ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ ವಿಮಾನ ಪತನ : 100 ಶವಗಳು ಪತ್ತೆ

|
Google Oneindia Kannada News

ಕೈರೋ, ಅಕ್ಟೋಬರ್ 31 : ರಷ್ಯಾದ ವಿಮಾನ ಪತನಗೊಂಡ ಸಿನಾಯ್ ಪ್ರದೇಶಕ್ಕೆ ತೆರಳಿರುವ ಈಜಿಪ್ಟ್ ರಕ್ಷಣಾ ಪಡೆಗಳು 5 ಮಕ್ಕಳು ಸೇರಿದಂತೆ 100 ಶವಗಳನ್ನು ಹೊರತೆಗೆದಿದೆ. ವಿಮಾನದಲ್ಲಿ 224 ಪ್ರಯಾಣಿಕರಿದ್ದು, ಶವಗಳಿಗಾಗಿ ಹುಡುಕಾಟ ಮುಂದುವರೆದಿದೆ.

ರಷ್ಯಾದ ವಿಮಾನ ಪತನ : ಈಜಿಪ್ಟ್‌ನಿಂದ ರಷ್ಯಾಕ್ಕೆ ಹೊರಟಿದ್ದ 224 ಪ್ರಯಾಣಿಕರಿದ್ದ ಎ-321 ವಿಮಾನ ಸಿನಾಯ್ ಪತನಗೊಂಡಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ವಿಮಾನ ಪತನಗೊಂಡಿದೆ ಎಂದು ಈಜಿಪ್ಟ್ ಖಚಿತಪಡಿಸಿದೆ.

ಶನಿವಾರ ಈಜಿಪ್ಟ್‌ನಿಂದ ರಷ್ಯಾದ ಸೆಂಟ್ ಪೀಟರ್ಸ್ ಬರ್ಗ್‌ಗೆ ತೆರಳಲು ಎ-321 ಏರ್ ಬಸ್ ವಿಮಾನ ಟೇಕಾಫ್ ಆಗಿತ್ತು. ಟೇಕಾಫ್ ಆದ 20 ನಿಮಿಷಗಳಲ್ಲಿಯೇ ವಿಮಾನ ರಡಾರ್ ಸಂಪರ್ಕ ಕಡಿದುಕೊಂಡಿತು. ನಂತರ ಅದು ಈಜಿಪ್ಟ್‌ನ ಸಿನಾಯ್ ಪ್ರದೇಶದಲ್ಲಿ ಪತನವಾಗಿದೆ. ವಿಮಾನದಲ್ಲಿ ಸಿಬ್ಬಂದಿ ಸೇರಿ 224 ಮಂದಿ ಪ್ರಯಾಣಿಕರಿದ್ದರು. [ಕ್ಷಿಪಣಿ ದಾಳಿಗೆ ಮಲೇಷ್ಯಾ ವಿಮಾನ ಪತನ]

egypt

ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ವಿಮಾನದಲ್ಲಿದ್ದ ಪ್ರಯಾಣಿಕರ ಪೈಕಿ ಹೆಚ್ಚಿನವರು ರಷ್ಯಾದವರಾಗಿದ್ದರು. ಈಜಿಪ್ಟ್‌ನ ರೆಡ್ ಸೀ ರೆಸಾರ್ಟ್‌ನಿಂದ ಸೆಂಟ್ಸಿ ಪೀಟರ್ಸ್ ಬರ್ಗ್‌ಗೆ ವಿಮಾನ ತೆರಳಬೇಕಿತ್ತು. [ಎಂಎಚ್ 370 ಕಣ್ಮರೆ ಪ್ರಕರಣ ದುರಂತ ಅಂತ್ಯ]

ಈಜಿಪ್ಟ್ ತನ್ನ ರಕ್ಷಣಾ ಪಡೆಗಳನ್ನು ಸಿನಾಯ್ ಪ್ರದೇಶಕ್ಕೆ ಕಳುಹಿಸಿದ್ದು ವಿಮಾನದ ಪತ್ತೆಗಾಗಿ ಹುಡುಕಾಟ ಆರಂಭಿಸಿದೆ. ವಿಮಾನ ಪತನಗೊಂಡಿರುವುದಕ್ಕೆ ನಿಖರವಾದ ಕಾರಣ ಇನ್ನೂ ಪತ್ತೆಯಾಗಿಲ್ಲ. [ಅಮ್ಮಾ ನಿನ್ನನ್ನು ಒಂದೇ ಸಾರಿ ತಬ್ಬಿಕೊಳ್ಳಲಾ?]

English summary
Egypt : A Russian airliner has crashed in central Sinai with more than 200 people on board. The Airbus A 321 had just taken off from the Red Sea resort of Sharm el-Sheikh, on its way to the Russian city of St Petersburg.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X