ಹೊಸ ವರ್ಷಕ್ಕೆ ಯುದ್ಧ ನಿಲ್ಲಿಸಲು ರಷ್ಯಾ & ಉಕ್ರೇನ್ ನಿರ್ಧಾರ?
ಯುರೋಪ್ ಅಂದ್ರೆ ಅಭಿವೃದ್ಧಿ, ಯುರೋಪ್ ದೇಶಗಳಲ್ಲಿ ಹೋಗಿ ಸೆಟಲ್ ಆಗಿಬಿಟ್ಟರೆ ಈ ಜನ್ಮದಲ್ಲಿ ನೆಮ್ಮದಿಯಾಗಿ ಇದ್ದು ಬಿಡಬಹುದು ಅನ್ನೋ ಮಾತು ಇತ್ತು. ಆದರೆ ಈಗ ಅದೇ ಯುರೋಪ್ ಹಾಳು ಕೊಂಪೆಯಾಗಿದ್ದು & ಯುರೋಪ್ ದೇಶಗಳಲ್ಲಿ ಸಾವಿರಾರು ಸಮಸ್ಯೆಗಳು ಕಾಡುತ್ತಿವೆ. ಹೀಗಿದ್ದಾಗ ರಷ್ಯಾ & ಉಕ್ರೇನ್ ಯುದ್ಧ ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ!
ಹೌದು, ರಷ್ಯಾ & ಉಕ್ರೇನ್ ವಾರ್ ಶುರುವಾಗಿ 1,040 ದಿನಗಳು ಕಳೆದಿದೆ. ಇನ್ನೇನು ಕೆಲವು ದಿನಗಳಲ್ಲಿ ಬರೋಬ್ಬರಿ 3 ವರ್ಷ ಪೂರೈಸಲಿದೆ ರಷ್ಯಾ & ಉಕ್ರೇನ್ ಯುದ್ಧ. ಹೀಗಿದ್ದಾಗಲೇ ಯುದ್ಧ ನಿಲ್ಲಿಸಬೇಕು ಎಂಬ ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಆದರೆ ಯಾವುದು ಕೂಡ ವರ್ಕೌಟ್ ಆಗುತ್ತಿಲ್ಲ. ಇಷ್ಟೆಲ್ಲಾ ಘಟನೆ ನಡುವೆ, ಅಮೆರಿಕದಲ್ಲಿ ಹೊಸ ಸರ್ಕಾರವು ಅಸ್ತಿತ್ವಕ್ಕೆ ಬರಲು ಕ್ಷಣಗಣನೆ ಆರಂಭವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಡೊನಾಲ್ಡ್ ಟ್ರಂಪ್ ಅವರ ನೇತೃತ್ವದ ಸರ್ಕಾರ ಆಡಳಿತಕ್ಕೆ ಬರಲಿದ್ದು, ಅದಕ್ಕಿಂತ ಮೊದಲೇ ಹೊಸ ತಲ್ಲಣವು ಸೃಷ್ಟಿಯಾಗಿದೆ!

ಹೊಸ ವರ್ಷಕ್ಕೆ ಯುದ್ಧ ನಿಲ್ಲುತ್ತಾ?
2024 ಇನ್ನೇನು ಮುಗಿದು ಹೋಗಲಿದ್ದು, 2025ರ ಹೊಸ ವರ್ಷ ಅಗಮನಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಇಂತಹ ಸಮಯದಲ್ಲೇ ಹೊಸ ಉತ್ಸಾಹ ಕೂಡ ಮೂಡಿದ್ದು, ರಷ್ಯಾ & ಉಕ್ರೇನ್ ಯುದ್ಧ ನಿಲ್ಲುವ ನಿರೀಕ್ಷೆಗಳು ಬೆಟ್ಟದಷ್ಟು ಎತ್ತರಕ್ಕೆ ಬೆಳೆದಿವೆ. ಜಾಗತಿಕ ಮಟ್ಟದಲ್ಲಿ ಇದೇ ಯುದ್ಧ ದೊಡ್ಡ ದೊಡ್ಡ ಸಮಸ್ಯೆ ಸೃಷ್ಟಿ ಮಾಡಿದ್ದು, ರಷ್ಯಾ & ಉಕ್ರೇನ್ ಯುದ್ಧವು ನಿಲ್ಲಬೇಕು ಎಂಬ ಒತ್ತಡ ಜಾಸ್ತಿ ಆಗುತ್ತಿದೆ. ಮತ್ತೊಂದ್ಕಡೆ, ಹೊಸ ವರ್ಷಕ್ಕೆ ಯುದ್ಧ ನಿಲ್ಲುವ ಮಾತುಗಳು ಕೇಳಿ ಬಂದಿವೆ.
2022ರಲ್ಲಿ ಶುರುವಾಗಿತ್ತು ಡೆಡ್ಲಿ ವಾರ್!
ಒಟ್ನಲ್ಲಿ ಯುದ್ಧ ಒಂದು ಏನೆಲ್ಲಾ ಅವಾಂತರ ಸೃಷ್ಟಿ ಮಾಡಬಹುದು ಅನ್ನೋದನ್ನ ಇದೀಗ ಆಧುನಿಕ ಜಗತ್ತಿನಲ್ಲಿ ಮನುಷ್ಯರು ಅದ್ಭುತವಾಗಿ ಕಲಿತಿದ್ದಾರೆ. 2022 ರಲ್ಲಿ ಆರಂಭವಾಗಿದ್ದ ರಷ್ಯಾ & ಉಕ್ರೇನ್ ಯುದ್ಧವು ಆರ್ಥಿಕವಾಗಿ ಸೇರಿದಂತೆ ನೂರಾರು ರೀತಿಯ ಸಮಸ್ಯೆ ಸೃಷ್ಟಿಸಿ ಎಲ್ಲವನ್ನೂ ನಾಶ ಮಾಡಿ ಹಾಕಿರುವ ಆರೋಪ ಇದೆ.
ಹೀಗಾಗಿಯೇ, ಡೊನಾಲ್ಡ್ ಟ್ರಂಪ್‌ಗೆ ಕೂಡ ಈ ಯುದ್ಧವನ್ನು ನಿಲ್ಲಿಸುವ ಸವಾಲು ಇದೆ. ತಾವು ಅಧಿಕಾರಕ್ಕೆ ಬಂದ ಮುಂದಿನ 24 ಗಂಟೆ ಒಳಗಾಗಿ ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸುವ ಚಾಲೆಂಜ್ ಮಾಡಿದ್ದಾರೆ ಡೊನಾಲ್ಡ್ ಟ್ರಂಪ್ ಅವರು. ಈ ಕಾರಣಕ್ಕೆ ಕ್ಷಣಕ್ಷಣಕ್ಕೂ ಈ ತಿಕ್ಕಾಟ ರೋಚಕ ತಿರುವು ಪಡೆಯುವ ಮುನ್ಸೂಚನೆಯೂ ಈಗ ಸಿಗುತ್ತಿದೆ.












Click it and Unblock the Notifications