ನಿಂಗಿದು ಬೇಕಿತ್ತಾ ಉಕ್ರೇನ್? ರಷ್ಯಾ ಏಟಿಗೆ ಉಕ್ರೇನ್ ಪುಡಿ ಪುಡಿ!

ರಷ್ಯಾ ಸೇನೆ ಯಾವ ರೇಂಜ್‌ಗೆ ದಾಳಿ ನಡೆಸುತ್ತಿದೆ ಅಂದ್ರೆ, ಒಂದೊಂದು ಜಾಗವನ್ನೂ ಪಕ್ಕಾ ಪ್ಲಾನ್ ಮಾಡಿ ಉಕ್ರೇನ್ ಕೈಯಿಂದ ಕಿತ್ತುಕೊಳ್ಳುತ್ತಿದ್ದಾರೆ ರಷ್ಯಾ ಸೈನಿಕರು. ಉಕ್ರೇನ್ ದೇಶದ ಬಹುತೇಕ ಪ್ರದೇಶಗಳು ಈಗಾಗಲೇ ರಷ್ಯಾ ಸೇನೆಯ ಹಿಡಿತಕ್ಕೆ ಸಿಕ್ಕಿದೆ. ಹೀಗಿದ್ದಾಗ ರಾಜಧಾನಿ ಉಳಿಸಿಕೊಳ್ಳಲು ಉಕ್ರೇನ್ ಬಡಿದಾಡುವ ಸಮಯದಲ್ಲೇ ಮತ್ತೊಂದು ಭೀಕರ ಘಟನೆ ಇದೀಗ ವರದಿಯಾಗಿದೆ.

ರಷ್ಯಾ & ಉಕ್ರೇನ್ ಯುದ್ಧ ಮತ್ತಷ್ಟು ಜೋರಾದ ಸಮಯದಲ್ಲೇ, ಉಕ್ರೇನ್ ಸೇನೆ ಇದೀಗ ರಷ್ಯಾ ವಿರುದ್ಧ ಪ್ರತಿದಾಳಿ ಶುರು ಮಾಡಿದೆ. ಈಗಾಗಲೇ ಉಕ್ರೇನ್ ದೇಶದ ಪ್ರಮುಖ ನಗರ & ರಾಜ್ಯಗಳು ರಷ್ಯಾ ಸೇನೆ ವಶಕ್ಕೆ ಸಿಕ್ಕಿವೆ. ಹೀಗಾಗಿ ಉಕ್ರೇನ್‌ ಪಡೆಗಳಿಗೆ ಇನ್ನಷ್ಟು ಹೋರಾಟ ನಡೆಸಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ಇಷ್ಟೆಲ್ಲಾ ಸೂಕ್ಷ್ಮ ಸ್ಥಿತಿ ನಡುವೆ ರಷ್ಯಾ & ಉಕ್ರೇನ್ ಗಡಿ ಕೊತ ಕೊತ ಕುದಿಯುತ್ತಿದೆ. 2022ರ ಫೆಬ್ರವರಿ ತಿಂಗಳಲ್ಲಿ ಶುರುವಾಗಿದ್ದ ರಷ್ಯಾ & ಉಕ್ರೇನ್ ಯುದ್ಧವು ಬರೋಬ್ಬರಿ 3 ವರ್ಷ ಪೂರೈಸಿದ್ದು, ಇದೇ ಸಮಯದಲ್ಲಿ ಮತ್ತೆ ಹಲವು ಪ್ರದೇಶಗಳು ರಷ್ಯಾ ಸೇನೆ ಹಿಡಿತಕ್ಕೆ ಸಿಕ್ಕಿವೆ.

Russian Military Acquired Several More Territory Of Ukraine

ಉಕ್ರೇನ್ ಹಳ್ಳಿಗಳು ರಷ್ಯಾ ಸೇನೆ ವಶಕ್ಕೆ!

ರಷ್ಯಾ ಸೇನೆ ಇದೀಗ ಉಕ್ರೇನ್‌ನ ಕುರ್ಸ್ಕ್ ಗಡಿ ಪ್ರದೇಶದಲ್ಲಿ ಉಕ್ರೇನ್ ಸೇನೆಯನ್ನು ಹಿಗ್ಗಾಮುಗ್ಗಾ ಬಾರಿಸಿ ಕಳುಹಿಸಿದೆ. ಹೀಗೆ ಉಕ್ರೇನ್ ಸೇನೆ ರಷ್ಯಾ ಏಟು ತಡೆಯಲು ಆಗದೆ ಓಡಿ ಹೋದಾಗ ತಕ್ಷಣವೇ ಆ ಭಾಗದಲ್ಲಿ ಇದ್ದ 2 ಹಳ್ಳಿಗಳನ್ನ ತನ್ನ ವಶಕ್ಕೆ ಪಡೆದಿದೆ. ಈಗಾಗಲೇ ರಷ್ಯಾದ ಅಧ್ಯಕ್ಷರು ಉಕ್ರೇನ್ ಸೈನಿಕರಿಗೆ ಎಚ್ಚರಿಕೆ ನೀಡಿ, ರಷ್ಯಾ ಎದುರು ಶರಣಾಗಿ ಎಂಬ ಸಂದೇಶ ನೀಡಿದ್ದರು. ಈ ಬೆವಣಿಗೆ ನಂತರ ಇನ್ನಷ್ಟು ಮುಂದೆ ನುಗ್ಗಿರುವ ರಷ್ಯಾ ಸೈನಿಕರು ಹಲವು ಪ್ರದೇಶಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ರಷ್ಯಾ ಸೇನೆಯು ಉಕ್ರೇನ್‌ಗೆ ಮತ್ತೊಂದು ಆಘಾತ ನೀಡಿದೆ.

ಕೌಂಟರ್ ಅಟ್ಯಾಕ್ ಪ್ಲಾನ್ ಫ್ಲಾಪ್!

ಒಂದು ಕಾಲದಲ್ಲಿ ರಷ್ಯಾ ಭಾಗವಾಗಿದ್ದ ಉಕ್ರೇನ್ ಹಲವು ವರ್ಷಗಳ ಹಿಂದೆಯೇ ದೂರವಾಗಿದೆ. ಈ ಕಾರಣಕ್ಕೆ ಉಕ್ರೇನ್ ಬಗ್ಗೆ ರಷ್ಯಾ ಸೇನೆಗೆ ಪಕ್ಕಾ ಮಾಹಿತಿ ಇದ್ದು, ಇದೀಗ ಬಹುತೇಕ ಉಕ್ರೇನ್ ಭಾಗದ ಮೇಲೆ ರಷ್ಯಾ ಮಿಲಿಟರಿ ಹಿಡಿತ ಸಾಧಿಸಿದೆ. ಉಕ್ರೇನ್‌ನ ರಾಜಧಾನಿ ಕೀವ್ ಬಿಟ್ಟರೆ, ಬಾಕಿ ಇರುವ ಬಹುತೇಕ ಜಾಗ ರಷ್ಯಾ ಸೇನೆ ಹಿಡಿತಕ್ಕೆ ಸಿಕ್ಕಿದೆ. ಈ ಹಿನ್ನೆಲೆ ಇದೀಗ ಕೌಂಟರ್ ಅಟ್ಯಾಕ್ ಶುರು ಮಾಡಿರುವ ಉಕ್ರೇನ್ ಸೇನೆ ಸೇಡಿಗೆ ಸೇಡು ಅಂತಾ ಕಾಲು ಕೆರೆದಿದೆ. ಆದರೆ ರಷ್ಯಾ ಸೇನೆ ಕೊಡುತ್ತಿರುವ ಏಟು ತಡೆಯಲು ಆಗದೆ ಎಸ್ಕೇಪ್ ಆಗುತ್ತಿದ್ದಾರೆ ಉಕ್ರೇನ್ ಸೈನಿಕರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+