ಸೈಲೆಂಟ್ ಆಗಿದ್ರೆ ಸರಿ, ಇಲ್ಲ ಅಂದ್ರೆ ಫಿನಿಶ್: ಪುಟಿನ್ ವಾರ್ನಿಂಗ್ ಹಿಂಗಿತ್ತು!
ರಷ್ಯಾ & ಅಮೆರಿಕ ಇಬ್ಬರೂ ಪರಮ ಶತ್ರುಗಳು, ಇಬ್ಬರ ನಡುವೆ ಸ್ನೇಹ ಮೂಡಿಸಲು ಈಗ ಸಾಕಷ್ಟು ದೇಶಗಳು ಪ್ರಯತ್ನ ಮಾಡಿ ಸುಸ್ತಾಗಿ ಕೂತಿವೆ. ಅದರಲ್ಲೂ ಕಳೆದ 20 ವರ್ಷದಲ್ಲಿ ರಷ್ಯಾ & ಅಮೆರಿಕ ನಡುವಿನ ದ್ವೇಷ ಡಬಲ್ ಆಗಿದೆ. ಹೀಗಿದ್ದಾಗಲೇ ರಷ್ಯಾ & ಉಕ್ರೇನ್‌ನ ನಡುವೆ ಯುದ್ಧ ಆರಂಭ ಆಗಿದ್ದು ಕಿತ್ತಾಡುತ್ತಿದ್ದಾರೆ. ಅಮೆರಿಕ ಉಕ್ರೇನ್‌ಗೆ ಶಸ್ತ್ರಾಸ್ತ್ರ ಕೊಟ್ಟು ಪರೋಕ್ಷವಾಗಿ ರಷ್ಯಾ ವಿರುದ್ಧ ಯುದ್ಧ ಸಾರಿದೆ ಎಂಬ ಆರೋಪಗಳ ನಡುವೆ ಈಗ ರಷ್ಯಾದ ಅಧ್ಯಕ್ಷ ಪುಟಿನ್ ಏನ್ ಹೇಳಿದ್ದಾರೆ ಗೊತ್ತಾ?
ಹೌದು, ಉಕ್ರೇನ್‌ಗೆ ವೆಪನ್ಸ್ ಅಂದ್ರೆ ಅಸ್ತ್ರಗಳನ್ನು ಪೂರೈಕೆ ಮಾಡುತ್ತಿದ್ದ ಅಮೆರಿಕ ಇದೀಗ ದೊಡ್ಡ ತಪ್ಪು ಮಾಡಿದೆ ಅನಿಸುತ್ತಿದೆ. ಯಾಕಂದ್ರೆ ಇಷ್ಟುದಿನ ಅಮೆರಿಕ ಕೊಡುತ್ತಿದ್ದ ಪ್ರತಿ ಶಸ್ತ್ರಾಸ್ತ್ರಕ್ಕೆ ಲೆಕ್ಕ ಇಡುತ್ತಿತ್ತು. ಹಾಗೇ ಅಮೆರಿಕದಿಂದ ಬರುವ ಶಸ್ತ್ರಾಸ್ತ್ರ ಬಳಸಿ ರಷ್ಯಾ ಮೇಲೆ ನೇರ ದಾಳಿ ಮಾಡುವಂತೆ ಇಲ್ಲ, ಹಾಗೇ ಈ ವಿಚಾರದಲ್ಲಿ ಉಕ್ರೇನ್ ತಮ್ಮ ದೇಶ ರಕ್ಷಿಸಲು ಮಾತ್ರ ಅಮೆರಿಕದ ಶಸ್ತ್ರಾಸ್ತ್ರ ಬಳಸಬೇಕು ಎಂಬ ನಿಯಮ ಇತ್ತು.

ಆದ್ರೆ ಇದೀಗ ನಿಯಮ ಬದಲಾವಣೆ ಮಾಡಿರುವ ಅಮೆರಿಕ, ಉಕ್ರೇನ್‌ಗೆ ವಿಶೇಷ ಅನುಮತಿ ನೀಡಿದೆ. ಆ ಪ್ರಕಾರ ರಷ್ಯಾ ಮೇಲೆ ನೇರವಾಗಿ ಅಮೆರಿಕದ ಅಸ್ತ್ರಗಳನ್ನ ಬಳಸಿ ದಾಳಿ ಮಾಡಲು ಅಸ್ತು ಎಂದಿದೆ. ಇದೇ ವಿಚಾರ ಇದೀಗ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನ ಕೆಂಡವಾಗಿಸಿದೆ. ಅಲ್ಲದೆ ರಷ್ಯಾ ಬಳಿ ಇರುವ ಭಯಾನಕ ಅಸ್ತ್ರಗಳನ್ನು ಬಳಸಿ ದಾಳಿ ಮಾಡುವ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ ಪುಟಿನ್.
ಪುಟಿನ್ ಮಾತಿನಿಂದ ಹೆಚ್ಚಾಯ್ತು ಭಯ!
ಅಮೆರಿಕ ಈ ರೀತಿ ತಮ್ಮ ಶತ್ರು ದೇಶಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡಿ, ರಷ್ಯಾ ವಿರುದ್ಧ ದಾಳಿ ಮಾಡಲು ಅನುಮತಿ ನೀಡಿರುವ ಬಗ್ಗೆ ಪುಟಿನ್ ಪ್ರತಿಕ್ರಿಯೆ ನೀಡಿದ್ದಾರೆ. ರಷ್ಯಾ ಅಧ್ಯಕ್ಷರಾದ ವ್ಲಾದಿಮಿರ್ ಪುಟಿನ್ ಅವರು ಹೇಳಿರುವಂತೆ, ಅಮೆರಿಕ ಇದೇ ರೀತಿ ಕಿರಿಕ್ ಮಾಡುತ್ತಿದ್ದರೆ. ಮುಂದಿನ ದಿನಗಳಲ್ಲಿ ರಷ್ಯಾ ಕೂಡ ಕಠಿಣ ಕ್ರಮ ಕೈಗೊಳ್ಳಲಿದೆ. ಆ ಪ್ರಕಾರ ಪಾಶ್ಚಿಮಾತ್ಯ ದೇಶಗಳ ಮೇಲೆ ದಾಳಿ ಮಾಡಲು ಖುದ್ದು ರಷ್ಯಾ ವೆಪನ್ಸ್ ನೀಡಲಿದೆ ಎಂದಿದ್ದಾರೆ. ಹೀಗಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕ್ರಮಕ್ಕೆ ಸ್ವತಃ ಅಮೆರಿಕದಲ್ಲೇ ಆಕ್ರೋಶ ವ್ಯಕ್ತವಾಗುತ್ತಿದೆ. ಮತ್ತೊಂದು ಕಡೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಎಚ್ಚರಿಕೆ ಭಯ ಹುಟ್ಟಿಸಿದೆ.
3ನೇ ಮಹಾಯುದ್ಧ ಫಿಕ್ಸ್?
ರಷ್ಯಾ & ಉಕ್ರೇನ್ ಇಬ್ಬರೂ ಒಬ್ಬರು ಮತ್ತೊಬ್ಬರನ್ನ ನಾಶ ಮಾಡುವ ಹಂತಕ್ಕೂ ಬಂದಿದ್ದಾರೆ. 2 ವರ್ಷಗಳ ಹಿಂದೆ ಶುರುವಾದ ರಷ್ಯಾ & ಉಕ್ರೇನ್ ಯುದ್ಧ, ಜಗತ್ತಿನ ಬೆನ್ನಿಗೆ ಚೂರಿ ಹಿರಿದಂತೆ ಕಾಣುತ್ತಿದೆ. ಯಾಕಂದ್ರೆ ಪ್ರತಿದಿನ ಒಂದಲ್ಲ ಒಂದು ಸಮಸ್ಯೆಯ ಈ ಯುದ್ಧವು ಸೃಷ್ಟಿ ಮಾಡ್ತಿದೆ. ಹೀಗೆ ಪರದಾಟ ಕೂಡ ಜಾಸ್ತಿ ಆಗಿದ್ದು ಯಾವ ಕ್ಷಣದಲ್ಲಿ ಏನಾಗುತ್ತೆ? ಅನ್ನೋದೇ ಗೊತ್ತಾಗ್ತಿಲ್ಲ. ವಿಶ್ವಸಂಸ್ಥೆ ಕೂಡ ಯುದ್ಧ ನಿಲ್ಲಿಸುವ ಪ್ರಯತ್ನ ಮಾಡಿ ಸೋತು ಹೋಗಿದೆ. ಇಷ್ಟೆಲ್ಲದರ ಮಧ್ಯೆ ಈಗ ಅಮೆರಿಕ ನೀಡಿರುವ ವಿಶೇಷ ಅನುಮತಿ ಉಕ್ರೇನ್‌ಗೆ ಶಕ್ತಿ ನೀಡಿದ್ದರೆ, ರಷ್ಯಾ ಅಧ್ಯಕ್ಷರ ಪಿತ್ತ ನೆತ್ತಿಗೇರಿಸಿದೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ












Click it and Unblock the Notifications