ಅವರನ್ನು ಮುಟ್ಟಿದ್ರೆ ನಮ್ಮನ್ನು ಮುಟ್ಟಿದಂತೆ: ಪುಟಿನ್ ಕೆಂಡ ಕೆಂಡ!
ಮಾಸ್ಕೋ: ರಷ್ಯಾ ಅಧ್ಯಕ್ಷ ಪುಟಿನ್ ಮತ್ತೊಮ್ಮೆ ರೊಚ್ಚಿಗೆದ್ದಿದ್ದು, ರಷ್ಯಾದ ಸ್ನೇಹಿತರನ್ನು ಮುಟ್ಟಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅದ್ರಲ್ಲೂ ರಷ್ಯಾಗೆ ಸಂಕಷ್ಟದ ಸಮಯದಲ್ಲಿ ನೆರವಾಗಿದ್ದ ಬೆಲಾರಸ್ ಪರ ಪುಟಿನ್ ನೇರವಾಗಿ ಇದೀಗ ಅಖಾಡ ಪ್ರವೇಶಿಸಿದ್ದು, ಬೆಲಾರಸ್‌ನ ಮುಟ್ಟಿದರೆ ನಮ್ಮ ಮೇಲೆ ಆಕ್ರಮಣ ಮಾಡಿದಂತೆ ಎಂದು ಪೋಲ್ಯಾಂಡ್‌ಗೆ ವಾರ್ನಿಂಗ್ ಕೊಟ್ಟಿದ್ದಾರೆ.
ಹೌದು, ರಷ್ಯಾ ಖಾಸಗಿ ಸೇನೆ ಬಂಡಾಯ ಎದ್ದು ಗಲಾಟೆ ಮಾಡಿದಾಗ ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಮಧ್ಯಪ್ರವೇಶ ಮಾಡಿದ್ದರು. ಹೀಗೆ ಬೆಲಾರಸ್ ಮಧ್ಯಪ್ರವೇಶದ ಪರಿಣಾಮ ಸಮಸ್ಯೆ ಬಗೆಹರಿದಿತ್ತು. ರಷ್ಯಾದ ಖಾಸಗಿ ಸೇನೆಯನ್ನು ಸಮಾಧಾನ ಮಾಡಿದ್ದ ಲುಕಾಶೆಂಕೊ, ಅವರನ್ನ ತನ್ನ ದೇಶಕ್ಕೆ ಕರೆಸಿಕೊಂಡು ರಷ್ಯಾನ ಬಚಾವ್ ಮಾಡಿದ್ದರು. ಆದರೆ ಈಗ ಇದೇ ಕಾರಣಕ್ಕೆ ಬೆಲಾರಸ್ ಟಾರ್ಗೆಟ್ ಅಗಿದೆ ಎಂಬ ಆರೋಪ ಕೇಳಿಬಂದಿದೆ. ಬೆಲಾರಸ್‌ನಲ್ಲಿ ರಷ್ಯಾದ ಖಾಸಗಿ ಸೈನಿಕರು ಕವಾಯತು ನಡೆಸುತ್ತಿದ್ದಾರೆ ಎಂದು ಆರೋಪ ಮಾಡಿರುವ ಪೋಲ್ಯಾಂಡ್, ಬೆಲಾರಸ್ ಗಡಿಗೆ ಭಾರಿ ಪ್ರಮಾಣದ ಪಡೆಗಳನ್ನು ಕಳುಹಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಹೀಗಾಗಿಯೇ ಪುಟಿನ್ ರೊಚ್ಚಿಗೆದ್ದು ಎಚ್ಚರಿಕೆ ನೀಡಿದ್ದಾರೆ.

ಪರಮಾಣು ಅಸ್ತ್ರಗಳು ಸಿದ್ಧವಾಗಿ ನಿಂತಿವೆ!
ಭೀಕರ ಯುದ್ಧಕ್ಕೆ ರಷ್ಯಾ ಈಗಾಗಲೇ ಅದೆಷ್ಟು ತಯಾರಿ ನಡೆಸಿದೆ ಅಂದ್ರೆ, ಬೆಲಾರಸ್ ಗಡಿ ಭಾಗದಲ್ಲಿ ತನ್ನ ಪರಮಾಣು ಅಸ್ತ್ರಗಳನ್ನ ಸಿದ್ಧವಾಗಿ ನಿಲ್ಲಿಸಿದೆ ರಷ್ಯಾ. ಈ ಕಾರಣಕ್ಕೆ ಈಗ ಯುರೋಪ್ ಒಕ್ಕೂಟಕ್ಕೆ ಆತಂಕ ಬಂದಿದೆ. ಅದ್ರಲ್ಲೂ ರಷ್ಯಾ ಶತ್ರುಗಳು ನಡುಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಪೋಲ್ಯಾಂಡ್ ಕೂಡ ತಿರುಗಿಬಿದ್ದಿದ್ದು, ತನ್ನ ಗಡಿಯ ಸಮೀಪದಲ್ಲೇ ಇರುವ ಬೆಲಾರಸ್ ಗಡಿಗೆ ಸೇನೆ ಕಳುಹಿಸುತ್ತಿದೆ ಎನ್ನಲಾಗಿದೆ. ಆದರೆ ಇದರಿಂದ ಬೆಲಾರಸ್ ಭಯಗೊಂಡಿದ್ದು, ರಷ್ಯಾ ಖಡಕ್ ರಿಯಾಕ್ಷನ್ ಕೊಟ್ಟಿದೆ. ಅಕಸ್ಮಾತ್ ಬೆಲಾರಸ್‌ನ ತಂಟೆಗೆ ಹೋದರೆ ನಮ್ಮಿಂದ ಉತ್ತರ ಸಿಗಲಿದೆ ಎಂದಿದೆ ರಷ್ಯಾ.
ರಷ್ಯಾ ದಾಳಿಗೆ 8 ಜನರು ಬಲಿ?
ಪೋಲ್ಯಾಂಡ್ ಮತ್ತು ರಷ್ಯಾ ನಡುವಿನ ಕಿರಿಕ್ ಒಂದು ಕಡೆಯಾದರೆ, ಮತ್ತೊಂದು ಕಡೆ ಉಕ್ರೇನ್ ಮೇಲೆ ರಷ್ಯಾ ತನ್ನ ದಾಳಿಯನ್ನ ತೀವ್ರಗೊಳಿಸಿದೆ. ಹೀಗೆ ರಷ್ಯಾ ನಡೆಸಿದ ದಾಳಿ ಪರಿಣಾಮ 8 ಜನರು ಬಲಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ರಾತ್ರಿಯಿಡೀ ನಡೆಸಿದ ಕ್ರೂಸ್ ಕ್ಷಿಪಣಿ & ಡ್ರೋನ್ ದಾಳಿಯಲ್ಲಿ ಎಂಟು ನಾಗರಿಕರು ಮೃತಪಟ್ಟಿದ್ದು, ಗಾಯಾಳುಗಳು ನರಳುತ್ತಿದ್ದಾರೆ. ಬಖ್ಮತ್ ಸೇರಿದಂತೆ ಡೊನೆಟ್‌ಸ್ಕ್, ಚೆರ್ನಿವ್ ನಗರಗಳ ಮೇಲೆ ರಷ್ಯಾ ಸೇನೆ ತನ್ನ ದಾಳಿಯನ್ನ ಭೀಕರಗೊಳಿಸಿದೆ ಎಂದು ಉಕ್ರೇನ್ ಆರೋಪಿಸಿದೆ. ದಾಳಿ ನಡೆದಿರುವ ಪ್ರದೇಶದಿಂದ ಜನರನ್ನು ಸ್ಥಳಾಂತರ ಮಾಡಲಾಗಿದೆ.
ಯುದ್ಧದ ಪರಿಸ್ಥಿತಿ ಮುಂದೆ ಏನಾಗಬಹುದು?
ಉಕ್ರೇನ್ ಹಾಗೂ ರಷ್ಯಾ ನಡುವಿನ ಜಗಳ ಸಣ್ಣದಾಗಿ ಆರಂಭವಾಗಿ ಈಗ ದೊಡ್ಡದಾಗಿದೆ. 1ನೇ ಮಹಾಯುದ್ಧ & 2ನೇ ಮಹಾಯುದ್ಧ ಶುರುವಾಗಿದ್ದು ಕೂಡ ಹೀಗೆ. ಆದರೆ ಈ ಎರಡೂ ಯುದ್ಧಗಳಲ್ಲಿ ಕೋಟಿ ಕೋಟಿ ಜನರು ಪ್ರಾಣಬಿಟ್ಟರು. 2ನೇ ಮಹಾಯುದ್ಧ ವಿನಾಶದಲ್ಲೇ ಅತಿ ವಿನಾಶಕ ಎನಿಸಿಕೊಂಡಿತು. ಹೀಗಾಗಿ ಮುಂದೆ ಮತ್ತೆಂದೂ ಮಹಾಯುದ್ಧ ನಡೆಯಲ್ಲ ಎಂಬ ನಂಬಿಕೆ ಇರುವಾಗಲೇ, ಸಣ್ಣ ಜಗಳವಾಗಿದ್ದ ರಷ್ಯಾ & ಉಕ್ರೇನ್ ಯುದ್ಧವು ಭೀಕರವಾಗುತ್ತಿದೆ. ಅದರಲ್ಲೂ ಒಂದು ಕಡೆ ಪಾಶ್ಚಿಮಾತ್ಯರು ಹಾಗೇ ಇನ್ನೊಂದು ಕಡೆ ರಷ್ಯಾ ನಡುವೆ ಘನಘೋರ ಕಾಳಗ ಸದ್ದೇ ಇಲ್ಲದೆ ಶುರುವಾಗಿಬಿಟ್ಟಿದೆ. ಇದೇ ಸಂದರ್ಭದಲ್ಲಿ ಪೋಲ್ಯಾಂಡ್ & ಬೆಲಾರಸ್ ನಡುವೆ ಬೆಂಕಿ ಹೊತ್ತಿಕೊಂಡಿದೆ.

ಒಟ್ನಲ್ಲಿ ರಷ್ಯಾ ಮತ್ತು ಉಕ್ರೇನ್ ಕಿತ್ತಾಟ ಇಡೀ ಜಗತ್ತಿನ ನೆಮ್ಮದಿ ಕೆಡಿಸಿದೆ. ಹೀಗಾಗಿಯೇ ಪ್ರಪಂಚದ ಪ್ರತಿಯೊಂದು ದೇಶವೂ ಯುದ್ಧಕ್ಕೆ ಅಂತ್ಯ ಹಾಡಲು ಕಾಯುತ್ತಿವೆ. ಆದರೆ ಈ ಯುದ್ಧ ನಿಲ್ಲುತ್ತಿಲ್ಲ, ಪರಿಸ್ಥಿತಿ ಹಿಡಿತಕ್ಕೆ ಸಿಗುತ್ತಿಲ್ಲ. ಹೀಗಾಗಿ ಮುಂದೆ ಏನಾಗುತ್ತೆ? ಅಂತಾ ಎಲ್ಲರೂ ಕಾಯುತ್ತಿದ್ದಾರೆ. ಇದೀಗ ರಷ್ಯಾ ಮತ್ತು ಉಕ್ರೇನ್ ಕಿರಿಕ್ ನಡುವೆ ಪೋಲ್ಯಾಂಡ್ ಕೂಡ ಎಂಟ್ರಿಯಾಗಿದ್ದು, ಹೊಸ ಗಲಾಟೆ ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ.












Click it and Unblock the Notifications