ರಷ್ಯಾ ನೆಲದಲ್ಲಿ ಕ್ಷಿಪ್ರ ಬದಲಾವಣೆ: ಚೆಕ್‌ಮೇಟ್ ಹೇಳಿದ್ರಾ ಪುಟಿನ್?
ರಷ್ಯಾ ನೆಲದಲ್ಲಿ ಈಗ ಮತ್ತೆ ಕ್ಷಿಪ್ರ ಬದಲಾವಣೆ ಆರಂಭವಾಗಿದೆ. ಉಕ್ರೇನ್ ವಿರುದ್ಧ ಯುದ್ಧ ಮಾಡುತ್ತಿರುವ ರಷ್ಯಾಗೆ ಈಗ ಗೆಲ್ಲುವ ಅನಿವಾರ್ಯತೆ ಇದೆ. ಹೀಗಾಗಿ ಉಕ್ರೇನ್ ವಿರುದ್ಧದ ಗೆಲುವಿಗೆ ತನ್ನೆಲ್ಲಾ ಶಕ್ತಿ ಮೀರಿ ಪ್ರಯತ್ನ ಆರಂಭಿಸಿದೆ ಪುಟಿನ್ ಪಡೆ. ಹೀಗಿದ್ದಾಗ ರಷ್ಯಾದ ರಕ್ಷಣಾ ಸಚಿವನ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಈಗ ಭ್ರಷ್ಟಚಾರದಲ್ಲಿ ಆರೋಪ ಹೊತ್ತಿದ್ದ ರಷ್ಯಾ ರಕ್ಷಣಾ ಸಚಿವ ಅಧಿಕಾರದಿಂದ ಕೆಳಗೆ ಇಳಿದಿದ್ದಾನೆ.
ವ್ಲಾದಿಮಿರ್ ಪುಟಿನ್ ಈಗ ರಷ್ಯಾದ ಪ್ರಶ್ನಾತೀತ ನಾಯಕರಾಗಿದ್ದು, ಪುಟಿನ್ ಮಾತು ಮೀರಿ ಯಾರೂ ಮುನ್ನಡೆಯಲು ಆಗಲ್ಲ. ಯಾಕಂದ್ರೆ ಇಡೀ ರಷ್ಯಾ ಮೇಲೆ ನಿಯಂತ್ರಣ ಸಾಧಿಸಿ, ಮುನ್ನುಗ್ಗುತ್ತಿರುವ ಪುಟಿನ್‌ಗೆ ಈಗ ಇರುವುದು ಎರಡೇ ಗುರಿ. ಒಂದು ಉಕ್ರೇನ್ ವಿರುದ್ಧ ಈಗ ಯುದ್ಧ ಗೆಲ್ಲುವುದು ಮತ್ತು ಅಮೆರಿಕ ತನ್ನ ವಿರುದ್ಧ ಹೆಣೆಯುತ್ತಿರುವ ಕುತಂತ್ರ ಸದೆಬಡಿದು ಬುದ್ಧಿ ಕಲಿಸುವುದು. ಹೀಗೆ ಯುದ್ಧ ಗೆಲುವಿಗೆ ಮುನ್ನುಗ್ಗುತ್ತಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಅನಿವಾರ್ಯವಾಗಿ ರಷ್ಯಾ ರಕ್ಷಣಾ ಸಚಿವನನ್ನು ಹೊರಗೆ ಕಳುಹಿಸಿಬೇಕಾಗಿ ಬಂದಿತ್ತು. ಹಾಗಾದರೆ ಈ ನಿರ್ಧಾರಕ್ಕೆ ಕಾರಣ ಏನು? ಮುಂದೆ ಓದಿ.

ಭ್ರಷ್ಟಾಚಾರದ ಗಂಭೀರ ಆರೋಪ!
ಹೌದು, ಸೆರ್ಗೈ ಶೊಯಿಗು ಅವರನ್ನು ದಿಢೀರ್ ವ್ಲಾದಿಮಿರ್ ಪುಟಿನ್ ಕೆಳಗಿಳಿಸಿದ್ದಾರೆ. ಹೀಗೆ ಹೊಸ ರಕ್ಷಣಾ ಸಚಿವನ ನೇಮಕ ಆಗಿದೆ. ಯಾಕಂದ್ರೆ ಕಳೆದ ಕೆಲ ತಿಂಗಳಿಂದ, ಸೆರ್ಗೈ ಶೊಯಿಗು ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿತ್ತು. ಅಲ್ಲದೆ ರಷ್ಯಾ ಒಳಗೆ ದೊಡ್ಡ ದೊಂಬಿ ಏಳಲು ಇದೇ ಸೆರ್ಗೈ ಶೊಯಿಗು ಪರೋಕ್ಷ ಕಾರಣ ಎಂಬ ಆರೋಪವೂ ಇತ್ತು. ರಷ್ಯಾದಲ್ಲಿ ಸ್ವತಃ ರಷ್ಯಾದ ಖಾಸಗಿ ಸೇನೆ ತನ್ನ ದೇಶದ ವಿರುದ್ಧವೇ ಬಂಡಾಯ ಎದ್ದು ಗಲಾಟೆಯನ್ನೂ ಮಾಡಿತ್ತು. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಇದೀಗ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಅಮೆರಿಕಗೆ ಪರೋಕ್ಷ ಎಚ್ಚರಿಕೆ?
ರಷ್ಯಾದಲ್ಲಿ ಈ ಹಿಂದೆ ಖಾಸಗಿ ಸೇನೆ ದೊಂಬಿ ಎದ್ದು ಗಲಾಟೆ ಮಾಡಿದ್ದಾಗ, ಅದರ ಹಿಂದೆ ಅಮೆರಿಕ ಕೈವಾಡ ಇದೆ ಎಂಬ ಆರೋಪವನ್ನು ರಷ್ಯಾ ಮಾಡಿತ್ತು. ಅಲ್ಲದೆ ಈ ವಿಚಾರಕ್ಕೆ ಕಿರಿಕ್ ಕೂಡ ನಡೆದಿತ್ತು. ಹೀಗೆ ತಿಕ್ಕಾಟಗಳ ನಡುವೆ ಇದೀಗ ರಷ್ಯಾ ಅಧ್ಯಕ್ಷ ಪುಟಿನ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಹಾಲಿ ರಕ್ಷಣಾ ಸಚಿವನನ್ನು ಕೆಳಗಿಳಿಸಿ, ಉಕ್ರೇನ್ ಯುದ್ಧದಲ್ಲಿ ಬೇರೆ ಏನೋ ದೊಡ್ಡ ನಿರ್ಧಾರಕ್ಕೆ ಮುಂದಾಗಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬಂದಿವೆ ಇದು ಯುರೋಪ್ ಖಂಡದಲ್ಲಿ ಮತ್ತೊಂದು ಸುತ್ತಿನ ಆತಂಕಕ್ಕೆ ಕಾರಣವಾಗಿದೆ.












Click it and Unblock the Notifications