50 ಪ್ರಯಾಣಿಕರು ಇದ್ದ ವಿಮಾನ ದಿಢೀರ್ ನಾಪತ್ತೆ, ಭೀಕರ ಅಪಾಘಾತ ಶಂಕೆ... Passenger Plane
ವಿಮಾನ ಅಪಘಾತಗಳು ಪದೇ ಪದೇ ಪ್ರಯಾಣಿಕರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿವೆ. ಇಡೀ ಜಗತ್ತಿನಲ್ಲಿ ಸಾಲು ಸಾಲು ವಿಮಾನ ಅಪಘಾತಗಳು ಸಂಭವಿಸಿ ಚಿಂತೆ ಹೆಚ್ಚಿಸಿದೆ. ಅದರಲ್ಲೂ ಕಳೆದ ತಿಂಗಳು ಅಂದ್ರೆ 2025 ಜೂನ್ ತಿಂಗಳಲ್ಲಿ ಭಾರತದಲ್ಲಿ ಏರ್ ಇಂಡಿಯಾ ವಿಮಾನ ಭೀಕರ ಅಪಘಾತಕ್ಕೆ ತುತ್ತಾಗಿ, 260 ಜನರ ಸಾವಿಗೆ ಈ ಘಟನೆ ಕಾರಣವಾಗಿತ್ತು. ಹೀಗಿದ್ದಾಗಲೇ ದಿಢೀರ್, 50 ಪ್ರಯಾಣಿಕರು ಇದ್ದ ವಿಮಾನ ದಿಢೀರ್ ನಾಪತ್ತೆ ಆಗಿದ್ದು ಭೀಕರ ಅಪಾಘಾತ ಶಂಕೆ...
ಒಂದು ಕಾಲದಲ್ಲಿ ವಿಮಾನದಲ್ಲಿ ಪ್ರಯಾಣ ಮಾಡುವುದು ಹೆಮ್ಮೆಯ ವಿಚಾರ ಆಗಿತ್ತು, ಆದರೆ ಇತ್ತೀಚಿನ ಘಟನೆಗಳು ಭಯ ಹುಟ್ಟುಹಾಕಿದ್ದು ವಿಮಾನ ಪ್ರಯಾಣ ಅಂದ್ರೆನೇ ಜನರು ಹೆದರುವ ಸ್ಥಿತಿ ನಿರ್ಮಾಣ ಆಗಿದೆ. ವಿಮಾನ ಪ್ರಯಾಣ ಅಪಾಯಕಾರಿ ಅನ್ನೋ ಆರೋಪ ಪದೇ ಪದೇ ಕೇಳಿ ಬರುತ್ತಲೇ ಇರುತ್ತದೆ. ಆದರೆ ಅತೀ ವೇಗವಾಗಿ ಮತ್ತು ಬೇಗ ಊರಿಗೆ ಹಾಗೂ ತಮಗೆ ಬೇಕಾದ ಸ್ಥಳಕ್ಕೆ ಹೋಗಲು ವಿಮಾನ ಪ್ರಯಾಣವನ್ನ ಜನ ಬಳಕೆ ಮಾಡುತ್ತಾರೆ. ಅದರಲ್ಲೂ ಶ್ರೀಮಂತರು ವಿಮಾನ ಪ್ರಯಾಣಕ್ಕೆ ಒತ್ತು ನೀಡುತ್ತಾರೆ. ಹೀಗಿದ್ದಾಗ ಪದೇ ಪದೇ ವಿಮಾನ ಅಪಘಾತ ಸಂಭವಿಸಿ ಜನರಲ್ಲೂ ಭಯದ ವಾತಾವರಣ ಸೃಷ್ಟಿ ಆಗುತ್ತಿದೆ. ಇದೀಗ ದಿಢೀರ್ 50 ಪ್ರಯಾಣಿಕರು ಇದ್ದ ವಿಮಾನಕ್ಕೆ ಏನಾಯ್ತು?

50 ಪ್ರಯಾಣಿಕರು ಇದ್ದ ವಿಮಾನ...
ಹೌದು, 2025 ಜೂನ್ 12 ಭಾರತೀಯರಿಗೆ ಎಂದೂ ಮರೆಯಲು ಆಗಲ್ಲ. ಯಾಕಂದ್ರೆ ಗುಜರಾತ್ ರಾಜ್ಯದ ಅಹಮದಾಬಾದ್ ನಗರದಿಂದ ಲಂಡನ್ ಕಡೆಗೆ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾ ವಿಮಾನ ಭೀಕರವಾಗಿ ಅಪಘಾತಕ್ಕೆ ತುತ್ತಾಗಿ, 260 ಜನರ ಜೀವ ಹೋಗಿತ್ತು. ಈ ಘಟನೆ ಮಾಸುವ ಮೊದಲೇ ಇದೀಗ ಮತ್ತೊಂದು ವಿಮಾನ ದುರಂತದ ಸುದ್ದಿ ಕೇಳಿ ಬರುತ್ತಿದ್ದು, ಹೀಗಾಗಿ ಭಯ ಮತ್ತಷ್ಟು ಹೆಚ್ಚಾಗಿದೆ. ಹಾಗಾದ್ರೆ ಇದೀಗ 50 ಪ್ರಯಾಣಿಕರು ಇದ್ದ ವಿಮಾನಕ್ಕೆ ಏನಾಯ್ತು?
ದಿಢೀರ್ ವಿಮಾನ ಭೀಕರ ಅಪಘಾತ?
ಅಂದಹಾಗೆ ಇಂದು ಚೀನಾ ಗಡಿ ಭಾಗದಲ್ಲಿ ರಷ್ಯಾದ ವಿಮಾನ ದಿಢೀರ್ ನಾಪತ್ತೆ ಆಗಿದ್ದು, ಸುಮಾರು 50 ಪ್ರಯಾಣಿಕರು ಈ ವಿಮಾನದಲ್ಲಿ ಇದ್ದರು ಎನ್ನಲಾಗಿದೆ. ಇನ್ನು ವಾಯು ಸಂಚಾರ ನಿಯಂತ್ರಣ ಕೊಠಡಿ ಜೊತೆಗೆ ಸಂಪರ್ಕ ಕಳೆದುಕೊಂಡ ನಂತರ ರಷ್ಯಾದ ಪ್ರಯಾಣಿಕ ವಿಮಾನ ದಿಢೀರ್ ನಾಪತ್ತೆ ಆಗಿದೆ, ಈಗ ವಿಮಾನ ಎಲ್ಲಿದೆ ಎಂಬ ಬಗ್ಗೆ ಮಾಹಿತಿ ಸಿಗುತ್ತಿಲ್ಲ ಎಂಬ ಮಾಹಿತಿ ಹಬ್ಬಿದೆ. ಇದೀಗ ನಾಪತ್ತೆ ಆಗಿರುವ ಈ ಆನ್ -24 ವಿಮಾನದಲ್ಲಿ ಸುಮಾರು 50 ಪ್ರಯಾಣಿಕರು ಇದ್ದರು ಅಂತಾ ಹೇಳಲಾಗುತ್ತಿದೆ. ಹೀಗಾಗಿಯೇ ಈಗ ಭಾರಿ ಆತಂಕ ಮನೆ ಮಾಡಿ, ವಿಮಾನ ಪತ್ತೆ ಮಾಡಲು ಕಾರ್ಯಾಚರಣೆ ಮುಂದುವರಿದಿದೆ. ಇನ್ನು ಅಂಗಾರ ಏರ್ಲೈನ್ಸ್ ನಿರ್ವಹಿಸುವ ನಾಪತ್ತೆ ಆಗಿರುವ ಈ ವಿಮಾನ, ಅಮುರ್‌ನ ಟಿಂಡಾ ಸಿಟಿ ಕಡೆಗೆ ಹೋಗುತ್ತಾ ಇತ್ತು ಅಂತಾ ಹೇಳಲಾಗಿದೆ. ಹೀಗಾಗಿ ಭೀಕರ ಅಪಘಾತ ಆಗಿದೆಯಾ? ಅಥವಾ ಎಲ್ಲಾದರೂ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದೆಯಾ? ಎಂಬ ಅನುಮಾನ ದಟ್ಟವಾಗಿದೆ.












Click it and Unblock the Notifications