Airport: ಡ್ರೋನ್ ದಾಳಿ ಭೀತಿ, ವಿಮಾನ ನಿಲ್ದಾಣವೇ ಬಂದ್!

ಮಾಸ್ಕೋ: ಗಜ ಗಾತ್ರದ ಸೇನೆ ಇರುವ ರಷ್ಯಾ ಸೇನೆ ಇದೀಗ ಉಕ್ರೇನ್ ಕಂಡರೆ ಬೆಚ್ಚುತ್ತಿದೆ. ಅದರಲ್ಲೂ ಉಕ್ರೇನ್ ಹಾರಿಸುವ ಡ್ರೋನ್‌ಗಳಿಗೆ ರಷ್ಯಾ ಅಕ್ಷರಶಃ ನಲುಗಿ ಹೋಗಿದೆ. ಹೀಗೆ ಡ್ರೋನ್ ಹಾರಾಡುತ್ತಿವೆ ಎಂಬ ಭಯದಲ್ಲಿ ತನ್ನ ವಿಮಾನ ನಿಲ್ದಾಣವನ್ನೇ ರಷ್ಯಾ ಬಂದ್ ಮಾಡಿತ್ತು. ಆ ಘಟನೆಯ ಸಂಪೂರ್ಣ ಮಾಹಿತಿ ಇಲ್ಲಿದೆ, ಮುಂದೆ ಓದಿ.

ಉಕ್ರೇನ್‌ಗೆ ನ್ಯಾಟೋ ಹಾಗೂ ಅಮೆರಿಕ ಗಿಫ್ಟ್ ಕೊಟ್ಟಿರುವ ವಿನಾಶಕಾರಿ ಡ್ರೋನ್ ರಷ್ಯಾಗೆ ಭಯ ಹುಟ್ಟಿಸಿದೆ. ಈ ಪೈಕಿ ರಷ್ಯಾ ಅಧ್ಯಕ್ಷ ಪುಟಿನ್ ಮನೆ ಮೇಲೆಯೇ ಉಕ್ರೇನ್ ಡ್ರೋನ್ ದಾಳಿ ನಡೆಸಿತ್ತು. ಆದರೆ ಅದೃಷ್ಟ ಸರಿಯಾಗಿದ್ದ ಕಾರಣ ಪುಟಿನ್ ಅವರಿಗೆ ಏನೂ ಆಗದೆ ಬಚಾವ್ ಆಗಿದ್ದರು. ಹೀಗೆ ಮೇಲಿಂದ ಮೇಲೆ ಉಕ್ರೇನ್ ಡ್ರೋನ್ ಮೂಲಕ ಭೀಕರ ದಾಳಿ ಮುಂದುವರಿಸಿದ್ದು, ರಷ್ಯಾ ರಾಜಧಾನಿ ಮಾಸ್ಕೋಗೆ ಭಯ ಕಾಡುತ್ತಿದೆ. ಹೀಗಾಗಿ ವಿಮಾನ ನಿಲ್ದಾಣವನ್ನೇ ಬಂದ್ ಮಾಡಿ ವಿಮಾನಗಳ ಹಾರಾಟ ನಿಲ್ಲಿಸಿತ್ತು ರಷ್ಯಾ.

Russian capital Moscow in fear about Ukraine drones

ವಿಮಾನ ಹಾರಿದರೆ ಆಕಾಶದಲ್ಲೇ ಉಡೀಸ್!

ರಷ್ಯಾ ರಾಜಧಾನಿ ಮಾಸ್ಕೋ ಮೇಲೆ ಪದೇ ಪದೆ ಉಕ್ರೇನ್ ಡ್ರೋನ್ ದಾಳಿ ನಡೆಸುತ್ತಿರುವ ಕಾರಣ ಅಲ್ಲಿನ ಸೇನೆ ಅಲರ್ಟ್ ಆಗಿದೆ. ಇದೇ ರೀತಿ ಉಕ್ರೇನ್‌ ಡ್ರೋನ್‌ ಕಾಣಿಸಿದ ತಕ್ಷಣವೇ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕೋದ 2 ವಿಮಾನ ನಿಲ್ದಾಣವನ್ನ ಮುಚ್ಚಲಾಗಿತ್ತು. ಅಲ್ಲಿ ಯಾವುದೇ ವಿಮಾನ ಹಾರಾಡದಂತೆ ಖಡಕ್ ಎಚ್ಚರಿಕೆ ಕೊಡಲಾಗಿತ್ತು. ನುಕೊವೊ ಮತ್ತು ಡೊಮೊಡೆಡೊವೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಬಂದ್ ಆಗಿದ್ದವು. ಇಷ್ಟೆಲ್ಲ ಬೆಳವಣಿಗೆ ನಡುವೆ ಈಗ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿದೆ. ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗಿದ್ದು, ಮಾಸ್ಕೋ ಏರ್ಪೋರ್ಟ್ ಪರಿಸ್ಥಿತಿ ಸರಿದಾರಿಗೆ ಬಂದಿದೆ.

ರಷ್ಯಾ ಅಧ್ಯಕ್ಷರ ಕೊಲೆಗೂ ಸ್ಕೆಚ್?

ಕಳೆದ ಮೇ ತಿಂಗಳಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರ ಮನೆ ಮೇಲೆ ಉಕ್ರೇನ್ ಡ್ರೋನ್‌ಗಳ ಮೂಲಕ ದಾಳಿಗೆ ಯತ್ನಿಸಿದ್ದ ಆರೋಪ ಕೇಳಿಬಂದಿತ್ತು. ಪುಟಿನ್ ಕ್ರೆಮ್ಲಿನ್ ಮನೆಯ ಮೇಲೆ ಶಸ್ತ್ರಾಸ್ತ್ರ ತುಂಬಿಕೊಂಡ 2 ಡ್ರೋನ್‌ ಬರುವುದನ್ನ ಗಮನಿಸಿದ ತಕ್ಷಣ ರಷ್ಯಾ ಸೇನೆ ಅವುಗಳನ್ನ ಹೊಡೆದು ಉರುಳಿಸಿತ್ತು. ತಕ್ಷಣ ಅಗತ್ಯ ಕ್ರಮಕೈಗೊಂಡ ಹಿನ್ನೆಲೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರಾಣಾಪಾಯದಿಂದ ಪಾರಾಗಿದ್ದರು. ಅಷ್ಟರಲ್ಲಿ ದಾಳಿ ನಡೆಸಿದ್ದ ಎರಡು ಡ್ರೋನ್ ಪುಟಿನ್ ಅವರ ಸರ್ಕಾರಿ ನಿವಾಸದ ಗುಮ್ಮಟದ ಮೇಲೆ ಬಾಂಬ್ ದಾಳಿ ಮಾಡಿದ್ದವು.

Russian capital Moscow in fear about Ukraine drones

ಉಕ್ರೇನ್‌ಗೆ ಡ್ರೋನ್ ಕೊಟ್ಟಿದ್ದು ಯಾರು?

ರಷ್ಯಾ ಯುದ್ಧ ಆರಂಭಿಸಿದ ನಂತರ ಉಕ್ರೇನ್ ಪರಿಸ್ಥಿತಿ ಬೀದಿಪಾಲಾಗಿದೆ. ಆದರೂ ಹೀಗೆ ಉಕ್ರೇನ್ ಕೈಗೆ ಅತ್ಯಾಧುನಿಕ ಡ್ರೋನ್‌ಗಳು ಬಂದಿದ್ದು ಹೇಗೆ? ಅನ್ನೋ ಪ್ರಶ್ನೆ ಸಹಜವಾಗಿ ಕಾಡುತ್ತದೆ. ಆದರೆ ಉಕ್ರೇನ್‌ಗೆ ಹೀಗೆ ಡ್ರೋನ್ ಸಿಗಲು ಕಾರಣ ಅಮೆರಿಕ. ಏಕೆಂದರೆ ತನ್ನ ಶತ್ರು ರಷ್ಯಾ ವಿರುದ್ಧ ಅಮೆರಿಕ ಪರೋಕ್ಷ ಯುದ್ಧ ಸಾರಿದೆ. ಉಕ್ರೇನ್ ಬೆಂಬಲಕ್ಕೆ ನಿಂತು ಯುದ್ಧಕ್ಕೆ ಸಹಾಯ ಮಾಡುತ್ತಿದೆ. ಹೀಗೆ ಅತ್ಯಾಧುನಿಕ ಡ್ರೋನ್‌ಗಳನ್ನ ನ್ಯಾಟೋ ಹಾಗೂ ಅಮೆರಿಕ ನಾಯಕರು ಉಕ್ರೇನ್ ಸೇನೆಗೆ ಗಿಫ್ಟ್ ಆಗಿ ಕೊಟ್ಟಿದ್ದಾರೆ. ಇದು ರಷ್ಯಾ ಸೇನೆ ನಿದ್ದೆ ಹಾರಿ ಹೋಗುವಂತೆ ಮಾಡಿದೆ.

ಉಕ್ರೇನ್ ವಾಯು ರಕ್ಷಣೆಗಾಗಿ ಎಫ್‌-16 ಯುದ್ಧ ವಿಮಾನ ಕೊಡಿ ಅಂತಾ ಝೆಲೆನ್‌ಸ್ಕಿ ಬೇಡಿಕೆ ಸಲ್ಲಿಸುತ್ತಿದ್ದರು. ಯುದ್ಧ ಆರಂಭವಾದ ದಿನದಿಂದಲೂ ಈ ಡಿಮ್ಯಾಂಡ್ ಇತ್ತು. ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ರಾಷ್ಟ್ರಗಳು ಈ ಬೇಡಿಕೆಗೆ ಅಸ್ತು ಎನ್ನಲು ಬಹಳ ತಡ ಮಾಡಿದ್ದರು. ಆದರೆ ಕಳೆದ ಶುಕ್ರವಾರ ಅಂತಿಮವಾಗಿ ಅಮೆರಿಕ ಗ್ರೀನ್ ಸಿಗ್ನಲ್ ನೀಡಿ ಯುದ್ಧ ವಿಮಾನಗಳನ್ನ ಪೂರೈಕೆಗೆ ಮುಂದಾಗಿತ್ತು. ಈ ಮೂಲಕ ಡ್ರೋನ್‌ಗಳ ಜೊತೆಗೆ ಉಕ್ರೇನ್ ಸೇನೆಗೆ ಜಗತ್ತಿನ ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನಗಳು ಕೂಡ ಬಂದು ಸೇರುತ್ತಿವೆ. ಹೀಗಾಗಿ ರಷ್ಯಾ & ಉಕ್ರೇನ್ ಯುದ್ದ ಮತ್ತಷ್ಟು ಭೀಕರವಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+