನೇ ಹಂತದ ಕ್ಲಿನಿಕಲ್​ ಪ್ರಯೋಗವನ್ನು ನಡೆಸಬೇಕು. ಆದರೆ, ಖಚಿತ ಫಲಿತಾಂಶಗಳು ದೊರೆತಲ್ಲಿ ಮಾತ್ರ ಬೃಹತ್​ ಪ್ರಮಾಣದಲ್ಲಿ ಉತ್ಪಾದನೆಗೆ ಅವಕಾಶ ನೀಡಲಾಗುತ್ತದೆ. ರಷ್ಯಾದಲ್ಲಿ ಕೆಲ ದಿನಗಳ ಬಳಕೆ ಬಳಿಕವಷ್ಟೇ ಇದು ಇತರೆಡೆಗಳಲ್ಲಿ ಬಳಕೆಗೆ ಪರಿಗಣಿಸಬಹುದು ಎಂದು ಹೇಳಲಾಗಿದೆ.

ಜುಲೈ 13 ರಂದು ಯೋಧರು ಬಿಡುಗಡೆ

ಜುಲೈ 13 ರಂದು ಯೋಧರು ಬಿಡುಗಡೆ

ಮೊದಲ ಕ್ಲಿನಿಕಲ್​ ಪ್ರಯೋಗಕ್ಕೆ ಒಳಗಾದ ಯೋಧರು ಜುಲೈ 13ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ಎರಡನೇ ಹಂತದ ಪ್ರಯೋಗದಲ್ಲಿ ಭಾಗಿಯಾದವರು ಜುಲೈ 20ರಂದು ಡಿಸ್ಚಾರ್ಜ್​ ಆಗಲಿದ್ದಾರೆ.

English summary
According to a report, the Russian scientists are hopeful to launch the world’s first coronavirus vaccine by mid-August as Alexander, who is the director of Gamalei center, is hopeful that the vaccine candidate will ‘enter civil circulation’ by August 12-14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X